Singer Mangli : ಸದ್ಯದಲ್ಲಿಯೇ ಶಿವಮೊಗ್ಗಕ್ಕೆ ಬರಲಿದ್ದಾರೆ ಗಾಯಕಿ ಮಂಗ್ಲಿ

ಹಂಚಿಕೊಳ್ಳಿ
WhatsApp Facebook X Telegram

Singer Mangli : ಪ್ರಖ್ಯಾತ ಗಾಯಕಿ  ಸಿಂಗರ್ ಮಂಗ್ಲಿ ಸದ್ಯದಲ್ಲಿಯೇ ಶಿವಮೊಗ್ಗಕ್ಕೆ ಬರಲಿದ್ಧಾರೆ. ಈ ಸಂಬಂಧ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್​ ನಾಯ್ಕ್​ ಮಾಹಿತಿ ನೀಡಿದ್ದಾರೆ. ಇದೇ ಜನವರಿ 30 ರಂದು ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ 15 ಕೋಟಿ ವೆಚ್ಚದ ಬಂಜಾರ ಭವನ ಉದ್ಘಾಟನೆಗೊಳ್ಳಲಿದೆ ಅಂದರು ಗಾಯಕಿ ಮಂಗ್ಲಿ ಬಂಜಾರ ಭವನದ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದು ಸುಮಾರು ಎರಡು ಗಂಟೆ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಅಂತಾ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್​ ನಾಯ್ಕ್​ ತಿಳಿಸಿದ್ದಾರೆ. 

*Shivamogga police : ಮಕ್ಕಳ ಅಶ್ಲೀಲ ವಿಡಿಯೋ ಫೇಸ್​ಬುಕ್​ಗೆ ಅಪ್ಲೋಡ್​/ ಅಮೆರಿಕಾದಿಂದ ಶಿವಮೊಗ್ಗಕ್ಕೆ ಬಂತು ಮಾಹಿತಿ/ ಇಬ್ಬರ ವಿರುದ್ಧ ಕೇಸ್*​

ನಗರದ ಹೃದಯ ಭಾಗದಲ್ಲಿ ಬಂಜಾರ ಭವನ ನಿರ್ಮಾಣವಾಗಿದ್ದು,  ಮದುವೆಗಳಿಗೆ ಹಾಗೂ ಇತರೆ ಶುಭಕಾರ್ಯಗಳಿಗೆ ಈ ಸಮುದಾಯ ಭವನವನ್ನ ಬಾಡಿಗೆ ರೂಪದಲ್ಲಿ ನೀಡಲಾಗುತ್ತಿದ್ದು, ಬಂಜಾರ ಸಂಘದ ಸದಸ್ಯರಿಗೆ 75 ಸಾವಿರ, ಬೇರೆಯವರಿಗೆ 1.5 ಲಕ್ಷ ರೂ ದರನಿಗದಿ ಪಡಿಸಲಾಗಿದೆ ಎಂದರು.  ಇದೇ ಜನವರಿ 30 ರಂದು ಸಿಎಂ ಬಸವರಾಜ್ ಬೊಮ್ಮಾಯಿರಿಂದ ಭವನ ಉದ್ಘಾಟಿಸಲಾಗುತ್ತಿದ್ದು,  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೋಟಾ ಶ್ರೀನಿವಾಸ ಪೂಜಾರಿ ಬರಲಿದ್ದಾರೆ.  ಎನ್ ಇಎಸ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor