BREAKING NEWS | ತೀರ್ಥಹಳ್ಳಿ ರೋಡ್‌ನಲ್ಲಿ ಬೈಕ್‌ ಓಡಿಸ್ತಿದ್ದ ಮಹಿಳೆ ಕಾರಿನಡಿ ಸಿಲುಕಿ ಸಾವು!

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಸಂಕದ ಹೊಳೆ ಬಳಿ ಸಂಭವಿಸಿದ ದೊಡ್ಡ ಅಪಘಾತದಲ್ಲಿ ಮಹಿಳೆಯೊಬ್ಬರು ಕಾರಿನ ಅಡಿಯಲ್ಲಿಯೇ ಸಾವನ್ನಪ್ಪಿದ್ದಾರೆ. 

ಇವತ್ತು ಮಧ್ಯಾಹ್ನನ ನಂತರ ಮೇನ್‌ ರೋಡ್‌ನಲ್ಲಿ ಈ ಘಟನೆ ಸಂಭವಿಸಿದ್ದು. ಮೃತ ಮಹಿಳೆ ತೀರ್ಥಹಳ್ಳಿ ಸ್ಟಾರ್ ಟೈಲರ್ ಮಾಲೀಕರಾದ ಗಂಗಾಧರ್ ಆಚಾರ್ ರವರ ಪತ್ನಿ ಮಮತಾ ಆಚಾರ್. ಇವರು ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಆಕ್ಸಿಡೆಂಟ್‌ ಆಗಿದೆ. 

ಮೂಲಗಳು ಹೇಳುವಂತೆ ಇವರ ಬೈಕ್‌ಗೆ ಕಾರು ಗುದ್ದಿ, ಅವರ ಮೇಲೆಯೆ ಕಾರು ಹರಿದಿದೆ ಎನ್ನಲಾಗುತ್ತಿದೆ. ಆದಾಗ್ಯು ಈ ಬಗ್ಗೆ ಅಧಿಕೃತವಾದ ಮಾಹಿತಿ ಇನ್ನಷ್ಟೆ ಸ್ಪಷ್ಟವಾಗಬೇಕಿದೆ . ಹೆಲ್ಮೆಟ್‌ ಹಾಕಿದ್ದ ಮಮತಾರವರು ಕಾರಿನಡಿಯಲ್ಲಿಯೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸ್ಥಳೀಯರು ಮೃತದೇಹವನ್ನು ಕಾರನಡಿಯಿಂದ ತೆಗೆದು ಶವಾಗಾರಕ್ಕೆ ಶಿಫ್ಟ್‌ ಮಾಡಿದ್ದಾರೆ. ಘಟನೆ ಪೂರ್ಣವಿವರದ ಬಗ್ಗೆ ತೀರ್ಥಹಳ್ಳಿ ಪೊಲೀಸ್‌ ಠಾಣೆಯ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

 

SUMMARY |  lady death in thirthahalli road 

KEY WORDS |   lady death in thirthahalli road 

Leave a Comment