SHIVAMOGGA | MALENADUTODAY NEWS | ಮಲೆನಾಡು ಟುಡೆ Jan 31, 2025
ಶಿವಮೊಗ್ಗ ಕೋರ್ಟ್ ಕೊಲೆ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣ 2020 ರ ನವೆಂಬರ್ ಒಂದರಂದು ನಡೆದ ಘಟನೆಗೆ ಸಂಬಂಧಿಸಿದ್ದಾಗಿದೆ. ಪೂರ್ಣ ವಿವರ ಹೀಗಿದೆ.
ಶಿವಮೊಗ್ಗ ಕೋರ್ಟ್
ಹೆಂಡತಿಯನ್ನು ಸ್ಕೂ ಡ್ರೈವರ್ನಿಂದ ಚುಚ್ಚಿ ಕೊಲೆ ಮಾಡಿದ ತುಂಗಾ ನಗರ ವ್ಯಾಪ್ತಿಯ ಮಲ್ಲಿಕಾರ್ಜುನ ಬಡಾವಣೆಯ ವಾಸಿ, ಸೈಯದ್ ಫರ್ವೀಜ್ಗೆ ಜೀವಾವಧಿ ಶಿಕ್ಷೆ, ಮತ್ತು ರೂ 25,000/- ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 06ತಿಂಗಳುಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ತುಂಗಾನಗರ ಪೊಲೀಸ್ ಠಾಣೆ
ಇಲ್ಲಿನ ನಿವಾಸಿ ಪರ್ವೀಜ್ ಫಾತಿಮಾ ಎಂಬವರನ್ನ ಮದುವೆಯಾಗಿದ್ದ. ಇವರಿಗೆ ಮೂವರು ಮಕ್ಕಳಿದ್ದರು. ಇದರ ನಡುವೆ ಪತ್ನಿಯ ಮೇಲೆ ಸಂಶಯ ಪಟ್ಟಿದ್ದ ಪರ್ವೀಜ್ ದಿನಾಂಕ 01-11-2020 ರಂದು ಸಂಜೆ 06 ಗಂಟೆ ಸುಮಾರಿಗೆ ಫಾತಿಮಾಳನ್ನು ಅವರ ತಂದೆ ತಾಯಿ ಎದುರಲ್ಲೆ ಸ್ಕ್ರೂ ಡ್ರೈವರ್ ಮತ್ತು ಚಾಕುನಿಂದ ಇರಿದು ಹತ್ಯೆ ಮಾಡಿದ್ದ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷಾಧಾರಗಳ ಆಧಾರದ ಮೇಲಿಂದ ಪ್ರಕರಣದಲ್ಲಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತಾ ಬಿ.ಎಸ್. ರವರು ವಾದ ಮಂಡಿಸಿದ್ದರು.
ಕಲಂ 498(ಎ), 302 ಐ.ಪಿ.ಸಿ ಅಡಿಯಲ್ಲಿ ಎಸಗಿದ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಸೈಯದ್ ಫರ್ವೀಜ್ ಬಿನ್ ಮುಜೀಬ್, ಈತನಿಗೆ ಕಲಂ: 498(ಎ) ಐ.ಪಿ.ಸಿ ಅಡಿಯಲ್ಲಿ ಒಂದು ವರ್ಷ ಶಿಕ್ಷೆ, 5 ಸಾವಿರ ದಂಡ ಮತ್ತು ಕಲಂ 302 ಐ.ಪಿ.ಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ, ಮತ್ತು 20,000/- ದಂಡ ಮತ್ತು ದಂಡ ಕಟ್ಟಲು ತಪ್ಪಿದಲ್ಲಿ ಪುನಃ 06 ತಿಂಗಳ ಶಿಕ್ಷೆ ವಿಧಿಸಿ, ದಿನಾಂಕ 31-01-2025 ರಂದು ಆದೇಶಿಸಿ ತೀರ್ಪು ನೀಡಿದ್ದಾರೆ.
SUMMARY | 1st Additional District and Sessions Court of Shivamogga has sentenced the accused to life imprisonment for killing his wife under the jurisdiction of Tunganagar police station.
KEY WORDS | 1st Additional District and Sessions Court of Shivamogga, life imprisonment for killing his wife ,Tunganagar police station.