10 ಗಂಡಸರ ವಿರುದ್ದ ಕೇಸ್‌ ಕೊಟ್ಟ ಲೇಡಿ | ಎಚ್ಚರ ವಹಿಸಿ ಎಂದ ಹೈಕೋರ್ಟ್‌ | ಬಾರಲ್ಲಿ ಕೈ ಟಚ್‌ ಆಗಿದ್ದಕ್ಕೆ ಡಿಶುಂಡಿಶುಂ | ದೇಗಲ ಕಳ್ಳತನ, ಜೈಲ್‌ ವಾರ್ಡನ್‌ ಅರೆಸ್ಟ್

13

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 12, 2024  karantaka Fast news ́

ಮಹಿಳೆಯೊಬ್ಬರ ಬಗ್ಗೆ ಎಲ್ಲಾ ಠಾಣೆಗೂ ಮಾಹಿತಿ ನೀಡಿ

ಕೊಡಗಿನ ಮಹಿಳೆಯೊಬ್ಬಳು ಒಂದು ದಶಕದಲ್ಲಿ ಹತ್ತು ಮಂದಿ ವಿರುದ್ದ ಮೋಸದಿಂದ ಮದುವೆಯಾದ ಹಾಗೂ ವರದಕ್ಷಿಣಿ ಕಿರುಕುಳ ಸೇರಿದಂತೆ ಹಲವು ಆರೋಪ ಮಾಡಿ ಪೊಲೀಸರಿಗೆ ದೂರು ಕೊಟ್ಟ ಬಗ್ಗೆ ಸ್ವತಃ ಹೈಕೋರ್ಟ್‌ ಅಚ್ಚರಿ ಪಟ್ಟಿದೆ. ಅಲ್ಲದೆ  ಪುರುಷರ ವಿರುದ್ಧ ಅನಗತ್ಯ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿರುವ ಕೊಡಗು ಜಿಲ್ಲೆ ಕುಶಾಲಗರ ತಾಲ್ಲೂಕಿನ ಮುಳ್ಳುಸೋಗೆ ನಿವಾಸಿಯಾದ 33 ವರ್ಷದ ದೀಪಿಕಾ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ   ಎಲ್ಲ ಪೊಲೀಸ್‌ ಠಾಣೆಗಳಿಗೆ ನಿರ್ದೇಶನ ನೀಡಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಆದೇಶಿಸಿದೆ.

ಆರೋಪಿ ದೀಪಿಕಾಳ ಹಲವು ಠಾಣೆಗಳಲ್ಲಿ  ಪುರುಷರ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 498ಎ ಅಡಿ 10 ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೈಕೋರ್ಟ್‌ ಗಮನಕ್ಕೆ ಬಂದಿದೆ. ಅಲ್ಲದೆ ಈ ಸಂಬಂಧ ಎಲ್ಲಾ ಪ್ರಕರಣಗಳ ವಿವರನ್ನ ಹೈಕೋರ್ಟ್‌ ಪಡೆದುಕೊಂಡಿತ್ತು. ಇದನ್ನ ಪರಿಶೀಲಿಸಿದ ಬಳಿಕ ಈ ಆದೇಶ ನೀಡಿದೆ. 

ಕೈ ಟಚ್‌  ಆಗಿದ್ದಕ್ಕೆ ಫೈಟ್‌ 

ಶಿವಮೊಗ್ಗ ಹೊಳೆಬಸ್‌ ಸ್ಟಾಪ್‌ ನಿಂದ ಮುಂದ ಶಂಕರ ಮಠ ರಸ್ತೆಯ ಬಾರ್‌ ವೊಂದರಲ್ಲಿ ಕೈ ಟಚ್‌ ಆಗಿದ್ದಕ್ಕೆ ಶೇಷಾದ್ರಿಪುರಂ ಹಾಗೂ ಚಿಕ್ಕಲ್‌ ಹುಡುಗರ ನಡುವೆ ಹೊಡೆದಾಟವಾಗಿದೆ. ಬಾರ್‌ ಮುಂದೆ ಹೊಡೆದಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನ ವಶಕ್ಕೆ ಪಡೆದು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಗುಲ ಕಳ್ಳತನ ವಾರ್ಡನ್‌ ಸೇರಿ ಮೂವರು ಅರೆಸ್ಟ್‌ 

ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ, ತುಮಕೂರು ಮತ್ತು ಗದಗ ಜಿಲ್ಲೆಗಳಲ್ಲಿರುವ ದೇವಾಲಯಗಳಲ್ಲಿ ಕಳ್ಳತನ ಹಾಗೂ ದರೋಡೆ ಮಾಡಿದ್ದ ತಂಡವೊಂದನ್ನ ಗದಗ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದರೆ ಬಂಧಿತರ ಪೂಕಿ ಓರ್ವರು ಜೈಲು ವಾರ್ಡನ್‌ . ಇಲ್ಲಿನ ಲಕ್ಷ್ಮೇಶ್ವರ ಪೊಲೀಶರು ಜೈಲು ವಾರ್ಡನ್ ಒಬ್ಬರನ್ನ ಸೇರಿ ಮೂವರನ್ನ ಬಂಧಿಸಿದ್ದು, ಅವರಿಂಧ  46.22 ಲಕ್ಷ ರೂ ಮೌಲ್ಯದ ಚಿನ್ನಾಭರಣ ಜಪ್ತು ಮಾಡಿದ್ದಾರೆ. ಆರೋಪಿಗಳು ಜೈಲು ವಾರ್ಡನ್ ಶ್ರೀಕಾಂತ್ ಗುಡಗೂರ್ (29), ಪ್ರಸಾದ್ (28) ಮತ್ತು ಪ್ರದೀಪ್ (28) 

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Leave a Comment

Leave a Reply

Your email address will not be published. Required fields are marked *