ಆಗಸ್ಟ್ 12 ರ ಸೂರ್ಯಗ್ರಹಣ: ಕರ್ಕಾಟಕ ರಾಶಿಯಲ್ಲಿ ಚತುರ್ಗ್ರಹ ಯೋಗ, ಈ ರಾಶಿಗಳಿಗೆ ಅದೃಷ್ಟ!

ಹಂಚಿಕೊಳ್ಳಿ
WhatsApp Facebook X Telegram
Surya Grahan August 2026 Chaturgrahi Yoga Brings Huge Benefits for Aries and Gemini
Surya Grahan August 2026 Chaturgrahi Yoga Brings Huge Benefits for Aries and Gemini

Chaturgrahi Yoga / ಮಲೆನಾಡು ಟುಡೆ ಸುದ್ದಿ / ಈ ವರ್ಷದ ಕೊನೆ ಸೂರ್ಯಗ್ರಹಣ ನಿನ್ನೆ ದಿನ ಅಂದರೆ 12 ಆಗಸ್ಟ್ 2026ರ ಶ್ರಾವಣ ಅಮಾವಾಸ್ಯೆ ಅಥವಾ ಹರಿಯಾಳಿ ಅಮಾವಾಸ್ಯೆ ಶುಭ ಸಂದರ್ಭದಲ್ಲಿ ಘಟಿಸಿದೆ. ವಿಶೇಷ ಅಂದರೆ ಈ ಗೃಹಣ ಫಲದಿಂದ ಚತುರ್ಗ್ರಹ ಯೋಗ ನಿರ್ಮಾಣವಾಗಿದ್ದು, ಇದರ ನೇರ ಪ್ರಭಾವ 12 ರಾಶಿಗಳ ಮೇಲಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ತಜ್ಞರ ಪ್ರಕಾರ, ಈ ಮಹಾಸಂಯೋಗ ಕೆಲವು ರಾಶಿಗಳಿಗೆ ಪ್ರಗತಿಯ ಹೊಸ ಬಾಗಿಲು ತೆರೆದರೆ, ಇನ್ನು ಕೆಲವು ರಾಶಿಗಳಿಗೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡುತ್ತದೆ.

ವೇದ ಪಂಚಾಂಗದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಆಕಾಶಮಂಡಲದಲ್ಲಿನ ಗ್ರಹಗಳ ಸ್ಥಾನವು ಅತ್ಯಂತ ವಿಶಿಷ್ಟವಾಗಿದೆ. ಕರ್ಕಾಟಕ ರಾಶಿ ಮತ್ತು ಆಶ್ಲೇಷಾ ನಕ್ಷತ್ರದಲ್ಲಿ ರೂಪುಗೊಂಡಿರುವ ಈ ಚತುರ್ಗ್ರಹ ಯೋಗವನ್ನ ಐತಿಹಾಸಿಕ ಎಂದು ಪರಿಗಣಿಸಲಾಗಿದೆ.

ಮೇಷ ರಾಶಿಯವರಿಗೆ ಈ ಯೋಗದಿಂದ ಉತ್ತಮ ಫಲವಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರಿ ಅಥವಾ ಕಾನೂನು ಸಂಬಂಧಿತ ಕೆಲಸ ತ್ವರಿತವಾಗಿ ಪೂರ್ಣಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಈ ರಾಶಿಯವರ ನಾಯಕತ್ವ ಗುಣಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಲಿದ್ದು, ಉನ್ನತ ಅಧಿಕಾರಿಗಳ ಸಂಪೂರ್ಣ ಸಹಕಾರ ದೊರೆಯಲಿದೆ. ಹೊಸ ವ್ಯವಹಾರ ಪ್ರಾರಂಭಿಸುವ ಆಲೋಚನೆಯಲ್ಲಿದ್ದರೆ, ಹೂಡಿಕೆ ಮಾಡಲು ಇದು ಅತ್ಯಂತ ಅನುಕೂಲಕರ ಸಮಯವಾಗಿದೆ.

ಅದೇ ರೀತಿ ಮಿಥುನ ರಾಶಿಯವರಿಗೂ ಈ ಮಹಾಸಂಯೋಗವು ಅದೃಷ್ಟ ತರಲಿದ್ದು, ಸಂಪತ್ತು ಮತ್ತು ಮಾತಿನ ಪ್ರಭಾವದಿಂದ ಭಾರಿ ಯಶಸ್ಸನ್ನು ತಂದುಕೊಡಲಿದೆ. ಈ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದ್ದು, ಮುಂಬರುವ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಅತ್ಯುತ್ತಮ ಪ್ರಗತಿಯನ್ನು ಕಾಣಲಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor