3 ವರ್ಷದ ಮಗುವಿನೊಂದಿಗೆ ಮನೆ ಬಿಟ್ಟ 23 ವರ್ಷದ ಹನುಮಂತಿ! ತಾಯಿ ಮಗುವಿನ ಸುಳಿವು ನೀಡಲು ಪೊಲೀಸರ ಮನವಿ

ಹಂಚಿಕೊಳ್ಳಿ
WhatsApp Facebook X Telegram
Mother and 3-Year-Old Son Missing From Soraba Police Seek Information

ಮಲೆನಾಡು ಟುಡೆ ಸುದ್ದಿ / ಸೊರಬ / (Police Seek Information) ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಎಣ್ಣೆಕೊಪ್ಪ ಗ್ರಾಮದ 23 ವರ್ಷದ ಹನುಮಂತಿ ಎಂಬ ಮಹಿಳೆ ತನ್ನ 3 ವರ್ಷದ ಗಂಡು ಮಗು ಭವಿತ್‌ನೊಂದಿಗೆ ಮನೆಯಿಂದ ತೆರಳಿದ್ದು, ಈವರೆಗೂ ವಾಪಸ್ ಆಗಿಲ್ಲ. ತಾಯಿ ಮತ್ತು ಮಗುವಿನ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.

ಪೊಲೀಸ್ ಪ್ರಕಟಣೆಯ ಮೂಲಕ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಹನುಮಂತಿ ಅವರು ಫೆಬ್ರವರಿ 26ರಂದು ತಮ್ಮ 3 ವರ್ಷದ ಮಗ ಭವಿತ್‌ನನ್ನು ಕರೆದುಕೊಂಡು ಮನೆಯಿಂದ ತೆರಳಿದ್ದರು. ಬಳಿಕ ಅವರು ಮನೆಗೆ ವಾಪಸ್ ಆಗಿಲ್ಲ . ಕಾಣೆಯಾಗಿರುವ ಹನುಮಂತಿ ಸುಮಾರು 5.6 ಅಡಿ ಎತ್ತರ, ತೆಳುವಾದ ಮೈಕಟ್ಟು ಹಾಗೂ ಗೋಧಿ ಮೈಬಣ್ಣ ಹೊಂದಿದ್ದಾರೆ.

ತಾಯಿ ಮತ್ತು ಮಗುವಿನ ಕುರಿತು ಯಾರಿಗಾದರೂ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ 08182-261413, ಶಿಕಾರಿಪುರ ಉಪವಿಭಾಗದ 08187-222443, ಸೊರಬ ವೃತ್ತದ 08184-272122 ಅಥವಾ 9480803339 ಹಾಗೂ ಆನವಟ್ಟಿ ಪೊಲೀಸ್ ಠಾಣೆಯ 08184-267135 ಅಥವಾ 9480803369 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor