ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ (bejjavalli,ayyappa swamy ) ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಮತ್ತು ಶ್ರೀಗಳ ಪೀಠಾರೋಹಣ ವರ್ಧಂತಿ, ಭಜನೆ, ಭಕ್ತಿ ಭಾವ ಧಾರೆ, ಸಭಾಕಾರ್ಯಕ್ರಮ, ಹರಿಹರಪೀಠ ಪ್ರಶಸ್ತಿ ಪ್ರದಾನ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಇದೇ 14ರಂದು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ?
ಈ ಸಂಬಂಧ ನಿನ್ನೆ ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಟಿ ನಡೆಸಿದ ವಿದ್ಯಾವಾಚಸ್ಪತಿ ಡಾ ||ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಜನವರಿ 14 ರಂದು ಬೆಳಗ್ಗೆ 6 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗುತ್ತದೆ. 8:30ಕ್ಕೆ ಕದಳಿ ಮಂಟಪದಲ್ಲಿ ರಾಜಪಲ್ಲಕ್ಕಿಯ ಮಹಾಪೂಜೆ, ಹರಕೆ ತುಲಾಭಾರ, ಕ್ಷೇತ್ರ ಗಣಗಳ ದೈವದರ್ಶನ, ಪಟ್ಟದ ಆಯುಧಗಳ ಮಹಾಪೂಜೆ ನಡೆಯುವುದು. 1:15ಕ್ಕೆ ಅಯ್ಯಪ್ಪಸ್ವಾಮಿಗೆ ಮಹಾ ಮಂಗಳಾರತಿ, ನಂತರ ಸ್ವಾಮಿಯ ಪಾ ದುಕಾಪೂಜೆ, ಆಭರಣೋತ್ಸವ, ಮಧ್ಯಾ ಹ್ನ 1 ಗಂಟೆಗೆ ಅಯ್ಯಪ್ಪ ಸ್ವಾಮಿಯ ಉಯ್ಯಾಲೆ ಸೇವೆ, 1:45ಕ್ಕೆ ಮಹಾ ಮಂಗಳಾರತಿ ನಡೆಯಲಿದೆ ಎಂದರು.
ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ
2 ಗಂಟೆಗೆ ಧಾರ್ಮಿಕ ಸಭೆ ನಡೆಯ ಲಿದೆ. ಸಾನಿಧ್ಯವನ್ನು ಡಾ|| ವಿಶ್ವಸಂತೋಷ ಸ್ವಾಮೀಜಿ ವಹಿಸುವರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಪೀಠದ ಬಸವ ಮೂರ್ತಿ ಚೆನ್ನಯ್ಯ ಸ್ವಾಮೀಜಿ, ಹೊಸ ಮಠದ ಶಾಂತವೀರ ದುರ್ಗದ ಕುಂಚಿಟಿಗ ಮಹಾಸ್ವಾಮಿಜಿ ಆಗಮಿ ಸುವರು. ಪತ್ರಿಕೆಯ ಉದ್ಘಾಟನೆಯನ್ನು ಕೇಂದ್ರ ಸಚಿವ ಶ್ರೀ ಪಾದ ನಾಯಕ್ ನೆರವೇರಿಸುವರು. ಮಾಡಲಾಗುವುದು ಎಂದರು. ಅಧ್ಯಕ್ಷತೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಹಿಸಿಕೊಳ್ಳುವರು ಎಂದು ಮಅಹಿತಿ ನೀಡಿದ್ದಾರೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com




