ಹಿತ್ತಲಿಗೆ ಬಂದು ಅದನ್ನು ತೋರಿಸಿದ ಕಾಮುಕ | ಮಹಿಳೆ ಎಸ್ಕೇಪ್‌ | ದಾಖಲಾಯ್ತು ಕೇಸ್

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದಾಗ ಅವರ ಜೊತೆ ಅಸಭ್ಯವಾಗಿ ವರ್ತಿಸಿ, ದೊಣ್ಣೆ ತಗೊಂಡು ಹೊಡೆಯಲು ಬಂದ ಘಟನೆ ಸಂಬಂಧ THE BHARATIYA NYAYA SANHITA (BNS), 2023 (U/s-329(4),351(1),74,75,78(1) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು (ಹೆಸರು ಗೌಪ್ಯ) ಮನೆ ಹಿತ್ತಲಲ್ಲಿ ಇದ್ದಾಗ, ವ್ಯಕ್ತಿಯೊಬ್ಬ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ತನ್ನ ಪಂಚೆ ಬಿಚ್ಚಿ , ಕೆಟ್ಟದಾಗಿ ತೋರಿಸುತ್ತಾ ಆಕೆಯನ್ನು ಎಳೆದಾಡಲು ಮುಂದಾಗಿದ್ದ. ಅಷ್ಟರಲ್ಲಿ ಮಹಿಳೆ ಅಲ್ಲಿಂದ ಮನೆಯೊಳಗೆ ಓಡಿದ್ದಾರೆ. ಬಳಿಕ ಅಲ್ಲಿಗೂ ಹೋದ ಆಸಾಮಿ, ಆಕೆಯ ಮೇಲೆ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಾನೆ. ಇಷ್ಟರಲ್ಲಿ ಅಕ್ಕಪಕ್ಕದವರು ಕಿರುಚಾಟ ಕೇಳಿ ಸ್ಥಳಕ್ಕೆ ಓಡಿ  ಬಂದ ಹಿನ್ನೆಲೆಯಲ್ಲಿ ಆರೋಪಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸ್ತಿದ್ದಾರೆ.

SUMMARY |  woman harassed by unknown near home 

KEY WORDS | woman harassed by unknown near home 

Leave a Comment