bhadravathi ಹೆಂಡತಿ ಮೇಲೆ ಆಸಿಡ್ ಎರಚಿದ ಗಂಡ/ ಭದ್ರಾವತಿಯಲ್ಲಿ ನಡೆದ ಘಟನೆ!

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪತ್ನಿ ಮೇಲೆ ಪತಿಯೇ ಆಸಿಡ್ ಎರಚಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಸಂತ್ರಸ್ತೆಯೇ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ (bhadravati rural police station) ದೂರು ನೀಡಿದ್ಧಾರೆ. ದಾಖಲಾದ ಎಫ್​ಐಆರ್ ಪ್ರಕಾರ , ಕಳೆದ 18 ನೇ ತಾರೀಖು ಈ ಘಟನೆ ನಡೆದಿದೆ. 

ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲ್ಲ: ಕೆ.ಎಸ್​.ಈಶ್ವರಪ್ಪ

ಭದ್ರಾವತಿಯ ಗ್ರಾಮವೊಂದರ ನಿವಾಸಿಯಾದ ಸಂತ್ರಸ್ತೆಯು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ಧಾರೆ. ಬಿಡುವಾದಾಗ ತನ್ನ ಮಕ್ಕಳನ್ನು ನೋಡಲು ತನ್ನ ತಾಯಿ ಮನೆಗೆ ಬರುತ್ತಿದ್ದರು. ಇನ್ನೂ ಪತ್ನಿಯ ಜೊತೆಗೆ ಜಗಳ ತೆಗೆದು ದೂರವೇ ಇದ್ದ ಪತಿಯು ಆಗಾಗ ಪತ್ನಿಯ ತಾಯಿ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ.

ಈ ನಡುವೆ ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಪತ್ನಿಯ ತಾಯಿ ಮನೆಗೆ ಬಂದ ಗಂಡ, ಅದೇ ವೇಳೇ ಊರಿಗೆ ಬಂದಿದ್ದ ಹೆಂಡಿತಿಯ ಜೊತೆಗೆ ಜಗಳ ತೆಗೆದಿದ್ಧಾನೆ. ಕೆಲಸ ಬಿಟ್ಟು ಬಾ ಜೊತೆಗೆ ಎಂದು ಕರೆದ ಪತಿರಾಯ, ಇದೇ ವಿಚಾರಕ್ಕೆ ಜಗಳವಾಡಿದ್ಧಾನೆ. ಅಲ್ಲದೆ ಕೆಲಹೊತ್ತು ಬಿಟ್ಟು ಮನೆಯಿಂದ ಹೊರಹೋಗಿ, ಕ್ಯಾನ್​ವೊಂದರಲ್ಲಿ ಆಸಿಡ್ ತಂದು ಪತ್ನಿಯ ಮೇಲೆ ಎರಚಿದ್ಧಾನೆ. 

ಆಸಿಡ್​ ಎರಚಿದ ಬೆನ್ನಲ್ಲೆ ಸಂತ್ರಸ್ತೆ ನೆಲದ ಮೇಲೆ ಬಿದ್ದು ಒದ್ದಾಡಿದ್ಧಾಳೆ. ತಕ್ಷಣವೇ, ಸಂತ್ರಸ್ತೆಯ ತಾಯಿ ಹಾಗು ಸ್ಥಳೀಯರು ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor