SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 26, 2024 | SHIVAMOGGA EDINA | ದಸರಾ ಹಬ್ಬದ ಪ್ರಯುಕ್ತ ಶಿವಮೊಗ್ಗ ನಗರದ ದೀಪಕ್ ಸರ್ವಿಸ್ ಸ್ಟೇಷನ್ ನಲ್ಲಿ ದಸರಾ ಹಬ್ಬದ ಪ್ರಯುಕ್ತ ಮಹಿಳಾ ಗ್ರಾಹಕರಿಗೆ ಲಕ್ಕಿ ಡಿಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನ ಇವತ್ತು ಆರಂಭಿಸಲಾಗಿದ್ದು ವಿಜೇತರನ್ನು ದಿನಾಂಕ 10/10/2024 ರಂದು ಲಕ್ಕಿ ಡಿಪ್ ಮುಖಾಂತರ ಆರಿಸಲಾಗುವುದು ಎಂದು ತಿಳಿಸಲಾಗಿದೆ.
ಮಹಿಳಾ ಗ್ರಾಹಕರಿಗೆ 250/ರೂ ಮೇಲ್ಪಟ್ಟು ಪವರ್ ಪೆಟ್ರೋಲ್ , 400/- ರೂ ಮೇಲ್ಪಟ್ಟು ಪೆಟ್ರೋಲ್ 500/-ಟರ್ಬೊ ಡೀಸಲ್ ಹಾಕಿಸಿದಲ್ಲಿ ಬಹುಮಾನವಾಗಿ ಸೀರೆ ಗೆಲ್ಲುವ ಅವಕಾಶ ಇದ್ದು (ಪ್ರಥಮ -2500/- ದ್ವಿತೀಯ -2000/- ತೃತೀಯ 1500/- ಹಾಗು ನಾಲ್ಕನೇ ಬಹುಮಾನ ವಾಗಿ 1000/- ನೀಡಲಾಗುತ್ತಿದೆ.
ಉಚಿತ ಹೃದಯ ತಪಾಸಣೆ ಶಿಬಿರ
ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನದ ಅಂಗವಾಗಿ ಕುವೆಂಪು ರಸ್ತೆಯ ನಾರಾಯಣ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಹೃದಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್ ತಿಳಿಸಿದ್ದಾರೆ.
ಉಚಿತ ತಪಾಸಣೆ ಶಿಬಿರದಲ್ಲಿ ವಾಕಾಥಾನ್, ಮ್ಯಾರಾಥಾನ್, ಸೈಕ್ಲೋಥಾನ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಶಿಬಿರದಲ್ಲಿ ಉಚಿತವಾಗಿ ಇಸಿಜಿ, ಎಕೊ ಸ್ಟೀನಿಂಗ್, ಜಿಆರ್.ಬಿಎಸ್, ಬಿಪಿ ಹಾಗೂ ತಜ್ಞ ವೈದ್ಯರ ಜತೆ ಉಚಿತ ಸಮಾಲೋಚನೆ ಇರಲಿದೆ.

ಸೆ.29ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ನಡೆಯಲಿದೆ. ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳಲು ಸೆ.28 ಕೊನೆ ದಿನವಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕು. ಮಾಹಿತಿಗೆ ಮತ್ತು ಉಚಿತ ನೋಂದಣಿಗೆ ಮೊ. 98864 13131 ಸಂಪರ್ಕಿಸಬಹುದು ಎಂದಿದ್ದಾರೆ.
ಲಿವರ್ ಕಾಯಿಲೆ ತಪಾಸಣೆ
ಇನ್ನೊಂದಡೆ ಬೆಂಗಳೂರಿನ ಖ್ಯಾತ ಲಿವರ್ ಕಸಿ ತಜ್ಞ ಡಾ.ಮಹೇಶ ಗೋಪಶೆಟ್ಟಿಯವರು ಇವತ್ತು ಶಿವಮೊಗ್ಗ ಬಂದಿದ್ದಾರೆ. ನಗರದ ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಸಮಾಲೋಚನೆಗೆ ಲಭ್ಯರಿರುತ್ತಾರೆ. ರೋಗಿಗಳು ಲಿವರ್ ವೈಫಲ್ಯ, ಲಿವರ್ ಸಿರೋಸಿಸ್, ಲಿವರ್ ಕಸಿ, ಲಿವರ್ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ, ಸಲಹೆ, ಸೂಚನೆ ಪಡೆಯಬಹುದು ಎಂಧು ತಿಳಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ, ಕೆ.ಸಿ. ಅಮರನಾಥ (ಮೊ.99168 21655) ಅವರನ್ನು ಸಂಪರ್ಕಿಸಬಹುದು.