MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗದಲ್ಲಿ ಒಂದು ಕಡೆ ವಿಶೇಷವಾಗಿ ಹೋಳಿ ಆಚರಣೆ ಮಾಡುತ್ತಿದ್ದರೇ, ಮತ್ತೊಂದು ಕಡೆ ಕೆಲ ಯುವಕರ ಗುಂಪು, ಬೈಕ್ಗಳ ಸೈಲೆನ್ಸರ್ ಆಲ್ಟರ್ ಮಾಡಿಕೊಂಡು ನಗರದ ತುಂಬೆಲ್ಲಾ ಕರ್ಕಶ ಸದ್ದು ಮಾಡಿಕೊಂಡು ಓಡಾಡುತ್ತಿತ್ತು. ಅತ್ತ ಹೋಳಿಯ ಭದ್ರತೆಯ ನಡುವೆ ಶಿವಮೊಗ್ಗ ಪೊಲೀಸರು ಈ ನಿಟ್ಟಿನಲ್ಲಿಯು ಕಾರ್ಯಾಚರಣೆ ನಡೆಸಿದೆ.
ಮೊಬೈಲ್ ಕಳೆದುಹೋಯ್ತಾ? ಹುಡುಕೋದು ಸುಲಭ! ಹೇಗೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!
ಹೋಳಿ ಹಬ್ಬದ ಆಚರಣೆಯ ವೇಳೆ ಶಿವಮೊಗ್ಗ ನಗರದಲ್ಲಿ ಕೆಲವು ಯುವಕರು ತಮ್ಮ ದ್ವಿ ಚಕ್ರ ವಾಹನಗಳ ಸೈಲೆನ್ಸರ್ ಪೈಪ್ ಗಳನ್ನು ಹೆಚ್ಚಿನ ಶಬ್ದ ಬರುವ ರೀತಿ ಮಾರ್ಪಡಿಸಿ, ಕರ್ಕಶ ಶಬ್ದ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ನಗರದಲ್ಲಿ ಸಂಚರಿಸುತ್ತಿದ್ದವರ ಕ್ರಮ ಕೈಗೊಂಡಿದೆ.
ಶಿವಮೊಗ್ಗ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ಅಳವಡಿಸಿದ್ದ ಒಟ್ಟು 10 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಐಎಂವಿ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಿ, ದೋಷಪೂರಿತ ಸೈಲೆನ್ಸರ್ ಪೈಪ್ ಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು ಸಹ ದಾಖಲಿಸಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #