ಶಿವಮೊಗ್ಗದಲ್ಲಿ ಯಾವೆಲ್ಲಾ ಕ್ಷೇತ್ರದಲ್ಲಿ ಯಾರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ? ಇಲ್ಲಿದೆ ವಿವರ

KARNATAKA NEWS/ ONLINE / Malenadu today/ May 11, 2023 GOOGLE NEWS  

ಶಿವಮೊಗ್ಗ. ರಾಜ್ಯ ವಿಧಾನಸಭಾ ಚುನಾವಣೆ 2023 ಯ ಫಲಿತಾಂಶದ ಕುತೂಹಲ ಹೆಚ್ಚಾಗುತ್ತಿದ್ದು, ಶಿವಮೊಗ್ಗ ಜಿಲ್ಲೆ ವಿವಿಧ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆಯಾಗಿದ್ದು, ಆರಂಭದ ಹಂತದಲ್ಲಿ ನೀರಿಕ್ಷಿತ ಅಭ್ಯರ್ಥಿಗಳನ್ನ ಮುನ್ನಡೆ ಪಡೆಯುತ್ತಾರೆ ಎಂದೇ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸೊರಬ ಸಾಗರ ತೀರ್ಥಹಳ್ಳಿ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ 

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು 2600 ಮತಗಳಿಂದ ಬಿಜೆಪಿ ಮುನ್ನಡೆ ಸಾಧಿಸಿದೆ . ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು 1435 ಮತಗಳ ಮುನ್ನಡೆಯಿದೆ  

ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದ್ದು 600 ಮತಗಳ ಮುನ್ನಡೆಯಿದೆ

ಭದ್ರತೆ ಹೆಚ್ಚಳ

ಬೆಳಗ್ಗೆ 6.30ರಿಂದಲೇ ಸಹ್ಯಾದ್ರಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಎಲ್ಲೆಡೆ  ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶ ನೀಡಲಾಗುತ್ತಿಲ್ಲ. ಸೇತುವೆ ದಾಟುತ್ತಲೇ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.  

ಚೋರಡಿಯಲ್ಲಿ ಅಪಘಾತ/ ಮೆಗ್ಗಾನ್​ ಆಸ್ಪತ್ರೆಗೆ ಬಿವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ದೌಡು/ಸಾವು ನೋವಿನ ಬಗ್ಗೆ ಎಸ್​ಪಿ ಮಿಥುನ್ ಕುಮಾರ್  ಕೊಟ್ಟ ನಿಖರ ಮಾಹಿತಿ ಇಲ್ಲಿದೆ 

ಹೇಗಿರುತ್ತೆ ಪ್ರಕ್ರಿಯೆ?

ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ವಿಧಾನಸಭಾ ಕ್ಷೇತ್ರವಾರು ಹೆಚ್ಚುವರಿಯಾಗಿ 6 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರು ಶನಿವಾರ ಬೆಳಿಗ್ಗೆ 7ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ಸೂಚನೆ ನೀಡಲಾಗಿತ್ತು

ಬೆಳಿಗ್ಗೆ 7ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲಾಗಿದೆ.. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳು ಮತ್ತು ಸಹಾಯಕ ಚುನಾವಣಾಧಿಕಾರಿಯ ಟ್ಯಾಬುಲೇಷನ್ ಟೇಬಲ್ ಇರುತ್ತದೆ.

ಮತ ಎಣಿಕೆ ಸ್ಥಳದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರಿಗೆ ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುವುದು.

8 ಗಂಟೆಗೆ ಮತ ಎಣಿಕೆ ಆರಂಭ

ಅಂಚೆ ಮತಪತ್ರಗಳ ಎಣಿಕೆ ಮತ್ತು ಕಂಟ್ರೋಲ್ ಯುನಿಟ್ ಮೂಲಕ ಮತ ಎಣಿಕೆಯನ್ನು ಬೆಳಿಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ನೇಮಕ ಮಾಡಿ ತರಬೇತಿ ನೀಡಲಾಗಿದೆ. 

ಇವಿಎಂ ಮತ ಎಣಿಕೆ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‌ಗಳನ್ನು ಆಯ್ಕೆ ಮಾಡಿ ಎಣಿಕೆ ಮಾಡಲಾಗುವುದು. ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್ ಮತ್ತಿತರ ಎಲೆಕ್ಟಾನಿಕ್ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಮತ ಎಣಿಕೆ ಆವರಣದ ಸುತ್ತ ಸೆಕ್ಷನ್ 144 ಜಾರಿಗಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ ಎಣಿಕೆ ಸುತ್ತು ವಿವರ: 

ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ 247 ಮತಗಟ್ಟೆಗಳಿದ್ದು 18 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.ಇದೇ ರೀತಿ ಭದ್ರಾವತಿ 253 ಮತಗಟ್ಟೆ 19 ಸುತ್ತು, ಶಿವಮೊಗ್ಗ 284 ಮತಗಟ್ಟೆ 21 ಸುತ್ತು, ತೀರ್ಥಹಳ್ಳಿ 258 ಮತಗಟ್ಟೆ 19 ಸುತ್ತು, ಶಿಕಾರಿಪುರ 234 ಮತಗಟ್ಟೆ 17 ಸುತ್ತು, ಸೊರಬ 239 ಮತಗಟ್ಟೆ 18 ಸುತ್ತು ಹಾಗೂ ಸಾಗರದಲ್ಲಿ 267 ಮತಗಟ್ಟೆಗಳಿದ್ದು, 20 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ  

Electricity price hike karnataka 2023/  ವಿದ್ಯುತ್​ ದರ ಏರಿಕೆ ಶಾಕ್/  ಪವರ್ ಬಿಲ್​ ಹೆಚ್ಚಿಸಿದ ಕೆಇಆರ್​ಸಿ

ಚುನಾವಣೆ ಮುಗಿದು ಇವತ್ತಷ್ಟೆ ಫಲಿತಾಂಶ ಹೊರಬೀಳಲಿದೆ. ಇದರ ನಡುವೆ  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ),  ವಿದ್ಯುತ್ ಬಳಕೆಗೆ ವಿಧಿಸುವ ವಿದ್ಯುತ್​ ದರವನ್ನು  ಹೆಚ್ಚಿಸಲು ಅನುಮತಿ ನೀಡಿದೆ. 

ಏ‍ಪ್ರಿಲ್ 1ರಿಂದಲೇ ಹೊಸ ದರ ಪೂರ್ವಾನ್ವಯವಾಗಲಿದೆ. ಕೆಇಆರ್‌ಸಿ ದರ ಏರಿಕೆಗೆ ಒಪ್ಪಿಗೆ ಸೂಚಿಸಿದೆ.  

ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ವಿದ್ಯುತ್‌ ದರ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಪ್ರತಿ ಯೂನಿಟ್‌ಗೆ ₹1.39 ಹೆಚ್ಚಿಸುವಂತೆ (ಶೇ 16.83) ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಏಪ್ರಿಲ್‌ ತಿಂಗಳ  ಗ್ರಾಹಕರ ಬಿಲ್‌ಗಳಲ್ಲಿ ಶೇ 8.31ರಷ್ಟು ಹೆಚ್ಚಳವಾಗಲಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆಯಷ್ಟು (ಶೇ 4.33) ವಿದ್ಯುತ್‌ ದರ ಹೆಚ್ಚಿಸಲಾಗಿತ್ತು. ನಂತರ, ಅಕ್ಟೋಬರ್‌ 1ರಂದು ಇಂಧನ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಪರಿಷ್ಕರಿಸಲಾಗಿತ್ತು. ಇದರಿಂದ, ವಿವಿಧ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ದರ ಹೆಚ್ಚಿಸಿದ್ದವು. ಬಳಿಕ, ಡಿಸೆಂಬರ್‌ನಲ್ಲಿ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತಗೊಳಿಸಲಾಗಿತ್ತು.

ಚೋರಡಿ ಅಪಘಾತ/ಅಮ್ಮಾ ರಾಘಣ್ಣ ಮಾತಾಡ್ತಿದ್ದೀನಿ! / ದೇವರಾದ ಮೆಗ್ಗಾನ್ ಸಿಬ್ಬಂದಿ/ ಜೀವಕ್ಕೆ ಜೀವ ಕೊಟ್ಟ ಶಿವಮೊಗ್ಗ ಜನ! ಕುಮದ್ವತಿ ಸೇತುವೆ  ಮೇಲೆ ನಡೆದ ಘಟನೆಯ ಪೂರ್ತಿ ಚಿತ್ರಣ 

ಸಾರ್ವಜನಿಕರ ಗಮನಕ್ಕೆ/ ಮೇ 15 ರಂದು ಶಿವಮೊಗ್ಗದ ಈ ಭಾಗಗಳಲ್ಲಿ ಪವರ್ ಕಟ್ 

ಶಿವಮೊಗ್ಗ ಸಂತೆಕಡೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಭದ್ರಾ 1 ಮತ್ತು 2 ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೆ 15 ರಂದು ಇಡೀ ದಿನ ವಿದ್ಯುತ್ ವ್ಯತ್ಯಯವಾಗಲಿದೆ. 

ಯಾವ್ಯಾವ ಭಾಗದಲ್ಲಿ ವಿದ್ಯುತ್ ಇರೋದಿಲ್ಲ

ಮೇ-15 ರ ಬೆಳಿಗ್ಗೆ 10 ರಿಂದ ಸಂಜೆ 04 ಗಂಟೆವರೆಗೆ ಸಂತೆಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು, ಕಾಕನಹಸೂಡಿ, ಲಿಂಗಾಪುರ, ಸಿದ್ದಮ್ಮಾಜಿ ಹೊಸೂರು  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಚೋರಡಿಯಲ್ಲಿ ಭೀಕರ ಅಪಘಾತ/ ಇಷ್ಟಕ್ಕೂ ಹೇಗಾಯ್ತು ಆಕ್ಸಿಡೆಂಟ್ ? ಪ್ರತ್ಯಕ್ಷದರ್ಶಿ ಹೇಳಿದ್ದೇನು

Malenadutoday.com Social media

Leave a Comment