ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಸಿಟಿಯಲ್ಲಿ ನಿನ್ನೆ ಫುಲ್ ರಶ್, ದೀಪಾವಳಿ ಹಬ್ಬರ ಖರೀದಿಯ ಜೊತೆಜೊತೆಗೆ ವಿದ್ಯಾನಗರದಲ್ಲಿ ಗಣಪತಿ ವಿಸರ್ಜನೆ ಇವೆರಡರ ನಡುವೆ ಹಬ್ಬಕ್ಕೆ ಬರುವವರು ಮತ್ತವರು ಬರುತ್ತಿರುವವರ ವೆಹಿಕಲ್ಗಳು.. ಇದರಿಂದಾಗಿ ಪೊಲೀಸರು ನಿನ್ನೆ ದಿನ ಫುಲ್ ಸುಸ್ತು ಹೊಡೆದಿದ್ದರು. ಅದರಲ್ಲಿಯು ಟ್ರಾಫಿಕ್ ಪೊಲೀಸರಿಗೆ ಹರಸಾಹಸದ ಟಾಸ್ಕ್ ಒಂದ್ಕಡೆ ಹಬ್ಬಕ್ಕೆ ಊರಿಗೆ ಹೋಗ್ತಿನಿ ಅನ್ನೋ ಮನೆಯವರನ್ನ ಬಿಟ್ಟುಬರಲು ಆಗದಿರೋವಷ್ಟು ತೊಂದರೆ ಕೊಟ್ಟಿತ್ತು. ಇನ್ನೊಂದು ಕಡೆ ದೊಡ್ಡಪೇಟೆ ಪೊಲೀಸರಿಗೆ ಹಬ್ಬದ ಬಂದೋಬಸ್ತ್ ಪಜೀತಿ, ಊರಿನವರಿಗೆ ಹಬ್ಬ ಮಾಡೋದಕ್ಕೆ ಬಿಟ್ಟು, ನಾವು ಬೀದಿ ಕಾಯೋದಾಯ್ತಲ್ಲ ಅಂತಾ ಅನಿಸುವಂತೆ ಮಾಡಿತ್ತು. ಹಾಗಿದ್ದರೂ ಖಾಕಿ ತೊಟ್ಟಾಗಿದೆ ಬಿಡುವಂತಿಲ್ಲ, ಮನೆ ಸಂಸಾರ ಅಂತಾ ನೋಡುವುದಕ್ಕು ಮೊದಲು ಸಾಮಾಜಿಕ ಶಾಂತಿ ಸುವ್ಯವಸ್ಥೆಯೇ ಮುಖ್ಯ ಅದ್ಕೊಂಡು ಸಾಯಿಕುಮಾರ್ ರೇಂಜಿಗೆ ಸಮಾಧಾನ ತಗೊಂಡು ಡ್ಯೂಟಿ ಮಾಡುತ್ತಿದ್ದರು.
ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಡ್ಯೂಟಿ ಅಂದರೆ ಸುಮ್ಮನೇನಾ
ಹೇಳಿಕೇಳಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ದೊಡ್ಡಪೇಟೆಯೆ ಸರಿ. ಎಲ್ ಆಂಡ್ ಓ ಇಲ್ಲಿನ ಸಮಸ್ಯೆಯಲ್ಲ. ಸೂಕ್ಷ್ಮತೆಯೇ ಇಲ್ಲಿಯ ಬಿಗ್ ಬಾಸ್ನ ಪ್ಲಾಬ್ಲಮ್ ಹಾಗಾಗಿ ಪ್ರತಿದಿನವೂ ಇಲ್ಲಿನ ಇನ್ಸ್ಪೆಕ್ಟರ್ನಿಂದ ಹಿಡಿದು ಸೆಂಟ್ರಿಯವರೆಗೂ ಮನಸ್ಸಲ್ಲಿ ಎಕ್ಟ್ರಾ ಬ್ಯಾಟ್ರಿ ಚಾರ್ಜ್ ಇಟ್ಕೊಂಡು ಕೆಲಸ ಮಾಡುತ್ತಾರೆ. ಹಬ್ಬದ ಕಾರಣಕ್ಕೆ ನಿನ್ನೆ ಈ ಡ್ಯೂಟಿ ದೊಡ್ಡಪೇಟೆ ಪೊಲೀಸರಿಗೆ ತ್ರಿಬಲ್ ಆಗಿತ್ತು. ಹಾಗಾಗಿ ಸಿಬ್ಬಂದಿ ಜೊತೆಗೆ ಖುದ್ದು ಫೀಲ್ಡಿಗೆ ಇಳಿದ ದೊಡ್ಡಪೇಟೆ ಇನ್ಸ್ಟೆಕ್ಟರ್ ಸತ್ಯನಾರಾಯಣ್ ತಮ್ಮ ಸ್ಟೇಷನ್ ವ್ಯಾಪ್ತಿಯಿಡಿ ಸುತ್ತಾಡಿ ಗಸ್ತು ಮಾಡಿದ್ರು. ಲಾಠಿ ಹಿಡಿದೆ ಫೀಲ್ಡ್ ನಲ್ಲಿ ಓಡಾಡಿದ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಜನರ ರಶ್ ನಡುವೆ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದರು. ಅದರಲ್ಲಿಯು ಮೊಬೈಲ್ ಕಳ್ತನ ವಿಪರೀತ ಆಗುವ ಸಾಧ್ಯತೆ ಇದ್ದಿದ್ದರಿಂದ ಏರಿಯಾದೆಲ್ಲೆಡೆ ಬೀಟ್ ಹಾಕುತ್ತಲೇ ಇದ್ದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಪ್ರೈವೇಟ್ ಬಸ್ ಸ್ಟಾಪ್, ಗಾಂಧಿ ಬಜಾರ್, ಅಮಿರ್ ಅಹಮದ್ ಸರ್ಕಲ್ ಹೀಗೆ ಪ್ರತಿ ಏರಿಯಾದಲ್ಲಿಯು ಓಡಾಡಿದ ದೊಡ್ಡಪೇಟೆ ಪೊಲೀಸರು ರೂಟ್ ಮಾರ್ಚ್ ನಡೆಸಿದ್ರು. ತಡರಾತ್ರಿ ರಶ್ ಕಳೆದು, ಹಬ್ಬದ ವಹಿವಾಟು ಮುಗಿವರೆಗೂ ಬಂದೋಬಸ್ತ್ ನೋಡಿಕೊಂಡ ದೊಡ್ಡಪೇಟೆ ಪೊಲೀಸರು, ಯಾವುದೆ ಅಚಾತುರ್ಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯು ತಂಟೆ ಮಾಡುವ ಸ್ಟಂಟ್ ಮ್ಯಾನ್ಗಳಿಗೆ ಅಲ್ಲಲ್ಲೆ ವಾರ್ನಿಂಗ್ ಕೊಡುವುದನ್ನ ಸಹ ತಪ್ಪಿಸಲಿಲ್ಲ.
ದೊಡ್ಡ ಹಬ್ಬ ದೀಪಾವಳಿ,ಈ ಸಂಭ್ರಮದ ಕಳೆಯಲ್ಲಿ ಚೂರು ಕಲೆಯಾಗಬಾರದೆಂದು ತಮ್ಮ ಮನೆಯ ಸಡಗರ ಬಿಟ್ಟು ಡ್ಯೂಟಿ ಮಾಡಿದ ದೊಡ್ಡಪೇಟೆಯ ಪೊಲೀಸರಿಗೊಂದು ಸೆಲ್ಯೂಟ್.
