112 emergency helpline / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತುರ್ತು ಸಂದರ್ಭ ಜೀವನದಲ್ಲಿ ಯಾವಾಗ ಎದುರಾಗುತ್ತೋ ಹೇಳಕಾಗದು. ಆದರೂ ಎಮರ್ಜೆನ್ಸಿ ಅನ್ನುವ ಪದವನ್ನು ಮಾತ್ರ ನಾವೆಲ್ಲಾ ಧಾರಾಳವಾಗಿ ಬಳಸುತ್ತೇವೆ ಹೊರತಾಗಿ, ಎಮರ್ಜೆನ್ಸಿಗೆ ಬೇಕಾದ ಸಿದ್ಧತೆಗಳನ್ನ ಅಥವಾ ಅನಿವಾರ್ಯ ಅವಶ್ಯಕತೆಗಳನ್ನ ಪೂರ್ಣ ಮಾಡಿರುವುದಿಲ್ಲ. ತುರ್ತುಪರಿಸ್ಥಿತಿಯ ಅಂತಹ ವ್ಯವಸ್ಥೆ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ…
112 emergency helpline / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತುರ್ತು ಸಂದರ್ಭ ಜೀವನದಲ್ಲಿ ಯಾವಾಗ ಎದುರಾಗುತ್ತೋ ಹೇಳಕಾಗದು. ಆದರೂ ಎಮರ್ಜೆನ್ಸಿ ಅನ್ನುವ ಪದವನ್ನು ಮಾತ್ರ ನಾವೆಲ್ಲಾ ಧಾರಾಳವಾಗಿ ಬಳಸುತ್ತೇವೆ ಹೊರತಾಗಿ, ಎಮರ್ಜೆನ್ಸಿಗೆ ಬೇಕಾದ ಸಿದ್ಧತೆಗಳನ್ನ ಅಥವಾ ಅನಿವಾರ್ಯ ಅವಶ್ಯಕತೆಗಳನ್ನ ಪೂರ್ಣ ಮಾಡಿರುವುದಿಲ್ಲ. ತುರ್ತುಪರಿಸ್ಥಿತಿಯ ಅಂತಹ ವ್ಯವಸ್ಥೆ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಪೊಲೀಸ್ ಇಲಾಖೇ ಮಾರ್ಗದರ್ಶನ ನೀಢುತ್ತಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಈ ನಡುವೆ ಜನರ ನಡುವೆ ಜಾಗೃತಿಯನ್ನ ಮೇನ್ ಅಜೆಂಡಾ ಆಗಿಸಿಕೊಂಡಿದೆ. ಜನಸ್ನೇಹಿಗಿಂತಲೂ ಜನಮನ ಮುಟ್ಟುವುದು ವಿಷಯ ಮುಟ್ಟಿಸುವುದು ಅನಿವಾರ್ಯ ಎಂದುಕೊಂಡಿರುವ ಪೊಲೀಸ್ ಇಲಾಖೆ ಪ್ರತಿಯೊಂದು ಸೂಕ್ಷ್ಮಗಳಿಗೂ ಸಂಬಂಧಿಸಿದಂತೆ ಪ್ರಚಾರ ನೀಡಿ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಇದೀಗ ತುರ್ತು ಪರಿಸ್ಥಿತಿಯ ಸಂದರ್ಭಕ್ಕೆ ಪೂರಕವಾಗಿ ಹೇಗೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದನ್ನ ವಿವರಿಸಿದೆ.
ಪ್ರತಿಯೊಬ್ಬರ ಕೈಯಲ್ಲಿರುವ ಸ್ಮಾರ್ಟ್ ಫೋನ್ ಕೇವಲ ಸಂವಹನಕ್ಕೆ ಮಾತ್ರವಲ್ಲದೆ, ಆಪತ್ಕಾಲದಲ್ಲಿ ಜೀವ ಉಳಿಸಬಲ್ಲದು. ಇದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ವಿಸ್ತೃತವಾದ ಮಾಹಿತಿಯನ್ನು ಪೊಲೀಸ್ ಇಲಾಖೆ ಜಾಗೃತಿ ಪೋಸ್ಟರ್ ಮೂಲಕ ಹಂಚಿಕೊಂಢಿದೆ. ಈ ಪೋಸ್ಟರ್ನ ಮೂಲಕ
ಅಪಾಯದಲ್ಲಿರುವ ಯಾವುದೇ ವ್ಯಕ್ತಿ ತಕ್ಷಣವೇ ಪೊಲೀಸ್ ಸಹಾಯವನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ 112 ತುರ್ತು ಸಹಾಯವಾಣಿಗೆ ಕರೆ ಮಾಡುವ ಅತ್ಯಂತ ಸುಲಭವಾದ ವಿಧಾನವನ್ನು ಪರಿಚಯಿಸಿದೆ. ಈ ಬಗ್ಗೆ ಪ್ರತಿಯೊಬ್ಬ ಸಾರ್ವಜನಿಕರೂ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಮತ್ತದ ವಿವರ ಹೀಗಿದೆ.
ಅನಿರೀಕ್ಷಿತ ತುರ್ತು ಪರಿಸ್ಥಿತಿ ಎದುರಾದಾಗ, ಆತಂಕಕ್ಕೆಗೊಳಗಾಗುವ ಸಂತ್ರಸ್ತರು ತಮ್ಮ ಮೊಬೈಲ್ ಫೋನ್ ಅನ್ಲಾಕ್ ಮಾಡಿ, ನಂಬರ್ ಟೈಪ್ ಮಾಡಿ ಕರೆ ಮಾಡುವಷ್ಟು ಸಮಯಾವಕಾಶ ಹೊಂದಿರುವುದಿಲ್ಲ ಮತ್ತು ಆ ಟೈಂನಲ್ಲಿ ಅದು ಹೊಳೆಯುವುದು ಸಹ ಕಷ್ಟ ಹಾಗಾಗಿ ಸಂತ್ರಸ್ತರು ನೆರವಿಗಾಗಿ ಕರೆ ಮಾಡಲು ತಮ್ಮ ಸ್ಮಾರ್ಟ್ ಫೋನ್‌ನ ಪವರ್ ಬಟನ್ (Power Button) ಅನ್ನು ಸತತವಾಗಿ 3 ಬಾರಿ ಒತ್ತಿದರೆ ಸಾಕು.
3 ಬಾರಿ ನಿರಂತರವಾಗಿ ಪವರ್ ಬಟನ್ ಪ್ರೆಸ್ ಮಾಡುವುದರಿಂದ, ಆ ಕರೆಯು ನೇರವಾಗಿ 112 ತುರ್ತು ಸಹಾಯವಾಣಿಗೆ ಸಂಪರ್ಕಗೊಳ್ಳುತ್ತದೆ (Connect ಆಗುತ್ತದೆ). ಇದರಿಂದಾಗಿ ಪೊಲೀಸ್ ಇಲಾಖೆಯ ನಿಯಂತ್ರಣ ಕೊಠಡಿಗೆ ತಕ್ಷಣವೇ ಮಾಹಿತಿ ರವಾನೆಯಾಗಿ, ಅಪಾಯದಲ್ಲಿರುವವರಿಗೆ ಅತಿ ವೇಗವಾಗಿ ರಕ್ಷಣೆಯನ್ನು ಒದಗಿಸಲು ಸಾಧ್ಯವಾಗುತ್ತದೆ
ಆದರೆ, ಈ ರಕ್ಷಣಾ ವ್ಯವಸ್ಥೆ ಕೆಲಸ ಮಾಡಬೇಕಾದರೆ, ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಕೆಲವು ಸೆಟ್ಟಿಂಗ್ಸ್‌ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ, ಮೊಬೈಲ್‌ನ ಸೆಟ್ಟಿಂಗ್ಸ್ (Settings) ವಿಭಾಗಕ್ಕೆ ಹೋಗಬೇಕು. ಅಲ್ಲಿ ಸೇಫ್ಟಿ ಅಂಡ್ ಎಮರ್ಜೆನ್ಸಿ (Safety & Emergency) ಎಂಬ ಆಯ್ಕೆಯನ್ನು ಹುಡುಕಿ ತೆರೆದು, ನಂತರ ಎಮರ್ಜೆನ್ಸಿ ಎಸ್‌ಓಎಸ್ (Emergency SOS) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈ ಎಮರ್ಜೆನ್ಸಿ ಎಸ್‌ಓಎಸ್ ಆಯ್ಕೆಯನ್ನು ಆನ್ (ON) ಮಾಡಲಾಗಿದೆಯೇ ಎಂಬುದನ್ನು ಮೊಬೈಲ್ ಬಳಕೆದಾರರೂ ಖಚಿತಪಡಿಸಿಕೊಳ್ಳಬೇಕು. ಇದು ಆನ್ ಆಗಿದ್ದರೆ ಮಾತ್ರ ತುರ್ತು ಸಂದರ್ಭದಲ್ಲಿ ಪವರ್ ಬಟನ್ ಕಾರ್ಯನಿರ್ವಹಿಸುತ್ತದೆ.
ಇದರ ಜೊತೆಗೆ ಮತ್ತೊಂದು ಅತಿ ಮುಖ್ಯವಾದ ಸಲಹೆ ಏನಂದರೆ, ತುರ್ತು ಸಂಪರ್ಕಗಳನ್ನು (Emergency Contacts) ಕಡ್ಡಾಯವಾಗಿ ಸೇರಿಸುವುದು ಉತ್ತಮ ಮೊಬೈಲ್‌ನ ತುರ್ತು ಸಂಪರ್ಕ ಪಟ್ಟಿಯಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರು ಅತ್ಯಂತ ನಂಬುವಂತಹ ಆಪ್ತರ, ಕುಟುಂಬದ ಸದಸ್ಯರ ಅಥವಾ ಹತ್ತಿರದ ಸಂಬಂಧಿಕರ ನಂಬರ್ ಅನ್ನು ಕಡ್ಡಾಯವಾಗಿ ಸೇರಿಸಬೇಕು. ಹೀಗೆ ಮಾಡುವುದರಿಂದ, ತುರ್ತು ಪರಿಸ್ಥಿತಿಯಲ್ಲಿ ಪವರ್ ಬಟನ್ ಒತ್ತಿದಾಗ ಕೇವಲ 112 ಸಹಾಯವಾಣಿಗೆ ಮಾತ್ರ ಕರೆ ಹೋಗುವುದಿಲ್ಲ, ಬದಲಾಗಿ ಆಪ್ತರಿಗೂ ಸಹ ಸಂದೇಶ ರವಾನೆಯಾಗುತ್ತದೆ.
ರಾತ್ರಿ ವೇಳೆ ಒಂಟಿಯಾಗಿ ಪ್ರಯಾಣಿಸುವಾಗ, ಅಪರಿಚಿತ ಸ್ಥಳಗಳಲ್ಲಿ ಇರುವಾಗ, ಅಪಘಾತ ಸಂಭವಿಸಿದಾಗ ಅಥವಾ ಜೀವಬೆದರಿಕೆ ಎದುರಾದಾಗ ಈ 112 ಎಸ್‌ಓಎಸ್ ಫೀಚರ್ ಅತಿ ಹೆಚ್ಚು ಉಪಯುಕ್ತವಾಗಲಿದೆ. ಕೇವಲ ಒಂದು ಸಣ್ಣ ತಂತ್ರಜ್ಞಾನದ ಅರಿವು ನಮ್ಮ ಹಾಗೂ ನಮ್ಮ ಪ್ರೀತಿಪಾತ್ರರ ಜೀವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಪ್ರತಿಯೊಬ್ಬ ಪೋಷಕರೂ ತಮ್ಮ ಮನೆಯಲ್ಲಿರುವ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ವಯೋವೃದ್ಧರಿಗೆ ಈ ತುರ್ತು ರಕ್ಷಣಾ ವ್ಯವಸ್ಥೆಯ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು ಎಂದು ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.
ಹಾಗೆ ಇನ್ನೊಂದು ಮಾತು ಈ ತುರ್ತು ಕರೆಗಳ ಸೌಲಭ್ಯ ಜೀವ ಉಳಿಸಲು ಮಾತ್ರ ಎಸ್‌ಓಎಸ್ (SOS) ನ್ನ ಸುಖಾಸುಮ್ಮನೆ, ಕಾರಣವಿಲ್ಲದೆ ಅಥವಾ ತಮಾಷೆಗಾಗಿ ಬಳಸಬಾರದು. ಅದರಿಂದ ಇನ್ನೊಂದು ಜೀವ ಉಳಿಸಬಹುದಾದ ಪೊಲೀಸ್ ಇಲಾಖೆಯ ಸಮಯ ವ್ಯರ್ಥವಾಗುತ್ತದೆ.
