ಸುದ್ದಿಯ ಸ್ಥಳ: Bengaluru, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಒಂದ್ಕಡೆ ದೀಪಾವಳಿ ಹಬ್ಬ, ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆ, ಈಚೆ ಬಂದರೆ, ಗಾಂಧಿ ಬಜಾರ್ನಲ್ಲಿ ಪುಲ್ ವಹಿವಾಟಿನ ಅಬ್ಬರ! ಹಂಗಾಗಿ, ನಿನ್ನೆ ಮಧ್ಯಾಹ್ನದಿಂದಲೇ ಶಿವಮೊಗ್ಗ ಹೊಳೆಬಸ್ಸ್ಟಾಪ್ ನಿಂದ ಹಿಡಿದು ಬಸ್ ನಿಲ್ದಾಣದವರೆಗೂ ಪುಲ್ ಜಾಮ್ ಆಗ್ತಿತ್ತು. ಅದರಲ್ಲಿಯು ಅಮಿರ್ ಅಹಮ್ ಸರ್ಕಲ್ನಲ್ಲಿ ಕೇವಲ ಟುವೆ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವೆಹಿಕಲ್ ಗಳು ಸಿಕ್ಕಸಿಕ್ಕಲ್ಲಿ ನುಗ್ಗಲು ಆರಂಭಿಸಿದ್ವು. ಪರಿಣಾಮ ಜಾಮ್ ಹೆಚ್ಚಾಯ್ತು.
ಸಂಜೆ ಹೊತ್ತಿಗೆ ಗಾಂಧಿ ಬಜಾರ್ನ ರಶ್ ಅಮಿರಾಮ ಸರ್ಕಲ್ ದಾಟಿ ನಿಂತ್ತಿತ್ತು. ಈಚೆಗೆ ಚರ್ಚ್ ದಾಟಿ ಪಾಲಿಕೆವರೆಗೂ ಜನದಟ್ಟಣೆಯಿತ್ತು. ಇನ್ನೂ ಈ ಕಡೆ ವೀರಭದ್ರೇಶ್ವರ ಥಿಯೇಟರ್ ವರೆಗೂ ಜನರ ಓಡಾಟ ಹೆಚ್ಚಿದ್ರೆ ಹಳೆದ ಶಿವಮೊಗ್ಗದ ಏರಿಯಾಗಳೆಲ್ಲಾ ಭರ್ಜರಿ ವಹಿವಾಟಿನ ಬೀದಿಗಳಗಾಗಿದ್ದವು. ಈಥರ ಜನರ ರಶ್ ನಡುವೆ ದಾರಿಮಾಡಿಕೊಂಡು ವೆಹಿಕಲ್ಗಳಲ್ಲಿ ಓಡಾಡುವಷ್ಟರಲ್ಲಿ ಸವಾರರು ಸುಸ್ತು ಹೊಡೆಯುತ್ತಿದ್ದರು. ಇನ್ನೂ ವೆಹಿಕಲ್ಗಳು ಜಾಮ್ ಆಗಿದ್ದನ್ನ ಬಿಡಿಸೋಕೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಎಷ್ಟು ಬೆವರು ಹರಿಸಿದ್ರೋ ಏನೋ?
ಸಂಜೆ ಕಥೆ ಹೀಗಾದರೆ, ಕತ್ತಲಾದ ಮೇಲೆ, ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆಯಿಂದಾಗಿ ತುಸು ಜಾಸ್ತಿನೇ ಟ್ರಾಫಿಕ್ ಜಾಮ್ ಆಯ್ತು. ಆ ಕಡೆ ಹೊಸ ಸೇತುವೆ ಕಡೆಗೆ ವೆಹಿಕಲ್ಗಳನ್ನ ಮೂವ್ ಮಾಡಿದ್ರು. ಈ ಕಡೆ ಟ್ರಾಫಿಕ್ ಕಡಿಮೆಯಾಗಿರಲ್ಲ. ಇತ್ತ ಹಬ್ಬದ ಖರೀದಿಗೆ ಬರುವವರ ಸಂಖ್ಯೆ ಸಹ ಹೆಚ್ಚಾಯ್ತು. ಮನೆಗೆ ಹೋಗುವವರ ಮೂಮೆಂಟ್ ಸಹ ಶುರುವಾಗಿ ಶಿವಮೊಗ್ಗದ ಮೇನ್ ಮೇನ್ ರಸ್ತೆಗಳೆಲ್ಲಾ ಥೇಟು ಬೆಂಗಳೂರಿನ ಗಲ್ಲಿ ಟ್ರಾಫಿಕ್ನಂತೆ ಕಂಗೊಳಿಸಿತ್ತು.
ಹಾರ್ನ್ಗಳ ಶಬ್ದ, ವೆಹಿಕಲ್ಗಳ ಹೊಗೆ ನಡುವೆ ವೆಹಿಕಲ್ ಸವಾರರ ಹೋಗಪ್ಪ ಮುಂದೆ ಅನ್ನುವ ಆರ್ಭಟದ ನುಡಿಗಳ ನಡುವೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ತಮ್ಮ ಮನೆ ಸಂಸಾರನೆಲ್ಲಾ ಮರೆತು ಡ್ಯೂಟಿ ಮಾಡಿದ್ರು. ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಒಂದು ಹಂತದಲ್ಲಿ ಹೊಳೆಬಸ್ಸ್ಟಾಪ್ ಕಡೆಯಿಂದ ಸೇತುವೆ ಮೇಲೆ ಓಡುತ್ತಾರೆ. ಯಾವುದೋ ವೆಹಿಕಲ್ನಿಂದ ಟ್ರಾಫಿಕ್ ಮೂವ್ ಆಗದನ್ನ ಗಮನಿಸಿದ ಅವರು ಓಡೋಡಿ ಅದನ್ನ ಸರಿಪಡಿಸುತ್ತಾರೆ. ಅವರ ಜೊತೆಗೆ ಎಸ್ಐ ಮೇಡಂಗಳು ಸಹ ಒಂದೊಂದು ದಿಕ್ಕಿನಲ್ಲಿ ನಿಂತು, ಸರ್ಕಲ್ಗಳ ಸಿಗ್ನಲ್ಗಳಂತೆ ದಾರಿ ತೋರಿಸುತ್ತಾರೆ. ವಿಶೇಷ ಕಾರ್ಯಾಚರಣೆಯ ವೆಹಿಕಲ್ ಜೊತೆಗೆ ಹೆಚ್ಚುವರಿ ಸಿಬ್ಬಂದಿಗಳು ಸಹ ಸಂಚಾರ ದಟ್ಟಣೆಯನ್ನ ಕಂಟ್ರೋಲ್ ಮಾಡೋದಕ್ಕೆ ಹರಸಾಹಸ ಪಟ್ಟರು.
ಶಿವಮೊಗ್ಗ ಟ್ರಾಫಿಕ್ ಪೊಲೀಸ್
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಕ್ಕೆ ವಿವಿಧ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಹಬ್ಬದ ಖರೀದಿ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಗರಕ್ಕೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಅದೇ ರೀತಿ ಶಿವಮೊಗ್ಗದಿಂದ ವಿವಿಧ ಊರುಗಳಿಗೆ ತೆರಳುವ ವಾಹನಗಳ ಸಂಚಾರವೂ ಅಧಿಕವಾಗಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ನಗರದ ಎಂ.ಆರ್.ಎಸ್. ವೃತ್ತ, ಹೊಳೆಹೊನ್ನೂರು ವೃತ್ತ, ಶಂಕರಮಠ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಶೋಕ ವೃತ್ತ, ಸಂದೇಶ್ ಮೋಟಾರ್ಸ್ ವೃತ್ತ ಹಾಗೂ ಬೈಪಾಸ್ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತಾದರೂ, ವಾಹನಗಳ ಸವಾರರು ಮಾತು ಕೇಳಬೇಕಲ್ಲ. ಎಲ್ಲಂದರಲ್ಲಿ ನುಗ್ಗಿಸಿ ಜಾಮ್ ಮಾಡಿಕೊಂಡು ನಡುರಸ್ತೆಯಲ್ಲಿ ನೀನ್ ಹೋಗು, ನೀನ್ ಹೋಗು ಅಂತಿದ್ದರೇ, ಪೊಲೀಸರಿಗೂ ಕೋಪ ನೆತ್ತಿಯ ತುದಿಗೆ ಏರಿರುತ್ತೆ. ಹಾಗಿದ್ರೂ ನಿನ್ನೆ ಮಾತ್ರ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಎಲ್ಲವನ್ನ ಕೂಲ್ ಕೂಲ್ ಹಾಗಿ ಹ್ಯಾಂಡಲ್ ಮಾಡಿಕೊಂಡ ಟೆನ್ಶನ್ಗಳನ್ನ ತಮ್ಮೊಳಗೆ ಇಟ್ಟುಕೊಂಡರು.
ಸಂಚಾರಕ್ಕೆ ಉಂಟಾಗಿದ್ದ ಅಡಚಣೆ ತಪ್ಪಿಸುವ ಸಲುವಾಗಿ ಡೈವರ್ಷನ್ ಪಾಯಿಂಟ್ಗಳನ್ನ ಮಾಡಲಾಗಿತ್ತು. ಅಲ್ಲದೆ ಸಂಪರ್ಕ ರಸ್ತೆ ಹಾಗೂ ಮಾರ್ಗ ಬದಲಾವಣೆ ಸ್ಥಳಗಳಲ್ಲಿಯೂ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ನಗರಕ್ಕೆ ಬರುವ ಮತ್ತು ನಗರದಿಂದ ಹೊರಹೋಗುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಂಡ ಪೊಲೀಸರು ಕೊನೆಗೂ ತಮ್ಮ ಕೆಲಸದಲ್ಲಿ ಸಕ್ಸಸ್ ಕಂಡರಾದರೂ, ಅವರಲ್ಲಿ ಹಬ್ಬದ ಉತ್ಸಾಹ ಉಳಿದಿರಲಿಲ್ಲ.
