ಶಿವಮೊಗ್ಗ : ಜಮೀರ್ ಅಹಮದ್ ಬಗ್ಗೆ ಮಾತನಾಡುತ್ತೀರಾ, ಅದರ ಬಗ್ಗೆ ದಾಖಲೆ ಕೊಡುತ್ತೇವೆ? ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪರಿಗೆ ಬಂತು ಬೆದರಿಕೆ ಕರೆ: ರಕ್ಷಣೆಗೆ ಎಸ್.ಪಿಗೆ ಮನವಿ

ಹಂಚಿಕೊಳ್ಳಿ
WhatsApp Facebook X Telegram
ಬೆದರಿಕೆ ಕರೆ
ಬೆದರಿಕೆ ಕರೆ

ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ : ಈ ಹಿಂದೆ ವಿದೇಶಗಳಿಂದ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದ ಕೆ.ಎಸ್. ಈಶ್ವರಪ್ಪರಿಗೆ ಇದೀಗ ದೇಶದೊಳಗಿಂದಲೇ ಬೆದರಿಕೆ ಕರೆಗಳು ಬರಲು ಶುರುವಾಗಿವೆ. ನಿನ್ನೆ ಅಂದರೆ ಅಕ್ಟೋಬರ್ 17 ರಂದು ಇಬ್ಬರು ಮುಸ್ಲಿಂ ವ್ಯಕ್ತಿಗಳು ಮಾಜಿ ಡಿಸಿಎಂ ಈಶ್ವರಪ್ಪರಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಕರೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತಾಗಿ ಇಂದು ರಕ್ಷಣೆ ಒದಗಿಸುವಂತೆ ಎಸ್‌ಪಿ ನಿಖಿಲ್ ಬಿ. ರವರಿಗೆ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 17 ರಂದು ಇಬ್ಬರು ಮುಸ್ಲಿಂ ವ್ಯಕ್ತಿಗಳು ನನಗೆ ಕರೆ ಮಾಡಿ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡಿದ್ದಾರೆ. ಮೊದಲಿಗೆ ರಾತ್ರಿ 8:49 ರ ವೇಳೆಗೆ ರಿಜ್ವಾನ್ ಬೇಗ್ ಎನ್ನುವ ವ್ಯಕ್ತಿ ಕರೆ ಮಾಡಿದ್ದಾನೆ. ಆತ ಮಾತನಾಡುವ ರೀತಿ ನೋಡಿ ನಾನು ಅವನ ಬಳಿ ಒರಟಾಗಿ ಮಾತನಾಡಿದೆ. ಆತ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದವನು ಕಾಲ್ ಮಾಡಲೇ ಇಲ್ಲ.

ಇನ್ನೊಬ್ಬ ಡಿಜಿಟಲ್ ಫರಾನ್ ರಶೀದ್ ಎಂಬ ವ್ಯಕ್ತಿ ಸುಮಾರು 10:49 ರ ವೇಳೆಗೆ ಫೋನ್ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಾನು ನನ್ನ ಕುಟುಂಬದೊಂದಿಗೆ ಸಿನಿಮಾ ಟಾಕೀಸ್‌ನಲ್ಲಿ ಕೂತಿದ್ದೆ. ಆಗ ಫೋನ್ ಮಾಡಿ, ನೀವು ಈಶ್ವರಪ್ಪನವರಲ್ಲವಾ, ಮಾಜಿ ಡಿಸಿಎಂ ಅಲ್ವಾ? ಎಂದು ಕೇಳಿದ್ದಾನೆ. ಹೌದು ಎಂದಿದ್ದಕ್ಕೆ, ನೀವು ಈ ಹಿಂದೆ ಸಚಿವ ಜಮೀರ್ ಅಹಮದ್​ರವರ ಬಗ್ಗೆ ಏನೇನೋ ಮಾತನಾಡಿದ್ದೀರಿ, ನಮ್ಮ ಬಳಿ ದಾಖಲೆ ಇದೆ, ನಿಮಗೆ ಕಳುಹಿಸಿ ಕೊಡುತ್ತೇವೆ ಎಂದು ಹೇಳಿದ್ದಾನೆ. ಆತ ಜಮೀರ್ ಅಹಮದ್ ಪರ ಮಾತನಾಡಿದ್ದಾನೋ, ವಿರುದ್ಧ ಮಾತನಾಡಿದ್ದಾನೋ ಗೊತ್ತಿಲ್ಲ, ಒಬ್ಬ ಹಿಂದಿಯಲ್ಲಿ ಮಾತನಾಡಿದ್ದಾನೆ ಇನ್ನೊಬ್ಬ ಕನ್ನಡದಲ್ಲಿ ಮಾತನಾಡಿದ್ದಾನೆ, ಒಟ್ಟಿನಲ್ಲಿ ನನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಮಾತನಾಡಿದ್ದಾರೆ.. ಈ ಹಿನ್ನೆಲೆಯಲ್ಲಿ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor