ಸದ್ಯದಲ್ಲೇ ಬರಲಿದೆ ಜುಪಿಟರ್ ಸಿಎನ್‌ಜಿ ಮತ್ತು ಪೆಟ್ರೋಲ್ ಸ್ಕೂಟರ್ ಮೈಲೇಜ್ ಎಷ್ಟು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 18, 2025 ‌

ಇತ್ತೀಚಿನ ದಿನಗಳಲ್ಲಿ ಸಿಎನ್‌ಜಿ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದುವರೆಗೆ ಕಾರಿನಲ್ಲಿ ಸಿಎನ್‌ಜಿ ಎನ್ನು ಅಳವಡಿಸಿಸಲಾಗುತ್ತಿತ್ತು.  ಪ್ರಸ್ತುತ ಮುಂದುವರೆದ ತಂತ್ರಜ್ಞಾನದಲ್ಲಿ  ಕೆಲವು ಮೋಟಾರ್ ಕಂಪನಿಗಳು ಬೈಕ್‌ಗಳಿಗೂ ಸಹ ಸಿಎನ್‌ಜಿ ಯನ್ನು ಅಳವಡಿಸುತ್ತಿವೆ. ಇದೀಗ ಟಿವಿಎಸ್ ಕಂಪನಿ ತನ್ನ ಮೊದಲ ಸಿ ಎನ್ ಜಿ ಸ್ಕೂಟರ್ ಅನ್ನು ಜುಪಿಟರ್ ಬೈಕ್‌ನಲ್ಲಿ ಬಿಡುಗಡೆಗೊಳಿಸುತ್ತಿದ್ದು, ಅದರ ಕುರಿತು ಮಾಹಿತಿ ಇಲ್ಲಿದೆ .

ಟಿವಿಎಸ್ ಕಂಪನಿ ಇದೀಗ ತನ್ನ ಮೊದಲ ಸಿಎನ್‌ಜಿ ಬೈಕ್‌ನ್ನು ಜುಪಿಟರ್ ಸ್ಕೂಟರ್ ನಲ್ಲಿ ಬಿಡುಗಡೆಗೂಳಿಸುತ್ತಿದೆ. ಈ ಹಿಂದೆ ಬಜಾಜ್ ಕಂಪನಿಯು ಸಿಎನ್‌ಜಿಯಲ್ಲಿ ಪ್ರೀಡಂ ಎಂಬ ಬೈಕ್‌ನ್ನು ಬಿಡುಗಡೆಗೊಳಿಸಿತ್ತು. ಆ ಬೈಕ್ ದೇಶದಲ್ಲಿ ಮೊದಲ ಸಿಎನ್‌ಜಿ ಚಾಲಿತ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದರ ನಂತರ ಇದೀಗ ಸ್ಕೂಟರ್ ವಿಭಾಗದಲ್ಲಿ ಟಿವಿಎಸ್ ಜುಪಿಟರ್ ಸಿಎನ್‌ಜಿ ವಾಹನವನ್ನು ಬಿಡುಗಡೆಗೊಳಿಸುತ್ತಿದೆ. ವಿಶೇಷವೆಂದರೆ ಈ ಸ್ಕೂಟರಿನಲ್ಲಿ ಪೆಟ್ರೋಲ್ ಹಾಗೂ ಸಿಎನ್ ಜಿ ಎರಡನ್ನೂ ಸಹ ನೀಡಲಾಗಿದೆ.

ಸ್ಕೂಟರ್ ನ ಮೈಲೇಜ್ ಹಾಗೂ ಪ್ರೈಸ್ ಎಷ್ಟು 

125 ಸಿಸಿ ಹೊಂದಿರುವ ಈ ಬೈಕ್ ನಲ್ಲಿ 1.4kg ಯುನಿಟ್‌ನ  ಸಿಎನ್‌ಜಿ ಟ್ಯಾಂಕ್‌ನ್ನ ಬೈಕ್ ನ ಸೀಟಿನ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಹಾಗೆಯೇ ಪ್ಲಾಸ್ಟಿಕ್ ಪ್ಯಾನೆಲ್‌ನಿಂದ ಆ ಟ್ಯಾಂಕ್‌ನ್ನು ಕವರ್ ಮಾಡಲಾಗಿದೆ. ಒಂದು ಕೆಜಿ ಸಿಎನ್‌ಜಿಯಲ್ಲಿ ಈ ಬೈಕ್ ಬರೊಬ್ಬರಿ 84 ಕಿಮೀ ಮೈಲೇಜ್ ನೀಡುತ್ತದೆ ಎಂದು ಟಿವಿಎಸ್ ಕಂಪನಿ ಹೇಳಿಕೊಂಡಿದೆ . ಹೆಚ್ಚುವರಿಯಾಗಿ ಈ ಸ್ಕೂಟರ್‌ನಲ್ಲಿ  2 ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ನೀಡಲಾಗಿದ್ದು, ಆ ಪೆಟ್ರೊಲ್ ಟ್ಯಾಂಕ್ ಅನ್ನು ಬೈಕ್ ನ ಮುಂಬಾಗದಲ್ಲಿ ನೀಡಲಾಗಿದೆ. ಈ  ಬೈಕ್ ಸಿಎನ್ ಜಿ ಮತ್ತು ಪೆಟ್ರೊಲ್ ನಲ್ಲಿ ಸೇರಿ  ಒಂದು ಬಾರಿಗೆ 226km ಮೈಲೇಜ್ ನೀಡುತ್ತದೆ.

ಈ ಬೈಕ್ ನ ಆರಂಬಿಕ ಬೆಲೆ 90 ಸಾವಿರದಿಂದ 1 ಲಕ್ಷದವರೆಗೆ ಇರಲಿದ್ದು, ಕಂಪನಿ ಇನ್ನೂ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿಲ್ಲ.

SUMMARY | TVS Motor Company is all set to launch its first CNG scooter on the Jupiter.

 

KEYWORDS | Jupiter, TVS,  CNG scooter,

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor