ಶಬರಿಮಲೆ ಭಕ್ತರಿಗೆ ನೆರವು | ಸೌರ್ಹಾಧತೆಗೆ ಸಾಕ್ಷಿಯಾದ ಶಿವಮೊಗ್ಗ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 30, 2024 ‌‌ 

ಶಿವಮೊಗ್ಗವನ್ನು ಹೊರಗಿನವರು ತಮ್ಮದೆ ಆದ ದೃಷ್ಟಿಯಲ್ಲಿ ನೋಡುತ್ತಾರೆ ಮತ್ತು ನಿರ್ಧರಿಸುತ್ತಾರೆ. ಆದರೆ ಶಿವಮೊಗ್ಗ ಕೇವಲ ನೆಟ್ಟ ದೃಷ್ಟಿಗೆ ಸೀಮಿತವಾಗಿಲ್ಲ. ಇಲ್ಲಿನ ಮಣ್ಣಿನ ಗುಣವೇ ವೈಶಿಷ್ಟ್ಯವಾದುದು. ಯಾವ ಕುಲುಮೆಗೂ ಸಿಗುವಂತದಲ್ಲ ಇಲ್ಲಿನವರ ಮನ. ಏಕೆಂದರೆ ಕೋಮು ಸೂಕ್ಷ್ಮತೆ ಎಂಬ ಪದ ಬಳಸಿಕೊಂಡು ನೋಡುವ ಹೊರಗಿನವರಿಗೆ ಇಲ್ಲಿನ ಭಾವೈಕ್ಯತೆ ಎಂದಿಗೂ ಕಾಣುವುದಿಲ್ಲ. ಅದರಲ್ಲಿಯು ಶಬರಿಮಲೆಗೆ ಹೊರಡುವ ಅಯ್ಯಪ್ಪನ ಮಾಲಾದಾರಿಗಳ ವೃತಕ್ಕೆ ಶಿವಮೊಗ್ಗದಲ್ಲಿ ಯಾರೇ ಆಗಲಿ ತಮ್ಮ ಕೈಲಾದ ನೆರವು ನೀಡುತ್ತಾರೆ. ಅಯ್ಯಪ್ಪನ ಮಾಲದಾರಿಗಳ ವೃತವೇ ಕಠಿಣವಾದುದು ಅಂತಹ ಕಠಿಣ ವೃತ ಸಾದಿಸುವ ಮಾಲಾದಾರಿಗಳಿಗೆ ನೆರವಾದರೆ, ಅದೊಂದು ಪುಣ್ಯದ ಕೆಲಸವೆಂದು ಭಾವಿಸುತ್ತಾರೆ. 

 

ಈ ಮಾತನ್ನು ಮುಸ್ಲಿಮರು ಸಹ ಒಪ್ಪಿ ಆಚರಿಸುತ್ತಾರೆ. ಶಿವಮೊಗ್ಗ ಜಿಲ್ಲೆ ಹಲವು ಕಡೆಗಳಲ್ಲಿ ಮಸ್ಲಿಮ್‌  ಮನೆಗಳಲ್ಲಿ ಮಾಲಾಧಾರಿಗಳಿಗೆ ಶಕ್ತಿ ಉಣಬಡಿಸಲಾಗುತ್ತದೆ. ಅದೇ ರೀತಿಯಲ್ಲಿ ಶಿವಮೊಗ್ಗದ ಉದ್ಯಮಿ ಅಮ್ಜದ್‌ ಎಂಬವರು ಅಯ್ಯಪ್ಪ ಸ್ವಾಮಿ ಮಾಲಧಾರಿಗಳಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನಗರದ ಟೆಂಪೋ ಸ್ವಾಂಡ್ ಬಳಿಯ ವೆಂಕಟೇಶ್ವರ ದೇವಸ್ಥಾನದ ಸುಮಾರು 50 ಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಹೋಗುವ ಸಲುವಾಗಿ ವೃತ ಆಚರಿಸುತ್ತಿದ್ದಾರೆ. ಇವರಿ ಅಮ್ಜದ್‌ ಊಟ ಹಾಗೂ ಹಣಕಾಸಿನ ನೆರವು ನೀಡಿದ್ದಾರೆ. ಇದು ಶಿವಮೊಗ್ಗದ ಕೋಮು ಸೌಹಾರ್ಧತಗೆ ಸಾಕ್ಷಿಯಾಗಿದೆ. 

ಶಬರಿಮಲೆ ಭಕ್ತರಿಗೆ ನೆರವು | ಸೌರ್ಹಾಧತೆಗೆ ಸಾಕ್ಷಿಯಾದ ಶಿವಮೊಗ್ಗ

 

ಇಷ್ಟೆ ಅಲ್ದೆ ಅಮ್ಜದ್‌ ಪ್ರತಿವರುಷ ನಡೆಯುವ ಆರ್.ಎಂ.ಎಲ್ ನಗರ್ ಪ್ರೀಮಿಯರ್ ಲೀಗ್ ಕ್ರಿಕೇಟ್ ಗೂ ನೆರವು ನೀಡುತ್ತಾ ಬಂದಿದ್ದಾರೆ. ಕೆವಲ ಮುಸ್ಲಿಂ ಸಮುದಾಯವಲ್ಲದೆ ಎಲ್ಲಾ ಜಾತಿ ಧರ್ಮದವರಿಗೂ ತೆರೆಮರೆಯಲ್ಲೇ ಸಹಾಯ ಮಾಡುತ್ತಿರುವ ಅಮ್ಮದ್ ರವರ ಸಾಮಾಜಿಕ ಕಳಕಳಿಯ ಮತ್ತೊಂದು ಮುಖವನ್ನು ತೋರಿಸುವ ಸಣ್ಣ ಪ್ರಯತ್ನ ಇದಾಗಿದೆ. ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಅಮ್ಜದ್, ಗೆ ಒಳ್ಳೆಯದಾಗಲಿ ಎಂದು ಶಬರಿಮಲೈಗೆ ಹೊರಟಿರುವ ಅಯ್ಯಪ್ಪ ಸ್ವಾಮಿ ಮಾಲಧಾರಿಗಳು ಹರಸಿದ್ದಾರೆ.

ಶಬರಿಮಲೆ ಭಕ್ತರಿಗೆ ನೆರವು | ಸೌರ್ಹಾಧತೆಗೆ ಸಾಕ್ಷಿಯಾದ ಶಿವಮೊಗ್ಗ

 

SUMMARY | Amjad helping Sabarimala Ayyappa devotees

 

KEY WORDS | Amjad helping Sabarimala Ayyappa devotees

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor