27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿ ಪಾರುಪತ್ಯ | ಬಿ ವೈ ರಾಘವೇಂದ್ರ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿ ಪಾರುಪತ್ಯ | ಬಿ ವೈ ರಾಘವೇಂದ್ರ ಹೇಳಿದ್ದೇನು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 8, 2025

ಶಿವಮೊಗ್ಗ | ದೆಹಲಿಯಲ್ಲಿ ಘಟಾನುಘಟಿ ನಾಯಕರುಗಳನ್ನು ಸೋಲಿಸಿ 27 ವರ್ಷದ ಬಳಿಕ ಬಿಜೆಪಿ ಆಡಳಿತಕ್ಕೆ ಬಂದಿದ್ದು, ಕಾಂಗ್ರೆಸ್‌ ಪಕ್ಷ ಮೂರನೆ ಬಾರಿಗೆ ಸೊನ್ನೆ ಸುತ್ತುವ ಮೂಲಕ ಮೂಲೆ ಸೇರಿದೆ ಎಂದು ಸಂಸದ ಬಿವೈ ರಾಘವೇಂದ್ರ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ನಮ್ಮ ಬಿಜೆಪಿ ಪಕ್ಷ 48 ಸೀಟು ಗೆದ್ದಿರುವುದಕ್ಕೆ ಬಹಳಾ ಸಂತೋಷವಾಗುತ್ತಿದೆ. ಈ ಹಿಂದೆ ಸುಷ್ಮಾ ಸ್ವರಾಜ್‌ರವರ ಅಧಿಕಾರದ ಬಳಿಕ ಬಿಜೆಪಿ ಅಧಿಕಾರದಿಂದ ದೂರವಿತ್ತು. ಆದರೆ ಈದೀಗ 27 ವರ್ಷದ ನಂತರ ಬಿಜೆಪಿ ದೆಹಲಿಯಲ್ಲಿ ಘಟಾನುಘಟಿ ನಾಯಕರುಗಳನ್ನು ಸೋಲಿಸುವ ಮೂಲಕ ಪಾರುಪತ್ಯ ಮೆರೆದಿದೆ.ಕೇವಲ ಉಚಿತ ಯೋಜನೆ ನೀಡಿ ಗೆಲುವು ಸಾಧಿಸುತ್ತೇನೆ ಎಂಬ ಕಾಂಗ್ರೆಸ್‌ನ ನಂಬಿಕೆ ಸುಳ್ಳಾಗಿದೆ. ಪ್ರಜ್ಞಾವಂತ ಮತದಾರರು ದೆಹಲಿಯಲ್ಲಿ ನಡೆಯುತ್ತಿರುವ  ಭ್ರಷ್ಟಾಚಾರಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಮದ್ಯ ಭಷ್ಟಾಚಾರ ಸೇರಿದಂತೆ ಹತ್ತು ಹಲವಾರು ಭ್ರಷ್ಟ ಯೋಜನೆಗಳಿಂದ ಕೇಜ್ರಿವಾಲ್ ಸೋತಿದ್ದಾರೆ ಎಂದರು.

ನಿರ್ಮಲಾ ಸಿತಾರಾಮನ್‌ ಎಲ್ಲಾ ವರ್ಗದವರಿಗೂ ನ್ಯಾಯ ಕೊಟ್ಟಿದ್ದಾರೆ.

ಯಾವುದೇ ಚುನಾವಣೆ ಇಲ್ಲದೇ ಹೋದರೂ ನಿರ್ಮಲಾ ಸೀತಾರಾಮನ್‌  ಮದ್ಯಮ ವರ್ಗಕ್ಕೆ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆ. ಇದರಿಂದಾಗಿ  ಅವರು ಎಲ್ಲ ವರ್ಗಕ್ಕೆ ನ್ಯಾಯ ಕೊಟ್ಟಿದ್ದಾರೆ. ಹಭಾರತದ ಜಿಡಿಪಿ ಏರಿಕೆಯಾಗುತ್ತಿದ್ದು, ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ.ಮೋದಿಯವರು 2030 ಕ್ಕೆ 5 ಬಿಲಿಯನೆರ್ ಸಂಕಲ್ಪ ಹೊಂದಿದ್ದಾರೆ.ಭಾರತ ಯುವ ಶಕ್ತಿ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದರು.

SUMMARY | “The BJP has come to power in Delhi after 27 years after defeating stalwarts and the Congress party has been cornered for the third time by zero,” raghavendra said

KEYWORDS | BJP,  Delhi, raghavendra, politics,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor