ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆ | ಪರಿಸ್ಥಿತಿ ನೋಡಿ ಆತಂಕ & ಆಕ್ರೋಶಗೊಂಡ ಆರಗ ಜ್ಞಾನೇಂದ್ರ

ಹಂಚಿಕೊಳ್ಳಿ
WhatsApp Facebook X Telegram
ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆ | ಪರಿಸ್ಥಿತಿ ನೋಡಿ ಆತಂಕ & ಆಕ್ರೋಶಗೊಂಡ ಆರಗ ಜ್ಞಾನೇಂದ್ರ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಅಂತಾ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆದಿನ ಜೆಸಿ ಆಸ್ಪತ್ರೆಗೆ ಭೇಟಿಕೊಟ್ಟ ಅವರು ಜಿಲ್ಲಾಡಳಿತ ಮುಂಜಾಗ್ರತ ಕ್ರಮಕೈಗೊಳ್ಳುತ್ತಿಲ್ಲ. ತಾಲ್ಲೂಕುನಲ್ಲಿ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೂಡಲೇ ಆರೋಗ್ಯ ಇಲಾಖೆ ಜಿಲ್ಲಾಡಳಿತ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು

ಕಟ್ಟೆಹಕ್ಕಲು, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಎಫ್‌ಡಿ ಪ್ರಕರಣ ಹೆಚ್ಚಾಗಿದೆ ಎಂದ ಅವರು, ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಒದಗಿಸಲು ಸೂಕ್ತ ಸೌಲಭ್ಯಗಳಿಲ್ಲ ಎಂದ ಆರಗ ಜ್ಞಾನೇಂದ್ರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳದಿದ್ದರೇ ಆರೋಗ್ಯ ಸಚಿವರನ್ನ ಸದನ ಕಲಾಪದಲ್ಲಿ ಪ್ರಶ್ನಿಸಿ ಸಚಿವರಿಂದಲೇ ಜನರ ರಕ್ಷಣೆಗೆ ಮುಂದಾಗುತ್ತೇನೆ ಎಂದರು. 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor