ಜೈದ್‌ ಖಾನ್‌ ಕಲ್ಟ್‌ ಚಿತ್ರಕ್ಕೆ ಅರಣ್ಯ ಇಲಾಖೆ ಶಾಕ್‌

ಹಂಚಿಕೊಳ್ಳಿ
WhatsApp Facebook X Telegram
ಜೈದ್‌ ಖಾನ್‌ ಕಲ್ಟ್‌ ಚಿತ್ರಕ್ಕೆ ಅರಣ್ಯ ಇಲಾಖೆ ಶಾಕ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025 ‌

ಸಚಿವ ಜಮೀರ್‌ ಅಹ್ಮದ್‌ ಪುತ್ರ ನಟಿಸುತ್ತಿರುವ ಕಲ್ಟ್‌ ಚಿತ್ರಕ್ಕೆ ದೊಡ್ಡದೊಂದು ಶಾಕ್‌ ಎದುರಾಗಿದೆ. ಅದೇನೆಂದರೆ ಸರ್ಕಾರದ ಅನುಮತಿ ಪಡೆಯುವವರೆಗೂ ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ ಮಾಡುವಂತಿಲ್ಲ ಎಂದು ಶೂಟಿಂಗ್‌ಗೆ ಅರಣ್ಯ ಇಲಾಖೆ ಬ್ರೇಕ್‌ ಹಾಕಿದೆ.

ಕಲ್ಟ್‌ ಚಿತ್ರತಂಡ ಶೂಟಿಂಗ್‌ ವೇಳೆ ಸಣಾಪೂರ ಗ್ರಾಮದ ತುಂಗಾಭದ್ರ ನದಿಯ ದಂಡೆಯಲ್ಲಿ ಬೆಂಕಿಹಾಕಿ ಚಿತ್ರೀಕರಣ ನಡೆಸುತ್ತಿತ್ತು. ಆದರೆ ನಿಯಮದ ಪ್ರಕಾರ ಅರಣ್ಯ ಇಲಾಖೆಗೆ ಒಳಪಡುವ ಕಾಡು ನದಿ ಹಾಗೂ ಇನ್ನೀತರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಬೇಕಾದರೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ ಕಲ್ಟ್‌ ಚಿತ್ರತಂಡ ಯಾವುದೇ ಅನುಮತಿ ಪಡೆಯದೇ ನದಿ ದಂಡೆಯಲ್ಲಿ ಬೆಂಕಿ ಹಾಕಿ ಶೂಟಿಂಗ್‌ ನಡೆಸಿದೆ. ಆ ವೇಳೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿತ್ರೀಕರಣಕ್ಕೆ ತಡೆ ನೀಡಿದ್ದು, ಅಷ್ಟೇ ಅಲ್ಲದೆ  ಸರ್ಕಾರದ ಅನುಮತಿ ಪಡೆಯುವವರೆಗೂ ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ ಮಾಡುವಂತಿಲ್ಲ ಎಂದು ಎಚ್ಚರಿಸಿದೆ ಎನ್ನಲಾಗಿದೆ.

SUMMARY | The forest department has put a stop to the shooting of the film in the forest area till the permission of the government is obtained.

KEYWORDS |  forest department, cult movie,  shooting, kannada,

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor