Karnataka Assembly Election 2023/ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಮೇ ತಿಂಗಳ 10 ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಚುನಾವಣಾ ಆಯೋಗ ನಡೆಸ್ತಿರುವ ಸುದ್ದಿಗೋಷ್ಟಿಯ ವಿವರ ಇಲ್ಲಿದೆ ಓದಿ
- ರಾಜ್ಯದ 224 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ವಿಧಾನಸಭಾ ಚುನಾವಣೆಯು ಇದೇ ಮೇ 10 ರಂದು ಚುನಾವಣೆ ನಡೆಯಲಿದೆ.
- ಒಂದೇ ಹಂತದಲ್ಲಿ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.
- ಇನ್ನೂ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಇದೇ ಏಪ್ರಿಲ್ 13 ಕ್ಕೆ ಆರಂಭವಾಗಲಿದೆ.
- ನಾಮಪತ್ರ ಸಲ್ಲಿಕೆಗೆ ಕೊನೆ ಏಪ್ರಿಲ್ 20 ರಂದು ಕೊನೆದಿನವಾಗಿದ್ದು ಏಪ್ರಿಲ್ 24 ರವರೆಗೂ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ.
- ಇನ್ನೂ ನಾಮಪತ್ರ ಪರಿಶೀಲನೆಗೆ ಏಪ್ರಿಲ್ 21 ರಂದು ನಡೆಯಲಿದೆ.
- 5.21 ಕೋಟಿ ಮತದಾರರು ಕರ್ನಾಟಕದಲ್ಲಿದ್ದು, ಒಟ್ಟು 224 ಕ್ಷೇತ್ರಗಳಿವೆ, ಈ ಪೈಕಿ 36 ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿವೆ.
ಇನ್ನಷ್ಟು ಪಾಯಿಂಟ್ಸ್ಗಳು
ಕರ್ನಾಟಕ ರಾಜ್ಯ ಸರ್ಕಾರದ ಅವಧಿ ಇದೇ ಮೇ ತಿಂಗಳ 24 ರ ವರೆಗೂ ಇದೆ. ಈ ಅವಧಿಯೊಳಗೆ ಚುನಾವಣೆಯನ್ನು ಮುಗಿಸಬೇಕಿದೆ.
ರಾಜ್ಯದಲ್ಲಿಒಟ್ಟಾರೆ 2,62,42,561 ಪರುಷ ಮತದಾರರಿದ್ದು, ಒಟ್ಟು 2,59,26,319 ಮಹಿಳಾ ಮತದಾರರು ಇದ್ದಾರೆ. ಒಟ್ಟು 4,699 ತೃತೀಯ ಲಿಂಗಿ ಮತದಾರರಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ, 18-19 ವಯಸ್ಸಿನ 9,17,241 ಮತದಾರರು ಈ ಸಲ ಮತವನ್ನು ಚಲಾಯಿಸಲಿದ್ದಾರೆ,
ಇನ್ನೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ
ಏಪ್ರಿಲ್ 1ಕ್ಕೆ 18 ವರ್ಷ ತುಂಬುವವರಿಗೂ ಈ ಬಾರಿ ಮತದಾನ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟು 58.282 ಮತದಾನ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳ ಮಾಹಿತಿ ಹಾಗೂ ಪ್ರಮಾಣ ಪತ್ರ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಇನ್ನೂ ಚುನಾವಣಾ ಅಕ್ರಮದ ಬಗ್ಗೆಯು ವೆಬ್ಸೈಟ್ನಲ್ಲಿ ದೂರು ಸಲ್ಲಿಸಬಹುದಾಗಿದೆ.
2400 ತಂಡಗಳನ್ನು ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ರಚಿಸಲಾಗಿದೆ.
ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, ಮತದಾರರಿಗೆ ಆಮಿಷವೊಡ್ಡುವ ಎಲ್ಲಾ ರೀತಿಯ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS/
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road ,shivamogga news,shivamogga,shivamogga airport,kannada news live,kannada news,shivamogga airport inauguration,shivamogga latest news,pm modi in shivamogga,latest kannada news,shivamogga mp,live news,shivamogga today news,shivamogga airport,kannada live news,karnataka latest news,kannada latest news,pm modi inaugurate shivamogga airport,shivamogga new airport,latest news,karnataka news,breaking news,shivamogga news todaykarnataka assembly election,karnataka assembly election 2023,karnataka election 2023,karnataka election,karnataka elections,karnataka vidhan sabha election 2023,karnataka election news,karnataka assembly elections,karnataka elections 2023,karnataka assembly elections 2023,karnataka,karnataka election 2018,karnataka politics,karnataka latest news,karnataka news,2023 assembly election,assembly election 2023,election commission,2023 election
