ಶಿವಮೊಗ್ಗ : ತುಂಗಾ ಜಲಾಶಯದ ಒಳಹರಿವು ಕಳೆದ ವರ್ಷಕ್ಕಿಂತ ಹೆಚ್ಚಾಗಿದ್ಯ ಕಡಿಯೆಯಾಗಿದ್ಯ, ಎಷ್ಟಿದೆ ಇವತ್ತು?

ಹಂಚಿಕೊಳ್ಳಿ
WhatsApp Facebook X Telegram
Tunga Dam Water
Tunga Dam Water

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ ಮತ್ತು ಒಳಹರಿವು-ಹೊರಹರಿವಿನ ವಿವರಗಳು ಲಭ್ಯವಾಗಿವೆ. ಇವತ್ತು ಡ್ಯಾಮ್​ನ ಒಳಹರಿವು ಹಾಗೂ ಹೊರಹರಿವುಗಳ ಮಾಹಿತಿ ಈ ಕೆಳಗಿನಂತಿವೆ.  

ಜಲಾಶಯದ ಗರಿಷ್ಠ ನೀರಿನ ಮಟ್ಟ 588.24 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟವೂ 588.24 ಮೀಟರ್ ತಲುಪಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಹಾಗೂ ಲೈವ್ ಸಂಗ್ರಹ ಸಾಮರ್ಥ್ಯ 2.411 ಟಿಎಂಸಿ ಆಗಿದ್ದು, ಪ್ರಸ್ತುತ 0.829 ಟಿಎಂಸಿಯಷ್ಟು ಡೆಡ್ ಸ್ಟೋರೇಜ್ ಇದೆ.

ಇಂದು ಜಲಾಶಯಕ್ಕೆ ಒಟ್ಟು 12,577 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಬಂದಷ್ಟೇ 12,577 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಎಡದಂಡೆ ಕಾಲುವೆಗೆ 290 ಕ್ಯೂಸೆಕ್, ಬಲದಂಡೆ ಕಾಲುವೆಗೆ 121 ಕ್ಯೂಸೆಕ್ ಮತ್ತು ಕುಡಿಯುವ ನೀರಿನ ಪೂರೈಕೆಗೆ 35 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು, 20 ಕ್ಯೂಸೆಕ್ ನೀರು ಆವಿಯಾಗುತ್ತಿದೆ. 

ಕಳೆದ ವರ್ಷ (27.08.2025) ಇದೇ ದಿನ ಜಲಾಶಯದ ನೀರಿನ ಮಟ್ಟ 588.17 ಮೀಟರ್ ಇತ್ತು. ಒಟ್ಟು ಸಂಗ್ರಹ 3.194 ಟಿಎಂಸಿ ಮತ್ತು ಲೈವ್ ಸಂಗ್ರಹ 2.265 ಟಿಎಂಸಿ ಇತ್ತು. ಕಳೆದ ವರ್ಷ ಜಲಾಶಯಕ್ಕೆ 12,251 ಕ್ಯೂಸೆಕ್ ಒಳಹರಿವು ಹಾಗೂ 10,921 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು. ಈ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಡ್ಯಾಂನ ಒಳಹರಿವು ಸ್ವಲ್ಪ ಹೆಚ್ಚಿದೆ ಎಂದು ಹೇಳಬಹುದು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor