ಶಿವಮೊಗ್ಗ: ಕಟೌಟ್ ಮೇಲೆ ಪ್ಯಾಲೆಸ್ಟೈನ್ ಬಾವುಟ ಹಾರಿಸಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್, ಮೂವರ ವಿರುದ್ಧ ಎಫ್‌ಐಆರ್

ಹಂಚಿಕೊಳ್ಳಿ
WhatsApp Facebook X Telegram
Shivamogga FIR Against 3 for Hoisting Palestine Flag
Shivamogga FIR Against 3 for Hoisting Palestine Flag

ಶಿವಮೊಗ್ಗ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದ ಆರ್.ಎಂ.ಎಲ್ ನಗರದಲ್ಲಿ ನಿರ್ಮಿಸುತ್ತಿದ್ದ ಕಟೌಟ್ ಒಂದರ ಮೇಲೆ ನಿಂತು ಬೇರೆ ದೇಶದ ಬಾವುಟ ಹಾರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮೂವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್​ ದಾಖಲಾಗಿದೆ. 

ಎಫ್​​​ ಐ ಆರ್​ನಲ್ಲಿ ಇರವಂತೆ ಆಗಸ್ಟ್ 25ರಂದು ಮಧ್ಯಾಹ್ನ ಆರ್.ಎಂ.ಎಲ್ ನಗರದಲ್ಲಿ ಪೊಲೀಸರು  ಗಸ್ತು ತಿರುಗುತ್ತಿದ್ದಾಗ ಲಭಿಸಿದ ಖಚಿತ ಮಾಹಿತಿ ಆಧರಿಸಿ ಇನ್‌ಸ್ಟಾಗ್ರಾಂ ಐಡಿ ಒಂದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇನ್ಸ್ಟಾಗ್ರಾಮ್​​​ ಖಾತೆಯೊಂದರಲ್ಲಿ Apna Ilakha Rml Nagar ಎಂಬ ಶೀರ್ಷಿಕೆ ಹಾಗೂ ಪ್ಯಾಲೆಸ್ಟೈನ್ ಬಾವುಟ ಮತ್ತು ಲವ್ ಸಿಂಬಲ್ ಬಳಸಿ ಶಿವಮೊಗ್ಗ ನಗರ ಭಾರತೀಯ ಸಭಾ ಭವನದ ಬಳಿ ನಿರ್ಮಿಸಲಾಗುತ್ತಿದ್ದ ಕಟೌಟ್ ಮೇಲೆ ಮೂವರು ವ್ಯಕ್ತಿಗಳು ಪ್ಯಾಲೆಸ್ಟೈನ್ ದೇಶದ ಧ್ವಜ ಹಾರಿಸುತ್ತಿರುವ 14 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಲಾಗಿತ್ತು. 

ಘಟನಾ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿದಾಗ, ಆಗಸ್ಟ್ 24ರ ಬೆಳಿಗ್ಗೆ 8.00 ರಿಂದ 9.00 ಗಂಟೆಯ ಅವಧಿಯಲ್ಲಿ ಆರ್.ಎಂ.ಎಲ್ ನಗರದ ನಿವಾಸಿಗಳಾದ  ಮೂವರು ವ್ಯಕ್ತಿಗಳು ಕಟೌಟ್ ಮೇಲೇರಿ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಭಾರತದಲ್ಲಿ ವಾಸವಿದ್ದು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತೆ ಮತ್ತು ಜನಾಂಗೀಯ, ಕೋಮುಗಳ ನಡುವೆ ವೈಮನಸ್ಸು ಹಾಗೂ ದ್ವೇಷ ಭಾವನೆ ಹುಟ್ಟುಹಾಕಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಉದ್ದೇಶದಿಂದ ಈ ವಿಡಿಯೋ ಹರಿಬಿಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕೃತ್ಯ ಎಸಗಿದ ಮೂವರ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor