Chaturmasya Vrata / ಮಲೆನಾಡು ಟುಡೆ ಸುದ್ದಿ / ಸಾಗರ / ನಗರದ ಇಕ್ಕೇರಿ ರಸ್ತೆಯಲ್ಲಿರುವ ದೈವಜ್ಞ ಬ್ರಾಹ್ಮಣ ಸಭಾ ಭವನದಲ್ಲಿ ಜುಲೈ 29 ರಿಂದ ಸೆಪ್ಟೆಂಬರ್ 26 ರವರೆಗೆ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರಿ ಭಾರತೀ ಸ್ವಾಮೀಜಿ ಅವರು ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದಾರೆ. ಜುಲೈ 29 ರಂದು…
Chaturmasya Vrata / ಮಲೆನಾಡು ಟುಡೆ ಸುದ್ದಿ / ಸಾಗರ / ನಗರದ ಇಕ್ಕೇರಿ ರಸ್ತೆಯಲ್ಲಿರುವ ದೈವಜ್ಞ ಬ್ರಾಹ್ಮಣ ಸಭಾ ಭವನದಲ್ಲಿ ಜುಲೈ 29 ರಿಂದ ಸೆಪ್ಟೆಂಬರ್ 26 ರವರೆಗೆ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರಿ ಭಾರತೀ ಸ್ವಾಮೀಜಿ ಅವರು ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲಿದ್ದಾರೆ.
- ಜುಲೈ 29 ರಂದು ಅಂದರೆ ಇಂದು ಬೆಳಿಗ್ಗೆ 10 ಗಂಟೆಗೆ ಗುರುಪೂರ್ಣಿಮೆ ಕಾರ್ಯಕ್ರಮದ ಅಂಗವಾಗಿ ವ್ಯಾಸಪೂಜೆಯು ನಡೆದಿದೆ. ತದನಂತರ ಚಾತುರ್ಮಾಸ್ಯ ವ್ರತೋತ್ಸವ ಸಮಿತಿಯ ವತಿಯಿಂದ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ ಹಾಗೂ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮಗಳು ನಡೆದವು.
- ಇನ್ನೂ ಜುಲೈ 30 ರಿಂದ ಪ್ರತಿದಿನವೂ ಬೆಳಿಗ್ಗೆ 10:30 ರಿಂದ ಸಾಮೂಹಿಕ ಪಾದುಕಾ ಪೂಜೆ ಹಾಗೂ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
- ಮಧ್ಯಾಹ್ನ 12:30 ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ ನಡೆಯಲಿದೆ ಹಾಗೂ ಸಂಜೆ 6 ರಿಂದ 7:30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
- ಬಳಿಕ 7:30 ಕ್ಕೆ ಮಹಾಮಂಗಳಾರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್ 26 ರಂದು ಬೆಳಿಗ್ಗೆ 8 ಗಂಟೆಗೆ ಚಾತುರ್ಮಾಸ್ಯದ ಸೀಮೋಲ್ಲಂಘನ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ.
ಈ ಸಂಪೂರ್ಣ ಚಾತುರ್ಮಾಸ್ಯ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ ಮೋಹನ್ ಶೇಟ್, ಅಧ್ಯಕ್ಷ ಅರುಣಕುಮಾರ್ ಎಂ.ಎಸ್. ಮತ್ತು ಕಾರ್ಯಾಧ್ಯಕ್ಷ ಮಂಜುನಾಥ ವಿ. ವರ್ಣೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
