ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ಸ್ಥಳೀಯ ಸುದ್ದಿಗಳನ್ನ ಒಳಗೊಂಡ ಇವತ್ತಿನ ಇ-ಪೇಪರ್ ಇಲ್ಲಿದೆ. ಇವತ್ತು ಮುಖ್ಯವಾಗಿ ಶಿವಮೊಗ್ಗದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಆಕ್ಷೇಪಿಸಿ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಸಭಾತ್ಯಾಗ ನಡೆಸಿದ ಘಟನೆಯು ಲೀಡ್ ಸುದ್ದಿಯಾಗಿ ವರದಿಮಾಡಲಾಗಿದೆ.
ಇತ್ತ ಶಿವಮೊಗ್ಗದ ದುರ್ಗಿಗುಡಿಯ ತನು ಜ್ಯೂಸ್ ಸೆಂಟರ್ ನಲ್ಲಿ ಕೊಳೆತ ಹಣ್ಣುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಳಿಗೆಯನ್ನು ಸೀಜ್ ಮಾಡಲಾಗಿದೆ. ತಿಲಕ್‌ನಗರದ ಮಾಂಸಾಹಾರಿ ಹೋಟೆಲ್‌ಗಳ ಮೇಲು ದಾಳಿ ನಡೆಸಲಾಗಿದ್ದು, ಎಚ್ಚರಿಕೆ ನೀಡಲಾಗಿದೆ.
ಅರಸಾಳು ಸಮೀಪ ರೈಲ್ವೆ ಹಳಿಯ ಮೇಲೆ ಮರ ಉರುಳಿದ ಪರಿಣಾಮ ತಾಳಗುಪ್ಪ–ಬೆಂಗಳೂರು ಎಕ್ಸ್‌ಪ್ರೆಸ್ ಮಾರ್ಗಮಧ್ಯೆ ನಿಂತ ಘಟನೆ ಬಗ್ಗೆ ವರದಿಯಾಗಿದೆ. ಇನ್ನಷ್ಟು ಸುದ್ದಿಗಳು ಇವತ್ತಿನ ಇ ಪತ್ರಿಕೆಯಲ್ಲಿದೆ.
ಮಲೆನಾಡು ಟುಡೆ ಪತ್ರಿಕೆಯ ಡೌನ್ಲೋಡ್ ಲಿಂಕ್ : ಇ ಪತ್ರಿಕೆ
