EXCLUSIVE BREAKING | ಎನ್​ಐಎ ತನಿಖೆಯಲ್ಲಿ ‘ಅಗ್ನಿ’ ಸತ್ಯ ಬಯಲು! ತೀರ್ಥಹಳ್ಳಿಯಲ್ಲಿ ಹಲವೆಡೆ ಬೆಂಕಿ ಇಟ್ಟಿದ್ದ ಶಾರೀಖ್! ಆಕಸ್ಮಿಕ ಘಟನೆಗಳಿಗೆಲ್ಲಾ ಈತನೇ ಕಾರಣ! ಏನಿದು

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗದಲ್ಲಿನ ಶಂಕಿತ ಚಟುವಟಿಕೆಗಳ ಸಂಬಂಧ ಆರೋಪಿಗಳನ್ನ ಶಿವಮೊಗ್ಗ ಪೊಲೀಸರೇ ಬಂಧಿಸಿದ್ದರು. ಆ ಸಂದರ್ಭದಲ್ಲಿ ಗುರುಪುರದಲ್ಲಿ ನಡೆದಿ್ದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿದ್ದ ಪ್ರಕರಣ ಬಯಲಾಗಿತ್ತು. ಆನಂತರ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬ್ಲಾಸ್ಟ್ ಪ್ರಕರಣವೂ ಸಹ ಶಿವಮೊಗ್ಗದಲ್ಲಿ ಕೃತ್ಯವಸೆಗಿದ್ದವರಿಗೆ ಲಿಂಕ್ ಆಗಿತ್ತು. ಇದರ ಬೆನ್ನಲ್ಲೆ ಎನ್​ಐಎ ಎರಡು ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು. 

ಇಲ್ಲಿ ಮುಖ್ಯವಾಗಿ ಎನ್​ಐಎ ದಾಖಲಿಸಿದ್ದ ಪ್ರಕರಣದಲ್ಲಿ ಕೋಮು ಭಯೋತ್ಪಾದನೆ ಉಂಟು ಮಾಡುವ ಕಾರಣಕ್ಕೆ ಬೆಂಕಿ ಹಚ್ಚಿದ ಘಟನೆಗಳು ಎಂದು ನಮೂದಿಸಿತ್ತು. 

Shivamogga Malenadu Today

As part of their larger violent and disruptionist designs, they also indulged in arson and targeting of vehicles and other establishments, such as Liquor shops, Godowns, transformers etc.

ಆ ಸಂದರ್ಭದಲ್ಲಿ ಇದು ಹೆಚ್ಚು ಚರ್ಚೆಗೆ ಬಂದಿರಲಿಲ್ಲ. ಆದರೆ, ಇದೀಗ  ಎನ್​ಐಎ ತನ್ನ ತನಿಖೆಯಲ್ಲಿ ಬೆಂಕಿ ಇಟ್ಟಿದ್ದ ಪ್ರಕರಣಗಳನ್ನೆ ಬಯಲಿಗಳೆದಿದೆ. 

READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ*

ನಿನ್ನೆಯಿಂದ ಶಿವಮೊಗ್ಗದಲ್ಲಿ ಕುಕ್ಕರ್​ ಬ್ಲಾಸ್ಟ್ ಆರೋಪಿ ಶಾರೀಖ್​ನನ್ನ ವಿಚಾರಣೆಗೆ ಹಾಗೂ ಮಹಜರ್​ಗೆ ಒಳಪಡಿಸಿರುವ ಎನ್​ಐಎ ಅಧಿಕಾರಿಗಳು ನಿನ್ನೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಒಂದು ಬಸ್ ಹಾಗೂ ಒಂದು ಕಾರ್​ನಲ್ಲಿ ತೆರಳಿದ್ದ ತಂಡ ಚಿಟ್ಟೆಬಯಲಿನಲ್ಲಿ ನಡೆದಿದ್ದ ಗೂಡ್ಸ್ ಆಟೋ ಅಗ್ನಿ ಅವಘಡದ ಪ್ರಕರಣವನ್ನು ವಿಚಾರಿಸಿದೆ. ಇದು ಸ್ಥಳೀಯರಿಗೆ ಹಾಗೂ ಪೊಲೀಸರಿಗೂ ಶಾಕ್ ಕೊಟ್ಟಿದೆ. 

Shivamogga Malenadu Today

ಏಕೆಂದರೆ ಚಿಟ್ಟೆಬೈಲು ಬಸ್ ಸ್ಟ್ಯಾಂಡ್ ಬಳಿಯಲ್ಲಿ ಸಂಭವಿಸಿದ್ದ ಟಾಟಾ ಏಸ್​ಗೆ ಬೆಂಕಿ ಕೇಸ್​ ಕೇವಲ ಆಕಸ್ಮಿಕ ಅಥವಾ ಶಾರ್ಟ್​ ಸರ್ಕ್ಯೂಟ್​ನಿಂದಾದ ಬೆಂಕಿ ಎಂದೇ ನಂಬಲಾಗಿತ್ತು. ಅದೇ ರೀತಿಯಲ್ಲಿ ಕೇಸ್ ಆಗಿತ್ತು. ಆದರೆ ಅದು ಆಕಸ್ಮಿಕ ಘಟನೆಯಾಗಿರಲಿಲ್ಲ. ಬದಲಾಗಿ, ಅದು ಶಾರೀಖ್​ನ ಕೃತ್ಯವಾಗಿತ್ತು. ಶಾರೀಖ್ ಟಾಟಾ ಏಸ್​ ಗಾಡಿಗೆ ಬೆಂಕಿ ಹಚ್ಚಿದ್ದ. ಇದನ್ನ ವಿಚಾರಣೆಯಲ್ಲಿ ಆತ ತೋರಿಸಿದ್ದಾನೆ. ಎನ್​ಐಎ ಮಹಜರ್​ನಲ್ಲಿ ಒಪ್ಪಿಕೊಂಡಿದ್ದಾನೆ. 

ಕೇವಲ ಟಾಟಾ ಏಸ್​ಗಷ್ಟೆ ಅಲ್ಲದೆ, ಕೋಣಂದೂರಿನಲ್ಲಿ ಲಾರಿ ಹಾಗೂ ಆರಗದಲ್ಲಿ ಡಿಸೇಲ್​ ಟ್ಯಾಂಕರ್​ ಸೇರಿದಂತೆ ಹಲವು ಕಡೆ ಬೆಂಕಿ ಇಟ್ಟಿದ್ದ ಪ್ರಕರಣಗಳು ಶಾರೀಖ್​ನದ್ದೆ ಕೃತ್ಯ ಎಂಬುದು ಗೊತ್ತಾಗಿದೆ. ಶಿವಮೊಗ್ಗದಲ್ಲಿ ಅರೆಸ್ಟ್ ಆಗಿದ್ದ ಓರ್ವ ಶಂಕಿತ ಹಾಗೂ ಶಾರೀಖ್ ಈ ಕೃತ್ಯವೆಸಗಿದ್ದಾರೆ ಎಂಬುದು ಎನ್​ಐಎ ತೀರ್ಥಹಳ್ಳಿಯಲ್ಲಿ ಬಯಲು ಮಾಡಿದೆ. ಇನ್ನೂ ಸಹ ತನಿಖೆ ಮುಂದುವರಿದಿದ್ದು, ಇವತ್ತು ಕೂಡ ಇನ್ನಷ್ಟು ಮಾಹಿತಿಗಳು ಶಾರೀಖ್​ನಿಂದ ಹೊರಕ್ಕೆ ಬರುವ ಸಾಧ್ಯತೆ ಇದೆ. 

Shivamogga Malenadu Today

ಇನ್ನೂ ಶಾರೀಖ್​ನ ಈ ಕೃತ್ಯಗಳು ತೀರ್ಥಹಳ್ಳಿ ಠಾಣೆಗಳಲ್ಲಿ ಫೈರ್​ ಆಕ್ಸಿಡೆಂಟ್ ಎಂದು ನಮೂದಾಗಿದೆ. ಆದರೆ ಇದು ಉದ್ದೇಶಪೂರ್ವಕ ಕೃತ್ಯ ಎನ್ನುವುದು ಅಗ್ನಿ ಆಕಸ್ಮಿಕ ಘಟನೆಗಳನ್ನು ಸಹ ಅನುಮಾನದಿಂದ ನೋಡುವಂತೆ ಮಾಡಿದೆ. 

READ | *ಮೆಸ್ಕಾಂ ಪ್ರಕಟಣೆ | ಹೊಳಲೂರು, ಹೊಳೆಹೊನ್ನೂರು, ಪಿಳ್ಳಂಗಿರಿ, ಎಂಆರ್​ಎಸ್​ ನ ಈ ಪ್ರದೇಶಗಳಲ್ಲಿ ಮಾರ್ಚ್​ 10 ರಂದು ವಿದ್ಯುತ್ ಇರೋದಿಲ್ಲ!*

READ | thirthahalli | ಕುಡಿಯಲು ಹಣ ಕೊಟ್ಟಿಲ್ಲ ಅಂತಾ ತೀರ್ಥಹಳ್ಳಿಯಲ್ಲಿ ಹಲ್ಲೆ !

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

Leave a Comment