ಹೆಂಡ್ತಿ ಮನೆಗೆ ಬರುವಾಗ ಹೆಜ್ಜೇನಿನ ದಾಳಿ! ದಾರಿಹೋಕರನ್ನ ಬಚಾವ್ ಮಾಡಿದ ಸ್ಥಳೀಯ ನಿವಾಸಿ!

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮಾರುತಿಪುರದಲ್ಲಿ ಹೆಜ್ಜೇನು ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದಾರೆ. ಇಲ್ಲಿನ  ಮೂರ್ತಿ ಪೂಜಾರಿ ಎಂಬವರು ಹೆಜ್ಜೇನಿನದಾಳಿಯಿಂದ ಬಚಾವ್ ಆದವರು. 

READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರ್ತಿಯವರು ಬರುತ್ತಿದ್ದಾಗ ಹೊಸಕೆಸರೆ ಬಳಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೆನು ಕಡಿಯುತ್ತಲೇ ಮೂರ್ತಿಯವರು ಕೂಗಿಕೊಂಡಿದ್ಧಾರೆ. ತಕ್ಷಣ ಇದನ್ನ ಗಮನಿಸಿದ ಅಲ್ಲಿಯೇ ಇದ್ದ ಮೊಹಮ್ಮದ್ ಗೌಸ್ ಎಂಬವರು ಮೂರ್ತಿಯವರನ್ನು ಕಂಬಳಿ ಹಾಕಿ ಎಳೆದುಕೊಂಡು, ಸಂತೈಸಿದ್ದಾರೆ. ಅಲ್ಲದೆ ಮಾರುತಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಜೇನು ನೊಣಗಳು ಕಚ್ಚಿದ್ದು, ಸದ್ಯ ಮೂರ್ತಿಯವರು ಅಪಾಯದಿಂದ ಪಾರಾಗಿದ್ದಾರೆ. ಇನ್ನೂ ಅವರನ್ನು ರಕ್ಷಿಸಿದ ಮೊಹಮ್ಮದ್ ಗೌಸ್​ರ ಕೆಲಸಕ್ಕೆ ಶ್ಲಾಘನೆ ವ್ಯಕ್ತವಾಗ್ತಿದೆ. 

 READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

 
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor