ಶಿವಮೊಗ್ಗ ಶಾರ್ಟ್ ನ್ಯೂಸ್: ಯುವಕ ಆತ್ಮಹ*ತ್ಯೆ, ಬಸ್ ಡಿಕ್ಕಿ- ಮಹಿಳೆ ಗಂಭೀರ; ಜೈಲು ಬಳಿ ಮೊಬೈಲ್‌, ಸಿಗರೇಟ್ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
Shivamogga Short News
Shivamogga Short News

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗ ಶಾರ್ಟ್ ನ್ಯೂಸ್ / ಹಗಲಿನಲ್ಲಿ ಶಾಪಿಂಗ್ ಮಾಲ್ ಹಾಗೂ ರಾತ್ರಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ಹೊರವಲಯದ ಸಂತೇಕಡೂರು ಸಮೀಪ ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಸೋಮಿನಕೊಪ್ಪ ಗ್ರಾಮದ ಶಂಕರ್ ನಾಯ್ಕ್ (22) ಮೃತಪಟ್ಟ ಯುವಕ. ಸಂತೇಕಡೂರು ಸಮೀಪದ ಮಹಾಲಕ್ಷ್ಮಿ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಂಕರ್ ನಾಯ್ಕ್, ಹಗಲಿನಲ್ಲಿ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿಯೂ ಉದ್ಯೋಗದಲ್ಲಿದ್ದರು. ಎಂದಿನಂತೆ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದ ಅವರು, ಬಂಕ್ ಪಕ್ಕದಲ್ಲಿರುವ ಯುಪಿಎಸ್ ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸುವ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ,. ತುಂಗಾನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಲಾರಿ ಹಿಂದಿಕ್ಕಲು ಮುಂದಾದ ಖಾಸಗಿ ಬಸ್ ಮಹಿಳೆಗೆ ಡಿಕ್ಕಿ; ತಲೆಗೆ ಗಂಭೀರ ಗಾಯ

ಮುಂದೆ ಸಂಚರಿಸುತ್ತಿದ್ದ ಲಾರಿಯನ್ನ ಹಿಂದಿಕ್ಕಲು ಮುಂದಾದ ಖಾಸಗಿ ಬಸ್ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಇಂದಿರಾ ಎಂದು ಗುರುತಿಸಲಾಗಿದೆ. ರಿಪ್ಪನ್‌ಪೇಟೆಯ ಗುಡ್ ಶೆಫರ್ಡ್ ಚರ್ಚ್ ಸಮೀಪ ಈ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿಯಿಂದ ಸಾಗರದ ಕಡೆಗೆ ಪ್ರಯಾಣಿಸುತ್ತಿದ್ದ ರಾಜಲಕ್ಷ್ಮಿ ಹೆಸರಿನ ಖಾಸಗಿ ಬಸ್‌ನ ಚಾಲಕ, ತನ್ನ ಮುಂದಿದ್ದ ಲಾರಿಯನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಬಸ್ ಮಹಿಳೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದ ಕಾಂಪೌಂಡ್ ಬಳಿ 5 ಮೊಬೈಲ್‌, ಬ್ಯಾಟರಿ, ಸಿಗರೇಟ್ ಪತ್ತೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಕೇಂದ್ರ ಕಾರಾಗೃಹದ ಆವರಣದೊಳಗೆ ನಿಷೇಧಿತ ವಸ್ತುಗಳನ್ನು ತಲುಪಿಸಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ಕಾರಾಗೃಹದ ಹೊರಭಾಗದ ಕಾಂಪೌಂಡ್ ಸಮೀಪ ಇರಿಸಲಾಗಿದ್ದ ಮೊಬೈಲ್‌ಗಳು, ಬ್ಯಾಟರಿಗಳು, ಸಿಗರೇಟ್ ಸೇರಿದಂತೆ ಹಲವು ವಸ್ತುಗಳನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಏರಿಯಾ ಡಾಮಿನೇಷನ್ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಇರಿಸಲಾಗಿದ್ದ ಎರಡು ಪೊಟ್ಟಣಗಳು ಕಂಡುಬಂದಿವೆ. ಪೊಟ್ಟಣಗಳನ್ನು ತೆರೆದಾಗ 1 ಆಂಡ್ರಾಯ್ಡ್ ಮೊಬೈಲ್, 4 ಸಾಮಾನ್ಯ ಮೊಬೈಲ್‌ಗಳು, 6 ಬ್ಯಾಟರಿಗಳು, 1 ಚಾರ್ಜರ್, ಹೆಡ್‌ಫೋನ್ ಹಾಗೂ ಸಿಗರೇಟ್ ಮತ್ತು ಬೀಡಿ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಘಟನೆಯ ಕುರಿತು ಕಾರಾಗೃಹ ಸಿಬ್ಬಂದಿ ನೀಡಿದ ದೂರಿನ ಆಧಾರದಲ್ಲಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor