ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಧು ಬಂಗಾರಪ್ಪ | ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
madhu bangarappa today madhu bangarppa in shivamoggamadhu Bangarappa madhu bangarappa
madhu bangarappa tour to shivamogga

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

ಶಿವಮೊಗ್ಗ | ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಶಾಟ್‌ ಪುಟ್‌ ಎಸೆಯುವ ಮೂಲಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ  ಚಾಲನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ  ಶಿವಮೊಗ್ಗ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏಪ್ರಿಲ್‌ 05 ಹಾಗೂ 06 ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಎರೆಡು ದಿನ ಜಿಲ್ಲಾಧಿಕಾರಿ ಸರ್ಕಾರಿ ನೌಕರರಿಗೆ ರಜೆಯನ್ನು ಸಹ ಘೊಷಿಸಿದ್ದಾರೆ. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ನೆರವೇರಿದರು. ಹಾಗೆಯೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಶಾಸಕ ಎಸ್‌ ಎನ್‌ ಚೆನ್ನಬಸಪ್ಪ ವಹಿಸಿದರು.

ಶಿಕ್ಷಣ ಸಚಿವ ಮಧುಬಂಗಾಪ್ಪ ಮಾತನಾಡಿ ಕ್ರೀಡೆ ಮತ್ತು ಸಂಸ್ಕೃತಿಗೆ ಹೆಸರಾಗಿರುವ ಶಿವಮೊಗ್ಗದಲ್ಲಿ ಈ ಹಿಂದೆ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆದಿತ್ತು.  ಆಗ ಎಸ್‌ ಎಂ ಕೃಷ್ಣರವರ ಸರ್ಕಾರ ಕ್ರೀಡಾ ಕೂಟವನ್ನು ನಡೆಸಲು 5 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಆದರೆ ಕ್ರೀಡಾ ಕೂಟವನ್ನು ನಡೆಸಲು 5 ಲಕ್ಷ ಸಾಕಾಗುವುದಿಲ್ಲ ಎಂದು ಅವರು ಕ್ರೀಡಾಂಗಣಕ್ಕೆ ಬಂದು ಕುಳಿತರು. ಆಗ 70 ಲಕ್ಷಕ್ಕೂ ಹೆಚ್ಚು ರೂಪಾಯಿ ಕಲೆಕ್ಷನ್ ಆಯಿತು. ಆದ್ದರಿಂದ ಅದ್ದೂರಿಯಾಗಿ ಕ್ರೀಡಾ ಕೂಟವನ್ನು ನಡೆಸಲಾಯಿತು ಎಂದು ಅಂದಿನ ವಿಚಾರವನ್ನು ನೆನೆಸಿಕೊಂಡರು.

ನಂತರ ಶಿವಮೊಗ್ಗದಲ್ಲಿ ಈದ್ಗಾ ಮೈದಾನದ ವಿಚಾರವಾಗಿ ಮಾತನಾಡಿದ ಅವರು ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಇದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದಷ್ಟೇ ಹೇಳಿದರು. 

SUMMARY | Education and Literacy Minister Madhu Bangarappa inaugurated the Karnataka State Government Employees’ Sports and Cultural Competitions at the Nehru Stadium in Shivamogga by throwing shot put.

KEYWORDS | Madhu Bangarappa, Government Employees, Nehru Stadium, Shivamogga,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor