ಹೈಕೋರ್ಟ್‌ LIVE ನಂತೆ, ಶಿವಮೊಗ್ಗ ಕೋರ್ಟ್‌ನ ಕಲಾಪವನ್ನು ಯುಟ್ಯೂಬ್‌ನಲ್ಲಿ ನೋಡಬಹುದು | ಇಲ್ಲಿದೆ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
ಹೈಕೋರ್ಟ್‌ LIVE ನಂತೆ, ಶಿವಮೊಗ್ಗ ಕೋರ್ಟ್‌ನ ಕಲಾಪವನ್ನು ಯುಟ್ಯೂಬ್‌ನಲ್ಲಿ ನೋಡಬಹುದು | ಇಲ್ಲಿದೆ ಮಾಹಿತಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 8, 2025 ‌‌ ‌

ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳು ಹೇಗೆ ಜಡ್ಜ್‌ಮೆಂಟ್‌ ನೀಡುತ್ತಾರೆ, ಅವರು ಆಡುವ ಮಾತುಗಳು ಹೇಗಿರುತ್ತದೆ? ನ್ಯಾಯಾಲಯದ ಕಲಾಪಗಳು ಹೇಗೆ ನಡೆಯುತ್ತವೆ ಎಂಬುದನ್ನು YOUTUBE ನಲ್ಲಿ ನೋಡಿರುತ್ತೀರಿ. ಇದೀಗ ಅದೇ ರೀತಿಯಲ್ಲಿ ಶಿವಮೊಗ್ಗ ಕೋರ್ಟ್‌ನ ಕಲಾಪಗಳು ಲೈವ್‌ ಆಗಿ ಯ್ಯೂಟೂಬ್‌ನಲ್ಲಿ ವೀಕ್ಷಿಸಬಹುದು. ಇದಕ್ಕಾಗಿ ಸಕಲ ವ್ಯವಸ್ಥೆಗಳು ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ಲೈವ್‌ ಸ್ಟ್ರೀಮಿಂಗ್‌ ಆರಂಭಿಸಲಾಗುವುದು ಎಂದು ಶಿವಮೊಗ್ಗ ಕೋರ್ಟ್‌ನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನ್ಯಾ. ಮಂಜುನಾಥ್‌ ನಾಯಕ್‌ ತಿಳಿಸಿದರು. 

ಹೇಗಿರಲಿದೆ ಲೈವ್‌ LIVE

ಹೈಕೋರ್ಟ್‌ನ ಕಲಾಪಗಳಂತೇ ಬೇರೆ ಬೇರೆ ಪ್ಲೇಪಟ್ಟಿಗಳಲ್ಲಿ ಲೈವ್‌ ವಿಡಿಯೋ ಅಪ್‌ಲೋಡ್‌ ಆಗಲಿದೆ. ಆದರೆ ಶಿವಮೊಗ್ಗ ಕೋರ್ಟ್‌ ಸಂಕೀರ್ಣದಲ್ಲಿರುವ ಎಲ್ಲಾ ಕೋರ್ಟ್‌ಗಳ ಕಲಾಪಗಳು ಲೈವ್‌ ಆಗಿ ನೋಡಲು ಸಾಧ್ಯವಿಲ್ಲ.  ಮುಖ್ಯವಾಗಿ ಶಿವಮೊಗ್ಗ ನ್ಯಾಯಾಲಯದ ಮೂರು ಕೋರ್ಟ್‌ ಹಾಲ್‌ಗಳಲ್ಲಿನ ವಿಚಾರಣೆಯನ್ನು ನೇರ ಪ್ರಸಾರದಲ್ಲಿ ನೋಡಬಹುದು. 

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿ, ಮುಖ್ಯ ನ್ಯಾಯಿಕ ನ್ಯಾಯಾಧೀಶರ ಹಾಲ್‌ ಮತ್ತು ಪ್ರಧಾನ ಸಿವಿಲ್‌ ನ್ಯಾಯಾಧೀಶರ ಹಾಲ್‌ನ ಕಲಾಪಗಳನ್ನು ಲೈವ್‌ ಆಗಿ ಜನರು ನೋಡಬಹುದಾಗಿದೆ. 

ಲೈವ್‌ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ, ಈಗಾಗಲೇ ಕ್ಯಾಮರಾ, ಸ್ಪೀಕರ್‌, ಟಿವಿ ಮತ್ತು ಲೈವ್‌ ಸ್ಟ್ರೀಮಿಂಗ್‌ ಸಾಪ್ಟ್‌ವೇರ್‌ಗಳನ್ನು ಅಳವಡಿಸಲಾಗಿದೆ. 

ನಿನ್ನೆದಿನ ಈ ಬಗ್ಗೆ ಮಾತನಾಡಿದ ನ್ಯಾಯಾಧೀಶ ನ್ಯಾ. ಮಂಜುನಾಥ್‌ ನಾಯಕ್‌ ವ್ಯವಸ್ಥೆಗಳನ್ನು ಈಗಾಗಲೇ ಸಜ್ಜುಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಲೈವ್‌ ಸ್ಟ್ರೀಮಿಂಗ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಜನರು ವೀಕ್ಷಿಸಲು ಸಾದ್ಯವಾಗಲಿದೆ ಎಂದು ತಿಳಿಸಿದರು. 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor