MALENADUTODAY.COM |SHIVAMOGGA| #KANNADANEWSWEB
ಸೈಬರ್ ಕ್ರೈಂಗಳು ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಭದ್ರತಾ ಸಂಸ್ಥೆಗಳ ಸೈಬರ ಸೆಕ್ಯುರಿಟಿ ಟೈಟ್ ಆಗ್ತಿರುವಂತೆ ವಂಚಕರು ನಾನಾ ದಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಯಾರೋ ಇನ್ನೊಬ್ಬರಿಗೆ ಮೋಸ ಮಾಡುವ ಸಲುವಾಗಿ, ಮತ್ತೊಬ್ಬರ ಬ್ಯಾಂಕ್ ಅಕೌಂಟ್ ಬಳಸಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಗಳ ಬಿಡಿಸಲು ಹೋಗಿದ್ದೆ ತಪ್ಪಾಯ್ತು! ಪರಿಚಯಸ್ಥರಿಂದಲೇ ಬಿತ್ತು ಏಟು!
ನಡೆದಿದ್ದೇನು?
ವಿಳಾಸ, ಹೆಸರು ಗೌಪ್ಯವಾಗಿಡಲಾಗಿದ್ದು, ಸುದ್ದಿಯನ್ನು ನೋಡುವುದಾದರೆ, ಶಿವಮೊಗ್ಗ ಜಿಲ್ಲೆ ವ್ಯಕ್ತಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಅಸಲಿಗೆ ಅವರು ಆ್ಯಪ್ ವೊಂದರ ಮೂಲಕ ಸಾಲ ಪಡೆಯಲು ಟ್ರೈ ಮಾಡುತ್ತಿದ್ದರು. ಅದಕ್ಕಾಗಿ ಆ್ಯಪ್ವೊಂದನ್ನ ಬಳಸುತ್ತಿದ್ದಾಗ, ಅದರಲ್ಲಿ ಪಿಡಿಎಫ್ ಪಾಸ್ವರ್ಡ್ ಕೇಳಿದೆ. ಅದರ ಬಗ್ಗೆ ತಿಳಿಯಲು ಸಂತ್ರಸ್ತರು ಗೂಗಲ್ ಸರ್ಚ್ ಮಾಡಿದ್ದಾರೆ. ಅಲ್ಲಿದ್ದ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿದ್ದಾರೆ. ಅತ್ತಕಡೆಯಿಂದ ಪಾಸ್ವರ್ಡ್ ನೀಡುವುದಾಗಿ ಹೇಳಿ, ದೂರುದಾರರಿಗೆ ವಾಟ್ಸ್ಯಾಪ್ ಕಾಲ್ ಮಾಡಿದ್ದಾರೆ, ಆನಂತರ ಓಟಿಪಿ ಹಾಗೂ ಇತರೆ ಬ್ಯಾಂಕ್ ಡಿಟೇಲ್ಸ್ ಕೇಳಿ ಪಾಸ್ವರ್ಡ್ ಬರುತ್ತೆ ಅಂತಾ ತಿಳಿಸಿದ್ದಾರೆ.
ಗೊತ್ತಾಗದ ಹಾಗೆ ಯಾಮಾರಿಸ್ತಾರೆ!?
ಈ ಮಧ್ಯೆ ದೂರುದಾರರು, ತಮ್ಮ ಸ್ನೇಹಿತರಿಂದ 50 ಸಾವಿರ ಸಾಲ ಕೇಳಿದ್ದರು, ಅವರು ಅದನ್ನು ಯುಪಿಐ ಮೂಲಕ ನೀಡಿದ್ದಾರೆ. ಹಣ ಬಂದಿರೋದನ್ನ ಖಾತ್ರಿ ಮಾಡಿಕೊಳ್ಳಲು ಬ್ಯಾಂಕ್ ಹೋದಾಗ, ದೂರುದಾರರಿಗೆ ಶಾಕ್ ಆಗಿತ್ತು. ಏಕೆಂದರೆ ಅವರ ಅಕೌಂಟ್ ಪ್ರೀಜ್ ಆಗಿತ್ತು. ಆನಂತರ ವಿಚಾರಿಸಿದಾಗ, ತಮ್ಮದೇ ಅಕೌಂಟ್ನ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಡಿಟೇಲ್ಸ್ ಬದಲಾಗಿರೋದು ಗೊತ್ತಾಗಿದೆ. ಅಲ್ಲದೆ ಯಾರದ್ದೋ ಅಕೌಂಟ್ನಿಂದ ಹಣವನ್ನು ಇವರ ಅಕೌಂಟ್ಗೆ ವರ್ಗಾವಣೆಯಾಗಿದ್ದು, ಅಲ್ಲಿಂದ ಮತ್ತೆಲ್ಲಿಗೋ ಟ್ರಾನ್ಸಫರ್ ಆಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ವರ್ಗಾವಣೆಯಾದ ಹಣಕ್ಕೂ ತಮಗೂ ಸಂಬಂಧವಿಲ್ಲ, ಹಾಗೂ ತಮ್ಮ ಅಕೌಂಟ್ ಹ್ಯಾಕ್ ಮಾಡಿರುವ ಆರೋಪಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #