ದೀಪಾವಳಿಯೊಳಗೆ ಸೆಲ್ಲರ್‌ನಲ್ಲೇ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಿ; ಆಸ್ಪತ್ರೆಗಳಿಗೆ ಟ್ರಾಫಿಕ್ ಪೊಲೀಸ್​ ಡೆಡ್​ಲೈನ್! ವಿಡಿಯೋ ಸ್ಟೋರಿ

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Police Warns Private Hospitals Over Parking Issues
Shivamogga Traffic Police Warns Private Hospitals Over Parking Issues

ಮಲೆನಾಡು ಟುಡೆ ಸುದ್ದಿ / ಇಷ್ಟು ದಿನ ಪುಟ್​ಪಾತ್ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸ್ತಿದ್ದ ಶಿವಮೊಗ್ಗ ಸಂಚಾರಿ ಪೊಲೀಸರು, ಇದೀಗ ದೈರ್ಯ ಮಾಡಿ ಆಸ್ಪತ್ರೆಗಳಿಗೆ ಪಾರ್ಕಿಂಗ್ ಪಾಠ ಹೇಳಿಕೊಡಲು ಆರಂಭಿಸಿದ್ದಾರೆ ಈ ನಿಟ್ಟಿನಲ್ಲಿ ಟ್ರಾಫಿಕ್ ಇನ್​ಸ್ಪೆಕ್ಟರ್ ದೇವರಾಜ್​ ಆಸ್ಪತ್ರೆಯ ಪ್ರತಿನಿಧಿಗಳನ್ನ ಕರೆಸಿಕೊಂಡು ಮೀಟಿಂಗ್​ ಮಾಡಿದ್ದಾರಷ್ಟೆ ಅಲ್ಲದೆ ದೀಪಾವಳಿಯೊಳಗೆ ಕೆಲಸ ಆಗಬೇಕು ಎಂದು ಡೆಡ್​ಲೈನ್ ಸಹ ಕೊಟ್ಟಿದ್ದಾರೆ.

ಶಿವಮೊಗ್ಗ ನಗರದ ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ನೂರಾರು ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಕಟ್ಟಡಗಳಿವೆ. ಈ ಪೈಕಿ ಹಲವು ಪ್ರತಿಷ್ಟಿತ ಆಸ್ಪತ್ರೆಗಳಿವೆ. ಆದರೆ ಈ ಆಸ್ಪತ್ರೆಗಳಲ್ಲಿ ಹಲವು ತಮ್ಮ ಆಸ್ಪತ್ರೆಗೆ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ಜನರು ರಸ್ತೆ ಮೇಲೆ ವಾಹನಗಳನ್ನ ಪಾರ್ಕ್​ ಮಾಡುತ್ತಾರೆ. ಅಷ್ಟೆಅಲ್ಲದೆ ಆಸ್ಪತ್ರೆಗೆ ಬರುವವರು ರಸ್ತೆಯುದ್ದಕ್ಕೂ ಕಾರುಗಳನ್ನ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಪಾರ್ಕಿಂಗ್​ಗೆ ಜಾಗ ಸಿಗುತ್ತಿಲ್ಲ.ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೂ ಸಮಸ್ಯೆ ಕಿರಿಕಿರಿ ದಿನನಿತ್ಯ.

ಇನ್ನೂ ರಗಳೆ ಆಗುತ್ತದೆ ಎಂದು ಗೊತ್ತಿದ್ದರೂ ಕೆಲವು ಆಸ್ಪತ್ರೆಗಳು ಪಾರ್ಕಿಂಗ್​ ವ್ಯವಸ್ಥೆಯ ಬಗ್ಗೆ ಕ್ರಮವೇ ಕೈಗೊಂಡಿಲ್ಲ. ಮೇಲಾಗಿ ತಮ್ಮ ಆಸ್ಪತ್ರೆ ಕಟ್ಟಡದ ಸೆಲ್ಲರ್​ಗಳನ್ನ ತಮ್ಮದೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಹಿಂದೊಮ್ಮೆ ಪಾಲಿಕೆಗೆ ಬಂದಿದ್ದ ಖಡಕ್ ಮಹಿಳಾ ಅಧಿಕಾರಿ, ಈ ನಿಟ್ಟಿನಲ್ಲಿ ಆಸ್ಪತ್ರೆಯಷ್ಟೆ ಅಲ್ಲದೆ ಪ್ರತಿಷ್ಟಿತರ ಕಟ್ಟಡಗಳ ಸೆಲ್ಲರ್​ಗಳನ್ನ ಸಹ ಪಾರ್ಕಿಂಗ್​ ಗಾಗಿ ಓಪನ್ ಮಾಡಿಸಿದ್ದರು. ಆದರೆ ಆನಂತರ ಯಥಾಸ್ಥಾನ…. ಆಗೋಯ್ತು.

