SHIVAMOGGA AIRPORT ನಲ್ಲಿ ಉದ್ಯೋಗವಕಾಶದ ಬಗ್ಗೆ ಸಂಸದ ಬಿ.ವೈ ರಾಘವೇಂದ್ರರವರು ನೀಡಿದ ಸ್ಪಷ್ಟನೆ ಏನು!? ಇಲ್ಲಿದೆ ವಿವರ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಉದ್ಯೋಗವಕಾಶಕ್ಕಾಗಿ ಶಿವಮೊಗ್ಗದ ಸಾವಿರಾರು ಯುವಕ-ಯುವಕರು ಪ್ರಯತ್ನಿಸುತ್ತಿದ್ದಾರೆ. ಇದನ್ನೆ ದುರ್ಬಳಕೆ ಮಾಡಿಕೊಳ್ತಿರುವ ಕೆಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಫೇಕ್​ ಜಾಹಿರಾತುಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ. ಈ ಸಂಬಂಧ ನಿನ್ನೆಯಷ್ಟೆ ಜಾಹಿರಾತೊಂದನ್ನ ಹಂಚಿಕೊಂಡಿದ್ದ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್ ಇಂತಹ ಜಾಹಿರಾತು ನಂಬಬೇಡಿ, ಫೇಕ್​ ಜಾಹಿರಾತಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ. 

hosanagara :ಹಳೆಯ ನೀರಿನ ಟ್ಯಾಂಕ್​ ಹತ್ತಿ ಕುಳಿತು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರಿಂದಲೇ ಪ್ರತಿಭಟನೆ! ಏನಿದು ಹೊಸನಗರದಲ್ಲಿ?

ಆದರೆ ಏರ್​ಫೋರ್ಟ್​ನಲ್ಲಿ ಉದ್ಯೋಗವಕಾಶಕ್ಕಾಗಿ ಯಾರ ಬಳಿ ಕೇಳಬೇಕು? ಯಾರನ್ನ ವಿಚಾರಿಸಬೇಕು? ಏಲ್ಲಿ ಮಾಹಿತಿ ಪಡೆಯಬೇಕು ಈ ಯಾವುದು ಮಾಹಿತಿ ಸಹ ಯುವಕರಿಗೆ ಸಿಗುತ್ತಿಲ್ಲ. ಸದ್ಯ ಇದೇ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಂಸದ ಬಿ.ವೈ ರಾಘವೇಂದ್ರರವರು ಉತ್ತರಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ವಿಮಾನ ನಿಲ್ದಾಣದ ಪರಿಶೀಲನೆಗೆ ದೆಹಲಿಯಿಂದ ಫೈನಲ್​ ಪರಿಶೀಲನೆಗೆ ತಂಡವೊಂದು ಬರಲಿಎ. ಅದಾದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ  ಲೈಸೆನ್ಸ್ (Airport Licence) ಸಿಗಲಿದೆ ಎಂದಿದ್ದಾರೆ. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ! ಫೇಕ್​ ಜಾಹಿರಾತು ನಂಬದಿರಿ! ಶಿವಮೊಗ್ಗ ಎಸ್​ಪಿ ಹೇಳಿದ್ದೇನು!?

ಅಲ್ಲದೆ ವಿಮಾನ ನಿಲ್ದಾಣ ನೇಮಕಾತಿ (Airport Jobs) ವಿಚಾರವಾಗಿ ಈತನಕ ಅಧಿಕೃತವಾಗಿ ಯಾವುದೆ ನೇಮಕಾತಿ ಆದೇಶಗಳನ್ನು ಹೊರಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೇಮಕಾತಿ ಆದೇಶಗಳು ಸುಳ್ಳು ಎಂದು ತಿಳಿಸಿದ್ದಾರೆ.  ಈ ಕುರಿತು ಯುವಕರು ಎಚ್ಚರದಿಂದ ಇರುವಂತೆ ತಿಳಿಸಿದ ಸಂಸದ ಬಿ.ವೈ.ರಾಘವೇಂದ್ರ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ಕುರಿತು ಅಧಿಕೃತ ನೇಮಕಾತಿ ಆದೇಶ ಹೊರಡಿಸಿಲ್ಲ. ವಿಮಾನ ನಿಲ್ದಾಣ ಪ್ರಾಧಿಕಾರ (AAI) ತನ್ನಲ್ಲಿರುವ ಸಿಬ್ಬಂದಿಯನ್ನೆ ಬಳಕೆ ಮಾಡಿಕೊಂಡು ವಿಮಾನ ನಿಲ್ದಾಣ (Airport Jobs) ನಿರ್ವಹಣೆ ಮಾಡಲಿದೆ ಎಂದು ತಿಳಿಸಿದರು.

*Shivamogga news : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್*

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor