ಮಲೆನಾಡು ಟುಡೆ ಸುದ್ದಿ / ಶಬರಿಮಲೆ / ಅಯ್ಯಪ್ಪನ ಕ್ಷೇತ್ರ ಶಬರಿಮಲೆ ಸನ್ನಿಧಾನದಲ್ಲಿ ಭಕ್ತರ ಅನುಕೂಲಕ್ಕಾಗಿ ಪ್ರತಿದಿನ ಆನ್ಲೈನ್ ಮೂಲಕ ಬುಕ್ಕಿಂಗ್ಗೆ ಲಭ್ಯವಾಗುವ ಕೊಠಡಿಗಳ ಸಂಖ್ಯೆಯನ್ನು 190ರಿಂದ 400ಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ದೇವಾಸ್ಥಾನದಿಂದಲೇ ಮಾಹಿತಿ ನೀಡಲಾಗಿದೆ.
- ಈ ಹಿಂದೆ ಆನ್ಲೈನ್ ಮೂಲಕ 190 ಕೊಠಡಿಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತಿತ್ತು. ಉಳಿದ ಕೊಠಡಿಗಳನ್ನು ಸನ್ನಿಧಾನದ ಅಕಾಮಡೇಷನ್ ಕೌಂಟರ್ನಲ್ಲಿ ನೇರವಾಗಿ ಭಕ್ತರಿಗೆ ನೀಡಲಾಗುತ್ತಿತ್ತು. ಇದೀಗ ಎಲ್ಲ 400 ಕೊಠಡಿಗಳನ್ನೂ ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
- ಆನ್ಲೈನ್ ಬುಕ್ಕಿಂಗ್ಗೆ ಲಭ್ಯವಾಗಿರುವ 400 ಕೊಠಡಿಗಳಲ್ಲಿ ಸದ್ಯ ಪ್ರೊಟೊಕಾಲ್ ಗೆಸ್ಟ್ ಹೌಸ್ ಆಗಿ ಬಳಸಲಾಗುತ್ತಿರುವ ‘ಶಬರಿ ಗೆಸ್ಟ್ ಹೌಸ್’ನ 10 ಕೊಠಡಿಗಳೂ ಸೇರಿವೆ.
- ತುಲಾಮಾಸದ ಪೂಜೆಗಳಿಗಾಗಿ ಆನ್ಲೈನ್ ಕೊಠಡಿ ಬುಕ್ಕಿಂಗ್ ಪ್ರಕ್ರಿಯೆ ಅಕ್ಟೋಬರ್ 7ರ ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡಿದೆ. ಭಕ್ತರು www.onlinetdb.com ಮೂಲಕ ಕೊಠಡಿಗಳನ್ನು ಬುಕ್ ಮಾಡಬಹುದು.
- ವೆಬ್ಸೈಟ್ನಲ್ಲಿ ಹೆಚ್ಚಿನ ದಟ್ಟಣೆಯಿಂದಾಗಿ ಬುಕ್ಕಿಂಗ್ ವಿಫಲವಾಗಿ, ಭಕ್ತರ ಖಾತೆಯಿಂದ ಹಣ ಕಡಿತಗೊಂಡಿದ್ದರೆ ಸಂಬಂಧಿಸಿದ ದಾಖಲೆಗಳೊಂದಿಗೆ [email protected]ಗೆ ದೂರು ಸಲ್ಲಿಸಬಹುದು.
