ಪ್ರಯಾಣಿಕರಿಗೆ ಮತ್ತೊಂದು ಅನುಕೂಲ / ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಿಂದಲೂ ಸಿಗಲಿದೆ ಸಿಟಿ ಬಸ್​ ಸೌಲಭ್ಯ

ಶಿವಮೊಗ್ಗದಲ್ಲಿ ಸಿಟ್​ ಬಸ್​ಗಳ ಸಂಚಾರವಿದೆಯಾದರೂ ಸಮಯ ಹಾಗೂ ಅನುಕೂಲಕ್ಕೆ ತಕ್ಕಂತೆ ಸಿಟಿ ಬಸ್​ಗಳ ಕೊರತೆಯಿದೆ. ಈ ನಿಟ್ಟಿನಿಲ್ಲ ರೈಲ್ವೆ ನಿಲ್ದಾಣದಿಂದ (shivamogga town railway station) ವಿವಿಧೆಡೆ ಸಿಟಿ ಬಸ್​ಗಳ ಅವಶ್ಯಕತೆ ಇದೆ. ಆ ಸಂಬಂಧ ಪ್ರಯಾಣಿಕರು ಇದುವರೆಗೂ ಸಿಟಿ ಬಸ್​ಗಳ ಅಗತ್ಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ಮಧ್ಯೆ ಶಿವಮೊಗ್ಗ ನಾಗರಿಕರ ಮನವಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿದೆ. ಸಾರಿಗೆ ನಿಗಮದ ಬಸ್ಸ್​ ಸೇವೆಯನ್ನು ರೈಲ್ವೆ ಪ್ರಯಾಣಿಕರಿಗೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ ನಿನ್ನೆ ಮಾತನಾಡಿದ್ದಾರೆ.

ಇದನ್ನು ಸಹ ಓದಿ : ರಾಜ್ಯದ ಪ್ರತಿಷ್ಠಿತ ವಿ.ಐ.ಎಸ್.ಎಲ್ ಕಾರ್ಖಾನೆಯಲ್ಲಿ ಕಬ್ಬಿಣ್ಣ ಹೇಗೆ ತಯಾರಾಗುತ್ತಿತ್ತು ಗೊತ್ತಾ? ಈ ವಿಡಿಯೋ ಅಚ್ಚರಿ ಮೂಡಿಸುತ್ತೆ

ಈ ಸಂಬಂಧ ಮಾತನಾಡಿರುವ ಅವರು ರೈಲ್ವೇ ನಿಲ್ದಾಣದಿಂದ ನಗರದ ಬೇರೆ-ಬೇರೆ ಪ್ರದೇಶಗಳಿಗೆ ಹೊರಡುವ ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ನಿಗಮದ ಬಸ್ಸುಗಳನ್ನು ನಿಯೋಜಿಸಲಾಗುವುದು ಎಂದಿದ್ದಾರೆ. ಅವರ ಮಾತಿನಂತೆ ಸಾರಿಗೆ ಬಸ್​ಗಳು ಈ ಭಾಗದಲ್ಲಿ ಓಡಾಡಿದರೆ, ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.

ಇದನ್ನು ಸಹ ಓದಿ : ಕಾಳಿಂಗ ಸರ್ಪದ ರೋಷಾವೇಷ ಹೇಗಿರುತ್ತೆ ನೋಡಿ

ಆಟೋ ಮೀಟರ್​ ಕಡ್ಡಾಯ, ಇಲ್ಲದಿದ್ದರೇ ಕ್ರಮ

ಶಿವಮೊಗ್ಗ ನಗರದಲ್ಲಿ ಆಟೋ ದರ ನಿಗಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಕೊನೆಯವರೆಗೆ ಸಮಯ ನಿಗಧಿಪಡಿಸಲಾಗಿದೆ. ಈ ಅವಧಿಯೊಳಗಾಗಿ ನಗರದ ಎಲ್ಲಾ ಆಟೋಗಳ ಚಾಲಕರು ತಮ್ಮ ವಾಹನಕ್ಕೆ ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕು. ಹಾಗೂ ಸಮವಸ್ತ್ರ ಧರಿಸುವುದು ಕಡ್ಡಾಯವಾಗಲಿದೆ. ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಇದನ್ನು ಸಹ ಓದಿ :ಅಡಿಕೆ ದರ ಕ್ವಿಂಟಾಲ್​ಗೆ 20 ಸಾವಿರ ಕಡಿಮೆಯಾಗಲು ಬಿಜೆಪಿ ಕಾರಣ? | ಗುಟ್ಕಾ ವ್ಯಾಪಾರಸ್ಥರ ಪರ ನಿಂತ ಮೋದಿ ಸರ್ಕಾರ | ಕಾಂಗ್ರೆಸ್​ ಆರೋಪವೇನು

ಇದನ್ನು ಸಹ ಕ್ಲಿಕ್ ಮಾಡಿ : ಜಿ20 ಸಭೆಗಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟ ಸಕ್ರೆಬೈಲ್​ನ ಜೋಡಿ ಆನೆಗಳು | ಏನಿದು ವಿಶೇಷ ಗೊತ್ತಾ | Exclusive

ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್​ ಗ್ರೂಪ್​ನ ಲಿಂಕ್​ಗೆ ಕ್ಲಿಕ್ ಮಾಡಿ :  Whatsapp 

Leave a Comment