SHIVAMOGGA | MALENADUTODAY NEWS | Aug 11, 2024 ಮಲೆನಾಡು ಟುಡೆ
ಮದ್ಯಪ್ರಿಯರಿಗೆ ಸ್ವದೇಶಿ ಮದ್ಯದ ಬ್ರ್ಯಾಂಡ್‌ವೊಂದು ಶೀಘ್ರದಲ್ಲಿಯೇ ಲಭ್ಯವಾಗುತ್ತಿದೆ. ಅದರ ಹೆಸರು ಹುಲಿ. ಹೌದು ಭಾರತೀಯ ಮಾರುಕಟ್ಟೆ ಕರ್ನಾಟಕದ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ, ಪ್ಯೂರ್ ಬೆಲ್ಲದಿಂದ ತಯಾರಾದ ರಮ್‌ವೊಂದು ಹೊರಬಂದಿದೆ. ಈಗಾಗಲೇ ಮದ್ಯ ಇಂಟರ್‌ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಹುಲಿ ರಮ್
ಈ ಬಗ್ಗೆ ಅರುಣ್ ಎಂಬವರು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ನಂಜನಗೂಡು ತಾಲೂಕಿನಲ್ಲಿರುವ ಭಾರತದ ಮೊದಲ ಮೈಕ್ರೋ ಡಿಸ್ಟಿಲರಿಯಲ್ಲಿ ಹುಲಿ ಹೆಸರಿನ world-class single-origin jaggery rum ರಮ್ ತಯಾರಾಗುತ್ತಿದೆ.

8 ವರ್ಷಗಳ ಪರಿಶ್ರಮದ ಬಳಿಕ ಇಂತಹದ್ದೊಂದು ಪ್ರಾಡಕ್ಟ್ ತಯಾರಾಗುತ್ತಿದ್ದು. ಈ ತಿಂಗಳಾಂತ್ಯದಲ್ಲಿ ರಿಟೇಲ್ಸ್ ಮಳಿಗೆಯಲ್ಲಿ ಲಭ್ಯವಾಗಲಿದೆ. ವಿಶೇಷ ಅಂದರೆ ಈ ಮದ್ಯದ ಹೆಸರು ಕನ್ನಡದಲ್ಲಿ ಇಡಲಾಗಿದೆ . ಹುಲಿ ಹೆಸರಿನ ರಮ್ ನ ಬೆಲೆ ಸರಿಸುಮಾರು 2800 ರೂಪಾಯಿ ಆಗಬಹುದು ಎಂದು ಹೇಳಲಾಗಿದ್ದು, ಬೆಲೆ ಕಡಿಮೆಯು ಆಗುವ ಸಾಧ್ಯತೆ ಇದೆಯಂತೆ.
ವಿಶೇಷ ಸೂಚನೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
This is a divine ode to the native spirits of India. Huli (ಹುಲಿ), Kannada for Tiger, is world-class single-origin jaggery rum handcrafted by us at our country’s first micro-distillery. A mad 8-year journey to bring back what our ancestors enjoyed has finally come to fruition! pic.twitter.com/zlHNooUSE7
— Aruna Urs (@Arunaurs) July 27, 2024