ಸಾಗರದಲ್ಲಿ ಮೀನು ವ್ಯಾಪಾರದ ಹೆಸರಿನಲ್ಲಿ ₹11.45 ಲಕ್ಷ ವಂಚನೆ ಆರೋಪ, ಮೂವರ ವಿರುದ್ಧ ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram
Sagara Police Arrest Absconding Accused After 33 Years
Sagara Police Arrest Absconding Accused After 33 Years

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಸಾಗರ / ರತ್ನಗಿರಿಯ ಮೀನುಗಾರಿಕಾ ದೋಣಿಗಳಿಂದ ಮೀನು ಖರೀದಿಸಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿ, ದಂಪತಿಯಿಂದ ₹11.45 ಲಕ್ಷ ಪಡೆದು ವಂಚಿಸಿದ್ದಾರೆಂಬ ಆರೋಪದಡಿ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ನೆಹರು ನಗರದ ನವಾಯತ್ ಕಾಲೊನಿ ನಿವಾಸಿ ಅಂಜುಂ ಆರಾ (37) ನೀಡಿದ ದೂರಿನ ಮೇರೆಗೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ರಜಾಕ್ (45), ಮಹಾರಾಷ್ಟ್ರದ ರತ್ನಗಿರಿಯ ಶಫೀಕ್ (46) ಹಾಗೂ ಹೊನ್ನಾವರದ ಜುಬೇದಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಅಂಜುಂ ಆರಾ ಅವರ ಪತಿ ಸೈಯದ್ ಮಹಮದ್ ಅವರಿಗೆ 2026ರ ಆಗಸ್ಟ್ 8ರಂದು ರಜಾಕ್ ಪರಿಚಯವಾಗಿದ್ದರು. ಮೀನು ವ್ಯಾಪಾರದಲ್ಲಿ ಪಾಲುದಾರರಾಗುವಂತೆ ರಜಾಕ್ ಒತ್ತಾಯಿಸಿದ್ದರು. ಆಗಸ್ಟ್ 20ರಂದು ಸೈಯದ್ ಮಹಮದ್ ಅವರನ್ನು ಇಕ್ಕೇರಿ ದರ್ಗಾಕ್ಕೆ ಕರೆದೊಯ್ದು, ಅಲ್ಲಿ ಪ್ರಮಾಣ ಮಾಡುವ ಮೂಲಕ ಅವರ ವಿಶ್ವಾಸ ಗಳಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ರತ್ನಗಿರಿಯಲ್ಲಿರುವ ಪಾಲುದಾರರ 2 ಮೀನುಗಾರಿಕಾ ದೋಣಿಗಳಿಂದ ಮೀನು ಖರೀದಿಸಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ರಜಾಕ್ ತಿಳಿಸಿದ್ದರು. ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಹಣ ಪಡೆದ ಬಳಿಕ ಕೊಟ್ಟ ಮಾತು ತಪ್ಪಿದ್ದಾರೆ ಎಂಬುದು ದೂರಿನ ಆರೋಪ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor