SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024
ಶಿವಮೊಗ್ಗದಲ್ಲಿ ಕಾಣೆಯಾಗುತ್ತಿರುವ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾಗುತ್ತಿದೆ. ಇದರ ನಡುವೆ ಮತ್ತಿಬ್ಬರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಡುತ್ತಿರುವ ಪೊಲೀಸ್ ಇಲಾಖೆ, ಈ ಸಂಬಂಧ ಜನರ ಸಹಾಯ ಕೋರಿದೆ. ಅದಕ್ಕಾಗಿ ಕಾಣೆಯಾದವರ ಬಗ್ಗೆ ಪೊಲೀಸ್ ಪ್ರಕಟಣೆಯನ್ನು ನೀಡಿದೆ.
ಒಂದು ಪ್ರಕರಣದಲ್ಲಿ ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಸಾಗರ ರಸ್ತೆಯಲ್ಲಿರುವ ಸತ್ಯಂ ಫೋರ್ ವಿಂಗ್ಸ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ನಾಪತ್ತೆ ಪ್ರಕರಣದ ಬಗ್ಗೆ ಪ್ರಕಟಣೆ ನೀಡಿದ್ದಾರೆ.
ಇಲ್ಲಿ ಕೆಲಸ ಮಾಡುತ್ತಿದ್ದ ಹಾಲನಾಯ್ಕ ಎಂಬ 48 ವರ್ಷದ ವ್ಯಕ್ತಿ ಇದೇ ಡಿಸೆಂಬರ್ 03 ರಂದು ಕೆಲಸಕ್ಕೆಂದು ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ. ಇವರ ಚಹರೆ ಸುಮಾರು 5.5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾದರಣ ಮೈಕಟ್ಟು, ಕೋಲುಮುಖ ಹೊಂದಿದ್ದು, ಗಡ್ಡ ಮೀಸೆ ಬಿಟ್ಟಿರುತ್ತಾರೆ. ಬಲಗಾಲಿಗೆ ಗಾಯವಾಗಿದ್ದು, ಸ್ವಲ್ಪ ಕುಂಟುತ್ತಾ ನಡೆಯುತ್ತಾರೆ. ಕಾಣೆಯಾಗುವ ಸಂದರ್ಭದಲ್ಲಿ ಕೆಂಪು ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್, ನೀಲಿ ಬಣ್ಣದ ಪಂಚೆ ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ನೀಡುವಂತೆ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಲಾಗಿದೆ. ಸುಳಿವು ಪತ್ತೆಯಾದರೆ ಜಯನಗರ ಪೋಲಿಸ್ ಠಾಣೆ ಸಂಖ್ಯೆ 08182-261416/ 261413/261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.

ಇನ್ನೊಂದು ಪ್ರಕರಣದಲ್ಲಿ ಚನ್ನಗಿರಿಯ ತಾವರೆಕೆರೆ ಗ್ರಾಮ, ಉಬ್ರಾಣಿ ಹೋಬಳಿ ವಾಸಿ ಓಂಕರಪ್ಪ ಎಂಬುವವರ ಮಗ ದಿಲೀಪ್ ಎಂಬ 35 ವರ್ಷದ ವ್ಯಕ್ತಿ ಕಳೆದ ಅಕ್ಟೋಬರ್ 14 ರಂದು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದವರು ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ.
ಈ ವ್ಯಕ್ತಿಯ ಚಹರೆ ಸುಮಾರು 5.7ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಸಾದರಣ ಮೈಕಟ್ಟು, ದುಂಡುಮುಖ ಹೊಂದಿದ್ದು, ಕಪ್ಪು ಬಿಳಿ ಕುರುಚಲು ಗಡ್ಡ ಬಿಟ್ಟಿರುತ್ತಾರೆ. ಕಾಣೆಯಾಗುವ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬ ತೋಳಿನ ಶರ್ಟ್, ಹಸಿರು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಎಡಕಾಲಿನ ಹೆಬ್ಬೆಟ್ಟು ಅರ್ಧ ತುಂಡಾಗಿರುತ್ತದೆ. ಇವರ ಸುಳಿವು ಪತ್ತೆಯಾದರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.
————–
SUMMARY | Announcement from Doddapet Police Station and Jayanagar Police Station regarding missing persons in Shivamogga city. Missing
KEY WORDS | Doddapete Police Station , Jayanagar Police Station, missing persons in Shivamogga city Missing Announcement