ಅ.11ರಿಂದ 21ರವರೆಗೆ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ

ಹಂಚಿಕೊಳ್ಳಿ
WhatsApp Facebook X Telegram
Sharannavaratri Festival in Shivamogga from October 11 to 21
Sharannavaratri Festival in Shivamogga from October 11 to 21

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಹೊಸಮನೆ ಬನಶಂಕರಿ ಬಡಾವಣೆಯ ಶ್ರೀ ಕಾಮಾಕ್ಷಿ ಪ್ರಸನ್ನ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಸಮಿತಿ ವತಿಯಿಂದ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಉತ್ಸವಕ್ಕೆ ಸಾಧುಶೆಟ್ಟಿ ಸಂಘ, ಕಾಮಾಕ್ಷಿ ರಸ್ತೆ, ಶಿವಮೊಗ್ಗದ ಸಂಪೂರ್ಣ ಸಹಕಾರವಿದೆ. ಶರನ್ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಶ್ರೀ ದೊಡ್ಡಮ್ಮ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಅರ್ಚನೆ ನಡೆಯಲಿದೆ.

ಇದರೊಂದಿಗೆ ಶ್ರೀಚಂಡಿಕಾ ಹೋಮ ಮತ್ತು ಸಪ್ತಶತಿ ಪಾರಾಯಣ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಪ್ರತಿದಿನ ಸಂಜೆ ಭಜನೆ ಕಾರ್ಯಕ್ರಮವೂ ನಡೆಯಲಿದೆ.

ಅಕ್ಟೋಬರ್ 11ರಂದು ಭಾನುವಾರ ಸಂಜೆ 6.30ರಿಂದ 6.45ರೊಳಗಿನ ಮೇಷ ಲಗ್ನದಲ್ಲಿ ಶ್ರೀದೇವಿಯನ್ನು ಪಟ್ಟಕ್ಕೆ ಕೂರಿಸಲಾಗುವುದು. ಅಕ್ಟೋಬರ್ 11ರಿಂದ 21ರವರೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್. ಉಮಾಪತಿ ಮನವಿ ಮಾಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor