ಬಿಜೆಪಿ ಪರೀಕ್ಷೆಯಲ್ಲಿ ಕಾಂಗ್ರೆಸ್‌ ಫೇಲ್‌ ? ಮಾರ್ಕ್‌ ಕಾರ್ಡ್‌ ರಿಲೀಸ್‌ ಮಾಡಿದ ಕೇಸರಿ ಪಡೆ! ಏನಿದೆ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
ಬಿಜೆಪಿ ಪರೀಕ್ಷೆಯಲ್ಲಿ ಕಾಂಗ್ರೆಸ್‌ ಫೇಲ್‌ ?  ಮಾರ್ಕ್‌ ಕಾರ್ಡ್‌ ರಿಲೀಸ್‌ ಮಾಡಿದ ಕೇಸರಿ ಪಡೆ! ಏನಿದೆ ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 21, 2025

ಕನ್ನಡಿಗರ ಹಿತ ಕಾಯುವಲ್ಲಿ ಹಾಗೂ ಕರ್ನಾಟಕವನ್ನು ಅಭಿವೃದ್ದಿ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವ್ಯಂಗ್ಯವಾಗಿ ಬಿಜೆಪಿ  ತನ್ನ ಸೋಶಿಯಲ್‌ ಮೀಡಿಯಾ ಅಕೌಂಟ್‌ ಎಕ್ಸ್‌ನಲ್ಲಿ ಮಾರ್ಕ್‌ ಕಾರ್ಡ್‌ ರೀತಿಯ ಫೋಸ್ಟರ್‌ ಬಿಡುಗಡೆ ಮಾಡಿದೆ. SSLC ಅಂಕಪಟ್ಟಿಯ ಮಾದರಿಯಲ್ಲಿ ಕನ್ನಡಿಗರ ಹಿತರಕ್ಷಣಾ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿರುವ  ಕಾಂಗ್ರೆಸ್‌ ಸರ್ಕಾರ ಎಂಬ ಕ್ಯಾಪ್ಷನ್‌ ಕೊಟ್ಟಿರುವ ಬಿಜೆಪಿ ಕರ್ನಾಟಕ ಎಕ್ಸ್‌ ಅಕೌಂಟ್‌ ಹೋಲ್ಡರ್‌ಗಳು, ಸಿದ್ದರಾಮಯ್ಯರ ಸರ್ಕಾರವನ್ನು ಟೀಕಿಸಿದ್ದಾರೆ.

ಅಂಕ ಪಟ್ಟಿಯಲ್ಲಿ ಏನಿದೆ

ಬಿಜೆಪಿಯ ಪೋಸ್ಟ್‌ನಲ್ಲಿರುವ ಅಂಕಪಟ್ಟಿಯ ಮಾದರಿಯಲ್ಲಿ ಕನ್ನಡಿಗರ ಹಿತರಕ್ಷಣಾ ಪರೀಕ್ಷಾ ಮಂಡಳಿ ಎಂಬ ಹೆಸರನ್ನು ನೀಡಲಾಗಿದೆ. ಅಲ್ಲದೆ,  2023, 2024 2025, 420 ಎಂಬ ನೋಂದಣಿಯ ಸಂಖ್ಯೆಯನ್ನು ನೀಡಲಾಗಿದೆ.  ವರ್ಷದ ಕಾಲಂನಲ್ಲಿ 2 ವರ್ಷವೆಂದು ಬರೆದಿದ್ದು ಅಭ್ಯರ್ಥಿಯ ಹೆಸರನ್ನು ಕಾಂಗ್ರೆಸ್‌ ಎಂದು ಬರೆಯಲಾಗಿದೆ.  ಸದ್ಯ ಈ ಫೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಪರ ಹಾಗೂ ಬಿಜೆಪಿ ಪರವಾದ ಚರ್ಚೆಗಳು ಸೋಶಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ರಾಜಕಾರಣ ಸೋಶಿಯಲ್‌ ಮೀಡಿಯಾದಲ್ಲಿ ತನ್ನದೇ ಆದ ಚಿತ್ರ ವಿಚಿತ್ರ ಫೋಸ್ಟರ್‌ಗಳ ಮೂಲಕ ಪ್ರಚಾರ ಹಾಗೂ ಅಪಪ್ರಚಾರಕ್ಕೆ ಗುರಿಯಾಗುತ್ತಿದ ಎಂಬುದಕ್ಕೆ ಇದು ಸಹ ಒಂದು ಉದಾಹರಣೆಯಾಗಿದೆ.

 



SUMMARY | “The BJP government has completely failed to protect the interests of Kannadigas and develop Karnataka,” the BJP government said in a tweet.

KEYWORDS | BJP government,  tweet, Congress govt, development,

 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor