ಅಕ್ರಮ ಗಾಂಜಾ ಸಾಗಾಣಿಕೆ, ಆರೋಪಿಗೆ 10 ವರ್ಷ ಸಜೆ 1 ಲಕ್ಷ ರೂಪಾಯಿ ದಂಡ  

ಹಂಚಿಕೊಳ್ಳಿ
WhatsApp Facebook X Telegram
Daylight Burglary
Daylight Burglary

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

2021 ರಲ್ಲಿ ಕಾನೂನು ಬಾಹಿರವಾಗಿ ಒಣ ಗಾಂಜಾವನ್ನು ಸಾಗಣೆ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದ  ಆರೋಪಿಗೆ  ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಸಜೆ ಹಾಗೂ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

ಈ ಹಿಂದೆ 2021 ರಲ್ಲಿ ಮುರುಗು ಎಲ್‌ ಬಿನ್‌ ಲಕ್ಷ್ಮಣ ಎಂಬುವ ವ್ಯಕ್ತಿ ಓಮಿನಿ ವ್ಯಾನ್‌ ಮೂಲಕ ಆಂದ್ರದ ರಾಜಮುಂಡ್ರಿಯಿಂದ 50 ಕೆಜಿ 430 ಗ್ರಾಂ ತೂಕದ ಒನ ಗಾಂಜವನ್ನು ಕಾನೂನು ಬಾಹಿರವಾಗಿ ಸಾಗಣೆ ಮಾಡುತ್ತಿದ್ದರು. ಆವೇಳೆ ಆತನನ್ನು ಸೊರಬ ವಲಯ ಅಬಕಾರಿ ನಿರೀಕ್ಷಕರ ತಂಡವು ಸೆರೆಹಿಡಿದು ಪ್ರಕರಣ ದಾಖಲಿಸಿಕೊಂಡು,  ಕಲಂ: 8(ಸಿ), 20(ii)(ಸಿ), 20(ಬಿ), 25 ಎನ್.ಡಿ.ಪಿ.ಎಸ್. ಕಾಯ್ದೆ 1985 ರಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಂತರ ಈ ಪ್ರಕರಣವನ್ನು ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷಿ ಮತ್ತು ಇನ್ನಿತರೆ ಪೂರಕ ಸಾಕ್ಷ್ಯಾಧಾರಗಳಿಂದ ಹಾಗೂ ಸರ್ಕಾರದ ಪರ ಅಭಿಯೋಜಕರು ಮಂಡಿಸಿದ ವಾದವನ್ನು ಪುರಸ್ಕರಿಸಿದಾಗ ಆರೋಪಿಯ ಮೇಲಿನ ಆರೋಪವು ದೃಡಪಟ್ಟಿದೆ. ಆದ್ದರಿಂದ ಈ ಅಪರಾಧಕ್ಕೆ 10 ವರ್ಷಗಳ ಕಠಿಣ ಕಾರಾಗೃಹ ವಾಸ ಸಜೆ ಮತ್ತು ರೂ. 1.00 ಲಕ್ಷ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 2 ವರ್ಷ ಹೆಚ್ಚುವರಿ ಸಾಧಾರಣ ಸಜೆಯನ್ನು ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯಕ್‌ರವರು ಏ.04 ರಂದು ತೀರ್ಪು ನೀಡಿ ಆದೇಶಿಸಿದ್ದಾರೆ.

SUMMARY | The Shivamogga Principal District and Sessions Court has sentenced the accused to 10 years in jail and imposed a fine of Rs 1 lakh on him for illegally transporting dry ganja in 2021.

KEYWORDS |  Shivamogga, Sessions Court, ganja, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor