ಮೋದಿ & ಬೊಮ್ಮಾಯಿ ವಿರುದ್ಧ ದೇವರಿಗೆ ಉಯಿಲು ಕೊಡಲಿ ಹರತಾಳು ಹಾಲಪ್ಪ

ಹಂಚಿಕೊಳ್ಳಿ
WhatsApp Facebook X Telegram

ಇತ್ತೀಚೆಗೆಷ್ಟೆ ಶರಾವತಿ ಸಂತ್ರಸ್ತರನ್ನು ಕರೆದುಕೊಂದು ಶಾಸಕ ಹರತಾಳು ಹಾಲಪ್ಪರವರು ಧರ್ಮಸ್ಥಳಕ್ಕೆ ಹೋಗಿದ್ದರು, ಅಲ್ಲಿ, ಸಂತ್ರಸ್ತರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮುಂದೆ ತಮ್ಮ ಕೋರಿಕೆಯನ್ನು ಇಟ್ಟು ಪೂಜೆ ಸಲ್ಲಿಸಿದ್ದರು, ನಂತರ ಕಾವಂದರಿಗೂ ತಮ್ಮ ಮನವಿ ಸಲ್ಲಿಸಿ ಶರಾವತಿ ಸಂತ್ರಸ್ತರ ಸ್ಥಿತಿಗತಿಗಳನ್ನು ತಿಳಿಸಿದ್ದರು.  ಈ ಸಂಬಂಧ ಟುಡೆಯಲ್ಲಿನ ವರದಿ ಇಲ್ಲಿದೆ : ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೊರೆ ಹೋದ ಶರಾವತಿ ಸಂತ್ರಸ್ತರು/ ದೇವರಿಗೆ ಮನವಿ ಸಲ್ಲಿಸಿ ಪೂಜೆ/ ಕೋರಿಕೆ

ಹರತಾಳು ಹಾಲಪ್ಪರವರ (haratalu halappa) ಈ ಭೇಟಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸರ್ಕಾರದ ಕೈಯಲ್ಲಿ ಆಗುವುದಿಲ್ಲ ಎಂದು ದೇವರ ಮೊರೆಹೋಗಿರಬಹುದು ಎಂದು ಬೇಳೂರು ಗೋಪಾಲ ಕೃಷ್ಣ (belurgopala krishna)ರವರು ಟೀಕಿಸಿದ್ದರು: ಅದರ ವಿವರ ಇಲ್ಲಿದೆ ಓದಿ : ಹರತಾಳು ಹಾಲಪ್ಪರವರು ಶರಾವತಿ ಸಂತ್ರಸ್ತರಿಗಾಗಿ ಧರ್ಮಸ್ಥಳದಲ್ಲಿ ನ್ಯಾಯ ಕೇಳಲು ಹೋಗಿದ್ದಕ್ಕೆ ಕಾಂತಾರ ಮಹಿಮೆ ಕಾರಣ

ಇದರ ಬೆನ್ನಲ್ಲೆ ನಿನ್ನೆ ಹೊಸನಗರದಲ್ಲಿ ಮಾತನಾಡಿದ ಕಾಂಗ್ರೆಸ್​ ಮುಖಂಡ ಕಿಮ್ಮನೆ ರತ್ನಾಕರ್​ (kimmane ratnakar) ಕೂಡ ಹರತಾಳು ಹಾಲಪ್ಪರ ನಡೆಯನ್ನು ಟೀಕಿಸಿದ್ದಾರೆ. ವೋಟು ಇರುವುದು ಸಾಗರ ಕ್ಷೇತ್ರದಲ್ಲಿ, ಧರ್ಮಸ್ಥಳದಲ್ಲಿ ಅಲ್ಲ, ಶಾಸನ ಸಭೆಯಲ್ಲಿ ಕೇಳಬೇಕಾದ ಪ್ರಶ್ನೆಯನ್ನು ಧರ್ಮಸ್ಥಳದ ಸನ್ನಿಧಿಯಲ್ಲಿ ಕೇಳಿದರೇ ಪ್ರಯೋಜನವೇನು.

ಇದನ್ನು ಸಹ ಓದಿ : ಶಿವಮೊಗ್ಗಕ್ಕೆ ಭ್ರಷ್ಟರು ಎಸಿ ಆಗುವುದು ಬೇಡ/ ರಾಜ್ಯ ಸರ್ಕಾರಕ್ಕೆ ಒತ್ತಾಯ/ ಏನಿದು ಬೇಡಿಕೆ ವಿವರ ಇಲ್ಲಿದೆ ಓದಿ

ನಿಮ್ಮದೇ ಸರ್ಕಾರಗಳಿವೆ, ಶಾಸನ ಸಭೆಯಲ್ಲಿ ಪ್ರಶ್ನೆಯನ್ನು ಕೇಳಲಾಗದಿದ್ದರೇ ರಾಜೀನಾಮೆ ಕೊಡಿ , ಪ್ರಶ್ನೆ ಕೇಳಿಸಿ ಕೆಲಸ ಮಾಡಿಕೊಂಡು ಬರುವಂತವರನ್ನ ಜನರು ಆಯ್ಕೆ ಮಾಡುತ್ತಾರೆ. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿಯವರನ್ನು ಕೇಳಿ ಸಮಸ್ಯೆ ಬಗೆಹರಿಸುವುದು ಬಿಟ್ಟು ಮಾನಸಿಕ ನೆಮ್ಮದಿಗಾಗಿ ಆಶ್ರಯ ಬಯಸಿ ಹೋಗುವ ಧರ್ಮಸ್ಥಳಕ್ಕೆ ಹೋಗಿದ್ದೀರಿ. 

 ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್​ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್

ಕೊನೆಪಕ್ಷ ಅಲ್ಲಿ ದೇವರಿಗೆ ಉಯಿಲು ಬರೆದು ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಕೇಳಿ, ಕೆಲಸ ಮಾಡಿ ಕೊಡದಿದ್ದರೇ ಶಾಪ ಹಾಕಿ ಮೋದಿ, ಬೊಮ್ಮಾಯಿ ವಿರುದ್ಧ ಉಯಿಲು ಬರೆಯಿರಿ ಎಂದು ವ್ಯಂಗ್ಯವಾಡಿದರು

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ನಮ್ಮ ಸೋಶಿಯಲ್​ ಮೀಡಿಯಾ :   ಟ್ವಿಟ್ಟರ್ : ಫೇಸ್​ಬಕ್  : ಇನ್​ಸ್ಟಾಗ್ರಾಮ್  : ಟೆಲಿಗ್ರಾಂ : ವಾಟ್ಸ್ಯಾಪ್​



ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor