BJP Study Team / ಮಲೆನಾಡು ಟುಡೆ ಸುದ್ದಿ / ಹಾಸನ / ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದ ತಂಡ ಹಾಸನ ಜಿಲ್ಲೆಗೆ ಭೇಟಿಕೊಟ್ಟಿದೆ. ಶಿವಮೊಗ್ಗ ಶಾಸಕರು ಸೇರಿದಂತೆ ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ಬೇಲೂರು ಶಾಸಕ ಎಚ್.ಕೆ. ಸುರೇಶ್, ಹಾಸನ ಬಿಜೆಪಿ…
BJP Study Team / ಮಲೆನಾಡು ಟುಡೆ ಸುದ್ದಿ / ಹಾಸನ / ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದ ತಂಡ ಹಾಸನ ಜಿಲ್ಲೆಗೆ ಭೇಟಿಕೊಟ್ಟಿದೆ. ಶಿವಮೊಗ್ಗ ಶಾಸಕರು ಸೇರಿದಂತೆ ಕಾರ್ಕಳ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ಬೇಲೂರು ಶಾಸಕ ಎಚ್.ಕೆ. ಸುರೇಶ್, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಹಾಸನ ರೈತ ಮೋರ್ಚಾ ಜಿಲ್ಲಾಧ್ಯಕ್ಷನಾರಾಯಣ ಗೌಡರವನ್ನು ಒಳಗೊಂಡ ಈ ತಂಡ ಬರ ಅಧ್ಯಯನ ಪ್ರವಾಸ ಕೈಗೊಂಡಿದೆ.
ಹಾಸನ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಬರ ಪರಿಸ್ಥಿತಿಯ ಪರಿಶೀಲನೆ ಡೆಸಿದ ತಂಡ ರೈತರ ಕಷ್ಟ-ನಷ್ಟಗಳನ್ನು ಖುದ್ದಾಗಿ ಆಲಿಸಿದರು. ಕೃಷಿ ಚಟುವಟಿಕೆಗಳಾದ ಬಿತ್ತನೆಯ ಪ್ರಗತಿ, ಕುಡಿಯುವ ನೀರಿನ ಲಭ್ಯತೆ, ಸಾರ್ವಜನಿಕರು ಹಾಗೂ ಜಾನುವಾರು ಎದುರಿಸುತ್ತಿರುವ ಸಂಕಷ್ಟದ ಮಾಹಿತ ಪಡೆದರು ಅಲ್ಲದೆ ಅಣೆಕಟ್ಟುಗಳು ಹಾಗೂ ಕೆರೆ-ಕಟ್ಟೆಗಳಲ್ಲಿನ ಪ್ರಸ್ತುತ ನೀರಿನ ಮಟ್ಟ ದ ವಿವರವನ್ನ ಪಡೆದರು.
ಈ ವೇಳೆ ರಾಜ್ಯದ ನೈಜ ಬರ ಪರಿಸ್ಥಿತಿಯ ಕುರಿತಾದ ಸಮಗ್ರ ವರದಿಯನ್ನು ಸರ್ಕಾರದ ಗಮನಕ್ಕೆ ತಂದು, ರೈತರು ಹಾಗೂ ಜನಸಾಮಾನ್ಯರಿಗೆ ಅಗತ್ಯವಾದ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
