ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಯಲ್ಲಿ ಇವತ್ತು ಅಂದರೆ 03/11/2026 ರ ಮಂಗಳವಾರದಂದು ನಡೆದ ಅಡಿಕೆ ವಹಿವಾಟಿನ ವಿವರ ಹೀಗಿದೆ.
ಮಾರ್ಕೆಟ್ನಲ್ಲಿ ಹಸ ಅಡಿಕೆ ಬರೋಬ್ಬರಿ 92,859 ರೂಪಾಯಿಗಳ ಗರಿಷ್ಠ ದರಕ್ಕೆ ಮಾರಾಟವಾಗಿದೆ. ಈ ಅಡಿಕೆಯ ಕನಿಷ್ಠ ದರ 53,000 ರೂಪಾಯಿಗಳಾಗಿದ್ದು, 90,530 ರೂಪಾಯಿ ಮಾದರಿ ರೇಟನ್ನ ಪಡೆದುಕೊಂಡಿತ್ತು
ಮತ್ತೊಂದೆಡೆ, ಬೆಟ್ಟೆ ಕನಿಷ್ಠ 52,200, ಗರಿಷ್ಠ 59,199 ರೂಪಾಯಿಗಳವರೆಗೆ ಬಿಕರಿಯಾಗಿದೆ, ಇತ್ತ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಂಧರೆ 5226 ಕ್ವಿಂಟಾಲ್ ಆವಕ ಕಂಡಿರುವ ರಾಶಿ ಇಡಿ ಕನಿಷ್ಠ 42,009 ರೂಪಾಯಿ ಹಾಗೂ ಗರಿಷ್ಠ 50,000 ರೂಪಾಯಿಗಳಿಗೆ ಮಾರಾಟವಾಗಿದ್ದು, 49,069 ರೂಪಾಯಿ ಮಾದರಿ ರೇಟು ಪಡೆದು ವಹಿವಾಟು ಮುಗಿಸಿದೆ.
ಹೊಸ ರಾಶಿ ಇಡಿ ಅಡಿಕೆಯು 36,399 ರೂಪಾಯಿಗಳ ಕನಿಷ್ಠ ಹಾಗೂ 49,109 ರೂಪಾಯಿಗಳ ಗರಿಷ್ಠ ದರದಲ್ಲಿ ವಹಿವಾಟು ಪೂರೈಸಿದೆ. ಗೊರಬಲು ಅಡಿಕೆಯು ಕನಿಷ್ಠ 19,001 ರೂಪಾಯಿಗಳಿಂದ ಆರಂಭವಾಗಿ ಗರಿಷ್ಠ 40,259 ರೂಪಾಯಿಗಳವರೆಗೆ ಮಾರಾಟವಾಗಿದೆ