ಇದೀಗ ಪ್ರತಿದಿನ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ದೇವರಾಜ್ ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ದೀಪಾವಳಿ ಹಬ್ಬದೊಳಗೆ ಆಸ್ಪತ್ರೆಗಳ ಸೆಲ್ಲರ್‌ನಲ್ಲಿಯೇ ವಾಹನಗಳ ನಿಲುಗಡೆಗೆ ಕಡ್ಡಾಯವಾಗಿ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.

ಶಿವಮೊಗ್ಗ ಟ್ರಾಫಿಕ್ ಪೊಲೀಸ್ ವೃತ್ತ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಯ ಪ್ರತಿನಿದಿಗಳ ಸಭೆಯಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ ಬರುವವರ ವಾಹನಗಳು ಅಡ್ಡಾದಿಡ್ಡಿಯಾಗಿ ರಸ್ತೆಯಲ್ಲೇ ಪಾರ್ಕಿಂಗ್ ಆಗುತ್ತಿರುವುದರಿಂದ ಟ್ರಾಫಿಕ್​ಗೆ ಸಮಸ್ಯೆ ಆಗ್ತಿದೆ. ಈ ಬಗ್ಗೆ ಹಲವು ದೂರುಗಳಿವೆ. ಮೆಲಾಗಿ ಹಲವು ಸಲ ತಿಳಿಹೇಳಲಾಗಿದೆ. ಟ್ರಾಫಿಕ್ ಪೊಲೀಸ್ ಗಸ್ತಿನ ಸಂದರ್ಭದಲ್ಲೂ ವಾಹನ ದಟ್ಟಣೆಯ ಸಮಸ್ಯೆ ಎದ್ದು ತೋರುತ್ತಿದೆ. ಹೀಗಾಗಿ ಸೆಲ್ಲರ್​ಗಳಲ್ಲಿ ಪಾರ್ಕಿಂಗ್​ಗೆ ಅವಕಾಶ ನೀಡುವುದು ಅನಿವಾರ್ಯ ಎಂದಿದ್ದಾರೆ. ಅಲ್ಲದೆ ಕೆಲವೊಂದು ಸೂಚನೆಗಳನ್ನ ಸಹ ನೀಡಿದ್ದಾರೆ.

ಸಭೆಯಲ್ಲಿ ನೀಡಲಾದ ಪ್ರಮುಖ ಸೂಚನೆಗಳು:

  • ಸೆಲ್ಲಾರ್ ಪಾರ್ಕಿಂಗ್ ಕಡ್ಡಾಯ: ದೀಪಾವಳಿಯೊಳಗೆ ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರು ಹಾಗೂ ರೋಗಿಗಳ ವಾಹನಗಳ ನಿಲುಗಡೆಗೆ ಆಸ್ಪತ್ರೆಯ ಆವರಣದಲ್ಲಿ ಅಥವಾ ಸೆಲ್ಲಾರ್‌ನಲ್ಲಿಯೇ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
  • ಮೀಸಲಿಟ್ಟ ಜಾಗದ ಸದ್ಬಳಕೆ: ಆಸ್ಪತ್ರೆ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನಕ್ಷೆಯಲ್ಲಿ ಪಾರ್ಕಿಂಗ್ ಉದ್ದೇಶಕ್ಕಾಗಿ ಮೀಸಲಿರಿಸಿದ ಸ್ಥಳವನ್ನು ಕಡ್ಡಾಯವಾಗಿ ವಾಹನಗಳ ನಿಲುಗಡೆಗೆ ಮಾತ್ರ ಬಳಸಬೇಕು.
  • ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ: ಪಾರ್ಕಿಂಗ್‌ಗೆಂದು ತೋರಿಸಿದ ಜಾಗವನ್ನು ಲ್ಯಾಬ್, ಔಷಧಾಲಯ ಅಥವಾ ಬೇರೆ ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಬಳಸಬಾರದು.
  • ಕಠಿಣ ಕಾನೂನು ಕ್ರಮ: ಈ ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುಗಮ ಸಂಚಾರಕ್ಕೆ ಸಹಕರಿಸಬೇಕು. ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ಆಡಳಿತ ಮಂಡಳಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor