INFORMATION NEWS

40 ಸಾವಿರ ಗೌರವಧನದೊಂದಿಗೆ ಪ್ರತಿ ಶೈಕ್ಷಣಿಕ ಬ್ಲಾಕ್‌ಗೆ ಮಾನಸಿಕ ಕೌನ್ಸಿಲರ್ ನೇಮಕ! ವಿವರ ಹೀಗಿದೆ

Elephant Mahout Recruitment 2026
ಶೇರ್ ಮಾಡಿ WhatsApp Facebook X

Karnataka Education Dept / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯದ ಎಲ್ಲಾ ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಮಾನಸಿಕ ಆರೋಗ್ಯ ಸಲಹೆಗಾರರ ನೇಮಕ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ. ರಾಜ್ಯದ ಪ್ರತಿ ಬ್ಲಾಕ್ ಸಂಪನ್ಮೂಲ ಕೇಂದ್ರಕ್ಕೆ ಒಬ್ಬರಂತೆ ಸಮಾಲೋಚ ಕರನ್ನು ಕನ್ಸಲ್ಲೆಂಟ್ ಆಧಾರದ ಮೇರೆಗೆ ನೇಮಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳ ನಡುವೆ ವೈಯಕ್ತಿಕ ಹಾಗೂ ಗುಂಪು ಸಮಾಲೋಚನೆ ನಡೆಸುವುದು, ಪರೀಕ್ಷಾ ಒತ್ತಡ, ಆತಂಕ, ಭಾವನಾತ್ಮಕ ಸಮಸ್ಯೆಗಳು ಹಾಗೂ ಡಿಜಿಟಲ್ ಬಳಕೆಯ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸುವುದು, ದಾರಿ ತಪ್ಪುತ್ತಿರುವ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಮಾರ್ಗದರ್ಶನ ಅಥವಾ ಆರೋಗ್ಯ ಇಲಾಖೆಯ ತಜ್ಞರಿಗೆ ಶಿಫಾರಸು ಮಾಡುವುದು, ಮಕ್ಕಳ ಮೌನವನ್ನು ಅರಿಯುವುದು ಸಮಾಲೋಚಕರ ಕರ್ತವ್ಯವಾಗಿರಲಿದೆ.

ನಿಯಮ ಮತ್ತು ಮಾಹಿತಿ

ಈ ಸಮಾಲೋಚಕರ ಸೇವೆಯು ಒಂದು ಶೈಕ್ಷಣಿಕ ವರ್ಷದಲ್ಲಿ ಆರು ತಿಂಗಳವರೆಗೆ ಇರಲಿದ್ದು, ಪ್ರತಿಯೊಬ್ಬ ಸಮಾಲೋಚಕರಿಗೆ ಮಾಸಿಕ 40,000 ರೂ ಗೌರವಧನ ಹಾಗೂ 10,000 ರೂ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ.

ಅಭ್ಯರ್ಥಿಗಳು ಮನೋವಿಜ್ಞಾನ, ಕ್ಲಿನಿಕಲ್ ಮನೋವಿಜ್ಞಾನ, ಕೌನ್ಸೆಲಿಂಗ್ ಮನೋವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಎಂ.ಎ./ಎಂ.ಎಸ್ಸಿ ಪದವಿ ಪಡೆದಿರಬೇಕು. ಜೊತೆಗೆ ಮನೋವೈದ್ಯಕೀಯ ಕ್ಷೇತ್ರದಲ್ಲಿ ಕನಿಷ್ಟ ಒಂದು ವರ್ಷದ ಅನುಭವ ಹಾಗೂ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ.

ಜಿಪಂ ಸಿಇಒ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚನೆಯಾಗಲಿದ್ದು, ಜಿಲ್ಲಾ ಮಟ್ಟದಲ್ಲಿ ತಾಲೂಕುವಾರು ಅರ್ಜಿಗಳನ್ನು ಆಹ್ವಾನಿಸಿ ಅರ್ಹ ಅರ್ಜಿಗಳನ್ನು 1:5ರ ಅನುಪಾತದಲ್ಲಿ ಆಯ್ಕೆ ಮಾಡಿ ಸಂದರ್ಶನ ನಡೆಸಿ ತಾಲೂಕಿಗೆ ಒಬ್ಬರಂತೆ ಆಯ್ಕೆ ಮಾಡಬೇಕು. ನೇಮಕಾತಿ ಪ್ರಕ್ರಿಯೆಯನ್ನು ಆ.20ರೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.

ವಿಷಯಗಳು:
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor