BREAKING | ಬೋರ್‌ವೆಲ್‌ ಲಾರಿ ಡಿಕ್ಕಿಯಾಗಿ ಸಾಗರದಲ್ಲಿ ಎಕ್ಸ್‌ಲ್‌ನಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು

ಹಂಚಿಕೊಳ್ಳಿ
WhatsApp Facebook X Telegram
BREAKING  | ಬೋರ್‌ವೆಲ್‌ ಲಾರಿ ಡಿಕ್ಕಿಯಾಗಿ ಸಾಗರದಲ್ಲಿ ಎಕ್ಸ್‌ಲ್‌ನಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಸಾವು

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಎಕ್ಸ್‌ಲ್‌ನಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೋರ್‌ವೆಲ್‌ ಕೊರೆಯುವ ಸಾಮಗ್ರಿ ಸಾಗಿಸುವ ಲಾರಿ ಚಕ್ರದಡಿಯಲ್ಲಿ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮಹಿಳೆಯ ತಲೆ ಛಿದ್ರವಾಗಿ ಟಯರ್‌ನಡಿಯಲ್ಲಿ ಅಪ್ಪಚ್ಚಿ ಆಗಿದೆ. 

ಹೆಗ್ಗೋಡು ಸಮೀಪ ಈ ಘಟನೆ ನಡೆದಿದ್ದು, ಮಹಿಳೆ ಕುರುವಂತೆ ಮೂಲದವರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor