ಶಿವಮೊಗ್ಗ : ಪ್ರಿಯಾಂಕ್​ ಖರ್ಗೆ ಗೃಹ ಖಾತೆ ಬಿಟ್ಟು ಮನೋರಂಜನೆಗೆ ಸಂಬಂಧಪಟ್ಟ ಇಲಾಖೆಯನ್ನು ತೆಗೆದುಕೊಳ್ಳಲಿ, ಕೆ ಎಸ್​ ಈಶ್ವರಪ್ಪ

ಹಂಚಿಕೊಳ್ಳಿ
WhatsApp Facebook X Telegram
ಪ್ರಿಯಾಂಕ್_ ಖರ್ಗೆ ಬಗ್ಗೆ ಕೆ ಎಸ್_ ಈಶ್ವರಪ್ಪ ಮಾತು
ಪ್ರಿಯಾಂಕ್_ ಖರ್ಗೆ ಬಗ್ಗೆ ಕೆ ಎಸ್_ ಈಶ್ವರಪ್ಪ ಮಾತು

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ :  ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಕೊಲೆ, ಅತ್ಯಾಚಾರದಂತಹ ಗಂಭೀರ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ವಿಷಯಗಳ ಬಗ್ಗೆ ಗಮನ ಹರಿಸುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು, ಗೃಹ ಖಾತೆ ಬಿಟ್ಟು ಮನೋರಂಜನೆಗೆ ಸಂಬಂಧಪಟ್ಟ ಇಲಾಖೆಯನ್ನು ತೆಗೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ ಭಯೋತ್ಪಾದಕರು ಇಲ್ಲಿದ್ದಾರೆ, ಅಲ್ಲಿದ್ದಾರೆ ಎಂಬ ವಿಚಾರಗಳು ಕೇಳಿಬರುತ್ತಿವೆ. ಆದರೆ ನಮ್ಮ ಗೃಹ ಮಂತ್ರಿಗಳು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅದನ್ನು ಬಿಟ್ಟು ಪ್ರತಿನಿತ್ಯ ಒಬ್ಬೊಬ್ಬರ ಬಗ್ಗೆ ಮಾತನಾಡುತ್ತಾ ಬರುತ್ತಿದ್ದಾರೆ. ಈ ಹಿಂದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದರು, ಆದರೆ ಈಗ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿಗೆ ಓಪನ್ ಹಾರ್ಟ್ ಸರ್ಜರಿ ಆಗುತ್ತದೆ ಎಂದಿದ್ದಾರೆ. ನಾನಿನ್ನು ಬಚ್ಚಾ ಇದ್ದೀನಿ, ಅಪ್ಪನ ಬೆಂಬಲದಿಂದ ಮಂತ್ರಿಯಾಗಿದ್ದೇನೆ ಎಂಬ ಕನಿಷ್ಠ ಜ್ಞಾನವೂ ಪ್ರಿಯಾಂಕ್ ಖರ್ಗೆಗೆ ಇಲ್ಲ. ರಾಜ್ಯದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ದರೋಡೆ, ಕೊಲೆ, ಕಳ್ಳತನ ಪ್ರಕರಣಗಳ ಬಗ್ಗೆ ಮಾತನಾಡುವ ಬದಲು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ, ಉಳಿದವರ ಬಗ್ಗೆ ಮಾತನಾಡಲು ಬೇರೆಯವರನ್ನು ಬಿಡಿ, ಗೃಹಮಂತ್ರಿಯಾಗಿ ಜವಾಬ್ದಾರಿಯಿಂದ ಮಾತನಾಡಿ, ಅದು ನಿಮಗೆ ಒಳ್ಳೆಯದು ಎಂದಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor