MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು.
ಇಲ್ಲಿ ಮುಖ್ಯವಾಗಿ ಎನ್ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು.
As part of their larger violent and disruptionist designs, they also indulged in arson and targeting of vehicles and other establishments, such as Liquor shops, Godowns, transformers etc.
ಆ ಸಂದರ್ಭದಲ್ಲಿ ಇದು ಹೆಚ್ಚು ಚರ್ಚೆಗೆ ಬಂದಿರಲಿಲ್ಲ. ಆದರೆ, ಇದೀಗ ಎನ್ಐಎ ತನ್ನ ತನಿಖೆಯಲ್ಲಿ ಬೆಂಕಿ ಇಟ್ಟಿದ್ದ ಪ್ರಕರಣಗಳನ್ನೆ ಬಯಲಿಗಳೆದಿದೆ.
ನಿನ್ನೆಯಿಂದ ಶಿವಮೊಗ್ಗದಲ್ಲಿ ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರೀಖ್ನನ್ನ ವಿಚಾರಣೆಗೆ ಹಾಗೂ ಮಹಜರ್ಗೆ ಒಳಪಡಿಸಿರುವ ಎನ್ಐಎ ಅಧಿಕಾರಿಗಳು ನಿನ್ನೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಒಂದು ಬಸ್ ಹಾಗೂ ಒಂದು ಕಾರ್ನಲ್ಲಿ ತೆರಳಿದ್ದ ತಂಡ ಚಿಟ್ಟೆಬಯಲಿನಲ್ಲಿ ನಡೆದಿದ್ದ ಗೂಡ್ಸ್ ಆಟೋ ಅಗ್ನಿ ಅವಘಡದ ಪ್ರಕರಣವನ್ನು ವಿಚಾರಿಸಿದೆ. ಇದು ಸ್ಥಳೀಯರಿಗೆ ಹಾಗೂ ಪೊಲೀಸರಿಗೂ ಶಾಕ್ ಕೊಟ್ಟಿದೆ.
ಏಕೆಂದರೆ ಚಿಟ್ಟೆಬೈಲು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಸಂಭವಿಸಿದ್ದ ಟಾಟಾ ಏಸ್ಗೆ ಬೆಂಕಿ ಕೇಸ್ ಕೇವಲ ಆಕಸ್ಮಿಕ ಅಥವಾ ಶಾರ್ಟ್ ಸರ್ಕ್ಯೂಟ್ನಿಂದಾದ ಬೆಂಕಿ ಎಂದೇ ನಂಬಲಾಗಿತ್ತು. ಅದೇ ರೀತಿಯಲ್ಲಿ ಕೇಸ್ ಆಗಿತ್ತು. ಆದರೆ ಅದು ಆಕಸ್ಮಿಕ ಘಟನೆಯಾಗಿರಲಿಲ್ಲ. ಬದಲಾಗಿ, ಅದು ಶಾರೀಖ್ನ ಕೃತ್ಯವಾಗಿತ್ತು. ಶಾರೀಖ್ ಟಾಟಾ ಏಸ್ ಗಾಡಿಗೆ ಬೆಂಕಿ ಹಚ್ಚಿದ್ದ. ಇದನ್ನ ವಿಚಾರಣೆಯಲ್ಲಿ ಆತ ತೋರಿಸಿದ್ದಾನೆ. ಎನ್ಐಎ ಮಹಜರ್ನಲ್ಲಿ ಒಪ್ಪಿಕೊಂಡಿದ್ದಾನೆ.
ಕೇವಲ ಟಾಟಾ ಏಸ್ಗಷ್ಟೆ ಅಲ್ಲದೆ, ಕೋಣಂದೂರಿನಲ್ಲಿ ಲಾರಿ ಹಾಗೂ ಆರಗದಲ್ಲಿ ಡಿಸೇಲ್ ಟ್ಯಾಂಕರ್ ಸೇರಿದಂತೆ ಹಲವು ಕಡೆ ಬೆಂಕಿ ಇಟ್ಟಿದ್ದ ಪ್ರಕರಣಗಳು ಶಾರೀಖ್ನದ್ದೆ ಕೃತ್ಯ ಎಂಬುದು ಗೊತ್ತಾಗಿದೆ. ಶಿವಮೊಗ್ಗದಲ್ಲಿ ಅರೆಸ್ಟ್ ಆಗಿದ್ದ ಓರ್ವ ಶಂಕಿತ ಹಾಗೂ ಶಾರೀಖ್ ಈ ಕೃತ್ಯವೆಸಗಿದ್ದಾರೆ ಎಂಬುದು ಎನ್ಐಎ ತೀರ್ಥಹಳ್ಳಿಯಲ್ಲಿ ಬಯಲು ಮಾಡಿದೆ. ಇನ್ನೂ ಸಹ ತನಿಖೆ ಮುಂದುವರಿದಿದ್ದು, ಇವತ್ತು ಕೂಡ ಇನ್ನಷ್ಟು ಮಾಹಿತಿಗಳು ಶಾರೀಖ್ನಿಂದ ಹೊರಕ್ಕೆ ಬರುವ ಸಾಧ್ಯತೆ ಇದೆ.
ಇನ್ನೂ ಶಾರೀಖ್ನ ಈ ಕೃತ್ಯಗಳು ತೀರ್ಥಹಳ್ಳಿ ಠಾಣೆಗಳಲ್ಲಿ ಫೈರ್ ಆಕ್ಸಿಡೆಂಟ್ ಎಂದು ನಮೂದಾಗಿದೆ. ಆದರೆ ಇದು ಉದ್ದೇಶಪೂರ್ವಕ ಕೃತ್ಯ ಎನ್ನುವುದು ಅಗ್ನಿ ಆಕಸ್ಮಿಕ ಘಟನೆಗಳನ್ನು ಸಹ ಅನುಮಾನದಿಂದ ನೋಡುವಂತೆ ಮಾಡಿದೆ.
READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #