ಶಿವಮೊಗ್ಗ : ಮೀನುಮರಿ ಖರೀದಿಗೆ ಸಹಾಯಧನ : ಆನ್‌ಲೈನ್ ಅರ್ಜಿ ಆಹ್ವಾನ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮೀನುಗಾರಿಕೆ ಇಲಾಖೆಯು 2026-27ನೇ ಸಾಲಿನ ಜಿಲ್ಲಾ ವಲಯ ಮೀನುಗಾರಿಕೆ ಯೋಜನೆಯಡಿ ಮೀನುಮರಿ ಖರೀದಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

ಸ್ವಂತ ಕೊಳ/ಇಲಾಖೆಯಿಂದ ಗುತ್ತಿಗೆ/ ಹರಾಜಿನಲ್ಲಿ ಪಡೆದ ಕೆರೆಯಲ್ಲಿ ವೈಜ್ಞಾನಿಕವಾಗಿ ಮೀನುಮರಿ ಬಿತ್ತನೆ/ ಸ್ವಂತ ಕೊಳ ನಿರ್ಮಿಸಿಕೊಂಡು ಮೀನುಮರಿ ಪಾಲನೆಗೆ ಬಳಸಲು ಖರೀದಿಸಿದವರಿಗೆ ಮಾತ್ರ ಸಹಾಯಧನ ನೀಡಲಾಗುವುದು. ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್ ಯೋಜನೆಗಳ ಅಧಿಕೃತ ಪೋರ್ಟಲ್ https://shimoga.nic.in ಮುಖಾಂತರ ಆನ್‌ಲೈನ್‌ನಲ್ಲಿ ಸೆ. 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 

ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ- 9686939028, ಸಾಗರ -9538044365, ಸೊರಬ -9535386449, ತೀರ್ಥಹಳ್ಳಿ- 8655132438 ಇವರುಗಳನ್ನು ಸಂಪರ್ಕಿಸಬಹುದೆಂದು‌ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor